1500 ಕೆಜಿ ತೂಕದ ಬೃಹತ್ ಕೇಕ್‍ ..!

ಈ ಸುದ್ದಿಯನ್ನು ಶೇರ್ ಮಾಡಿ

Birth-Day-Cake

ಮೈಸೂರು, ಮೇ 25- ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 75ನೆ ಹುಟ್ಟುಹಬ್ಬದ ಪ್ರಯುಕ್ತ ಭಕ್ತಾದಿಯೊಬ್ಬರು 1500 ಕೆಜಿ ತೂಕದ ಬೃಹತ್ ಕೇಕ್‍ನ್ನು ನಗರದ ಆಶ್ರಮದಲ್ಲಿ ಸಮರ್ಪಿಸಿದ್ದಾರೆ.  ಮೈಸೂರು-ಊಟಿ ರಸ್ತೆಯಲ್ಲಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಶ್ರೀಗಳ ಹುಟ್ಟುಹಬ್ಬ ಪ್ರಯುಕ್ತ ಅವರ ಪರಮ ಭಕ್ತರೊಬ್ಬರು ವಿಶೇಷವಾಗಿ ಹೆಗ್‍ಲೆಸ್ ಕೇಕ್ ತಯಾರಿಸಿಕೊಂಡು ತಂದು ಸ್ವಾಮೀಜಿಗಳ ಹುಟ್ಟುಹಬ್ಬ ಆಚರಣೆಗೆ ನೀಡಿದ್ದಾರೆ.  ಆಂಧ್ರದ ತೆನಾಲಿಯ ಶಶಿಗ್ರೂಪ್ ಬೇಕರ್ಸ್‍ನ ವರದರಾಜು ನೇತೃತ್ವದಲ್ಲಿ ಒಟ್ಟು 50 ಮಂದಿ ನುರಿತ ಕೆಲಸಗಾರರು ಸೇರಿ ಈ ಕೇಕ್ ತಯಾರಿಸಿದ್ದು, ಸಸ್ಯಹಾರಿ ಕೇಕ್ ತಯಾರಿಸಲು 12 ಗಂಟೆಗಳ ಕಾಲ ಸಮಯ ಹಿಡಿದಿದೆ.ಇದು ವಿಶ್ವದ ಅತಿ ಬೃಹದಾಕಾರದ ಕೇಕ್ ಎಂದು ಹೇಳಲಾಗುತ್ತಿದೆ. ಈ ಕೇಕ್‍ನ ಉದ್ದ 120 ಅಡಿ ಅಗಲ, 3 ಅಡಿ ಮಧ್ಯದಲ್ಲಿ ಎಸ್‍ಡಿಎಸ್ ಎಂಬ ಅಕ್ಷರಗಳನ್ನು ಬರೆಯಲಾಗಿದೆ. ಈ ಅಕ್ಷರಗಳು 8 ಅಡಿ ಉದ್ದ, 4 ಅಡಿ ಅಗಲವಿದ್ದು, ಇದರಲ್ಲಿ 108 ದೀಪಗಳ ಮತ್ತು 108 ಪಾದುಕೆಗಳನ್ನು ಅಳವಡಿಸಲಾಗಿದೆ.  ಇಂದು ಬೆಳಗ್ಗೆ ಆಶ್ರಮದ ಆವರಣದಲ್ಲಿ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಸ್ವಾಮೀಜಿಗಳು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಕಿರಿಯ ಸ್ವಾಮೀಜಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥರು ಅಪಾರ ಭಕ್ತರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin