15 ಲಕ್ಷ ವೆಚ್ಚದಲ್ಲಿ ‘ಮಾಸ್ತಿಗುಡಿ’ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

masti--gudi

ಹ್ಯಾಟ್ರಿಕ್ ನಿರ್ದೇಶಕ ನಾಗಶೇಖರ್ ಅವರ ಹೊಸ ಬಗೆಯ ಸಾಹಸಮಯ ಚಿತ್ರ ಮಾಸ್ತಿ ಗುಡಿ ಇದೀಗ ಕಂಠೀರವ ಸ್ಟುಡಿಯೋದಲ್ಲಿ ಅರಣ್ಯದ ಒಳ ಭಾಗದ ಸೆಟ್ ಹಾಕಿ 15 ಲಕ್ಷದ ವೆಚ್ಚದಲ್ಲಿ ಭರ್ಜರಿ ಸಾಹಸ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗಿದೆ.ದುನಿಯಾ ವಿಜಯ್ ಹಾಗೂ ಅಮೂಲ್ಯ ಅವರ ಮೊದಲ ಸಮಾಗಮದ ಮಾಸ್ತಿ ಗುಡಿಅರಣ್ಯದ ಸಂಪತ್ತಿನ ನಾಶದ ಬಗ್ಗೆ ಅಲ್ಲದೆ ನಮ್ಮ ಪರಿಸರದಲ್ಲಿ ಹುಲಿ ಸಂತತಿ ಕಡಿಮೆ ಆಗುತ್ತಿರುವುದರ ಬಗ್ಗೆ ಬೆಳಕು ಚೆಲ್ಲಲಿದೆ.

ಅರಣ್ಯದಲ್ಲಿ ವಾಸವಾಗುವ ಹುಲಿ ನಮ್ಮ ಸಾಮಾಜಿಕ ಜೀವನಕ್ಕೆ ಹೇಗೆ ಸಂಬಂಧ ಪಡುವುದು ಎಂಬ ಹೊಸ ಆಲೋಚನೆ ಸಹ ನಿರ್ದೇಶಕ ನಾಗಶೇಖರ್ ಅವರ ಅಧ್ಯಯನದ ತಂಡದಿಂದ ತಿಳಿದು ಬಂದಿದೆ. ಈ ಚಿತ್ರದಲ್ಲಿ ರಂಗಾಯಣ ರಘು, ಶ್ರೀನಿವಾಸಮೂರ್ತಿ ಅವರಿಗೆ ವಿಶೇಷ ಬಗೆಯ ಮೇಕಪ್ ಮಾಡಲಾಗಿದೆ.ಕವಿರಾಜ್ ಅವರ ಗೀತ ಸಾಹಿತ್ಯಕ್ಕೆ ಸಾಧು ಕೋಕಿಲ ಸಂಗೀತ ಒದಗಿಸಿದ್ದಾರೆ.ಕೆಪಿಎಸ್ ಕಂಬೈನ್ಸ್ ಅಡಿಯಲ್ಲಿ ಸುಂದರ್ ಗೌಡ್ರು ಹಾಗೂ ಅನಿಲ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ, ಜೋನಿ ಹರ್ಷ ಸಂಕಲನ, ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಇದೆ.

► Follow us on –  Facebook / Twitter  / Google+

Facebook Comments

Sri Raghav

Admin