ಥೈಲೆಂಡ್‍ನಲ್ಲಿ ಮುಸ್ಲಿಂ ಬಂಡುಕೋರರ ದಾಳಿ, 15 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಬ್ಯಾಂಕಾಂಕ್, ನ.5 (ಪಿಟಿಐ)- ಥೈಲೆಂಡ್‍ನ ಹಿಂಸಾಚಾರ ಪೀಡಿತ ದಕ್ಷಿಣ ಪ್ರಾಂತ್ಯದಲ್ಲಿ ಮುಸ್ಲಿಂ ಬಂಡುಕೋರರ ದಾಳಿಯಿಂದ ಕನಿಷ್ಠ 15 ಮಂದಿ ಮೃತಪಟ್ಟು, ಇತರ ನಾಲ್ವರು ತೀವ್ರ ಗಾಯಗೊಂಡಿದ್ದಾರೆ.

ನಾಗರಿಕ ರಕ್ಷಣಾ ಕಾರ್ಯಕರ್ತರು ಪಹರೆಯಲ್ಲಿದ್ದ ಯಾಲಾ ಪ್ರಾಂತ್ಯದ ಎರಡು ಚೆಕ್‍ಫೋಸ್ಟ್‍ಗಳ ಮೇಲೆ ಬಂಡುಕೋರರು ದಾಳಿ ನಡೆಸಿ ಗುಂಡು ಹಾರಿಸಿ ಈ ನರಮೇಧ ನಡೆಸಿದರು ಎಂದು ಸೇನಾ ವಕ್ತಾರ ಪ್ರಾಮೋಟೆ ಪ್ರೊಮಿನ್ ತಿಳಿಸಿದ್ದಾರೆ.

ಈ ವಿಧ್ವಂಸಕ ಕೃತ್ಯದಲ್ಲಿ ಕನಿಷ್ಠ 15 ಮಂದಿ ಹತರಾಗಿ, ನಾಲ್ವರು ತೀವ್ರ ಗಾಯಗೊಂಡಿದ್ದಾರೆ.  ದೇಶದ ದಕ್ಷಿಣ ಭಾಗದಲ್ಲಿ ಮಲೈ ಮಸ್ಲಿಂ ಉಗ್ರರು ತೀವ್ರ ಪ್ರಾಬಲ್ಯ ಹೊಂದಿದ್ದು, ಕಳದ 15 ವರ್ಷಗಳಲ್ಲಿ ಈ ಪ್ರಾಂತ್ಯದ ವಿವಿಧೆಡೆ ನಡದ ಹಿಂಸಾಚಾರದಲ್ಲಿ 5,000ಕ್ಕೂ ಹೆಚ್ಚು ಮಂದಿ ಹತರಾಗಿ ಅನೇಕರು ಗಾಯಗೊಂಡಿದ್ದಾರೆ.

ಮಲೇಷ್ಯಾ ಗಡಿಭಾಗದಲ್ಲಿರುವ ಈ ಪ್ರದೇಶದ ಸ್ವಾಯತ್ತತೆ ಮತ್ತು ಪ್ರತ್ಯೇಕತೆಗಾಗಿ ಮಲೈ ಮುಸ್ಲಿಂ ಬಂಡುಕೋರರು ಒತ್ತಾಯಿಸುತ್ತಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗೆ ಹಿಂಸಾತ್ಮಕ ಮಾರ್ಗಗಳನ್ನು ಅನುಸರಿಸುತ್ತ ಅಪಾರ ಸಾವು-ನೋವಿಗೆ ಕಾರಣರಾಗಿದ್ದಾರೆ.

Facebook Comments