ಮಧ್ಯ ಪ್ರದೇಶದ 15 ಜಿಲ್ಲೆಗಳಲ್ಲಿ ಬೆಳೆಗಳ ಮೇಲೆ ಮಿಡತೆಗಳ ದಾಳಿ..!

ಈ ಸುದ್ದಿಯನ್ನು ಶೇರ್ ಮಾಡಿ

ಭೂಪಾಲ್, ಮೇ 23-ಮಧ್ಯ ಪ್ರದೇಶದ 15 ಜಿಲ್ಲೆಗಳ ವಿವಿಧ ಗ್ರಾಮಗಳ ಮೇಲೆ ದಾಳಿ ಮಾಡಿದ್ದ ಲಕ್ಷಾಂತರ ಮಿಡತೆಗಳಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಕಳೆದ ಮೂರು ದಿನಗಳಿಂದ ಈ ಜಿಲ್ಲೆಗಳ ಗ್ರಾಮಗಳ ಮೇಲೆ ಮರುಭೂಮಿ ಮಿಡತೆ ಜಾತಿಯ ಲಕ್ಷಾಂತರ ಗಿಡಗಳು ಏಕಕಾಲದಲ್ಲಿ ದಾಳಿ ಮಾಡಿದ್ದು, ಲಕ್ಷಾಂತರ ರೂ. ಬೆಳೆ ಹಾನಿಯಾಗಿದೆ.

ಉಜ್ಜೈನಿ, ಪನ್‍ಬಿಹಾರ್, ಅಗರ್, ಮಾಲ್ವಾ, ನಿಮುಚ್, ಹನುಮಾಂಟಿಯಾ, ಗುರ್ಜರ್ ಖೇಡಿಯ, ನಯಾಗಾಂವ್ ಮೊದಲಾದ ಜಿಲ್ಲೆಗಳ ಮರ-ಗಿಡಗಳು ಮತ್ತು ಬೆಳೆಗಳ ಮೇಲೆ ದಾಳಿ ಮಾಡಿರುವ ಕೀಟಗಳು ಅವುಗಳನ್ನು ಭಕ್ಷಿಸಿ ಬರಿದು ಮಾಡಿವೆ.

ಪ್ರತಿ ವರ್ಷ ಈ ಜಾತಿಯ ಮಿಡತೆಗಳು ಮಧ್ಯ ಪ್ರದೇಶದ ಮೇಲೆ ದಾಳಿ ಮಾಡುತ್ತಿದ್ದು, ಈ ಬಾರಿಯೂ ಅದು ಪುನರಾವರ್ತನೆಯಾಗಿದೆ.

ಮರುಭೂಮಿ ಮಿಡತೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದ್ದು, ನಷ್ಟದ ಪ್ರಮಾಣವನ್ನು ಅಂದಾಜು ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin