156 ಪುಟ್ಟ ಉಪಗ್ರಹ ಜಾಲ ಉಡಾವಣೆಗೆ ಚೀನಾ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

China--01

ಬೀಜಿಂಗ್, ಏ.2- ಜಾಗತಿಕ ಬ್ರಾಡ್‍ಬ್ಯಾಂಡ್ ಸೇವೆಯನ್ನು ಉತ್ತಮಗೊಳಿಸುವುದಕ್ಕಾಗಿ ಚೀನಾ 156 ಪುಟ್ಟ ಉಪಗ್ರಹಗಳ ಜಾಲ ಉಡಾವಣೆಗೆ ಸಿದ್ದತೆ ನಡೆಸಿದೆ. ಈ ಸರಣಿಯ ಮೊದಲ ಉಪಗ್ರಹ 2018ರಲ್ಲಿ ಬಾಹ್ಯಾಕಾಶಕ್ಕೆ ಚಿಮ್ಮುವ ನಿರೀಕ್ಷೆ ಇದೆ. ಇದು ಕಡಿಮೆ ಎತ್ತರದಲ್ಲಿ ಪ್ರದಕ್ಷಿಣೆ ಹಾಕುವ ಪ್ರಥಮ ಉಪಗ್ರಹ ಜಾಲ ಯೋಜನೆಯಾಗಿದೆ. ಭೂಮಿಯಿಂದ 1,000 ಕಿ.ಮೀ. ಎತ್ತರದಲ್ಲಿ ಇದು ಪರಿಭ್ರಮಿಸಲಿದೆ ಎಂದು ಸರ್ಕಾರಿ ಒಡೆತನದ ಚೀನಾ ವಾಯು ವಿಜ್ಞಾನ ಮತ್ತು ಉದ್ಯಮ ನಿಗಮ ಹೇಳಿದೆ. ವಾಣಿಜ್ಯ ಬಾಹ್ಯಾಕಾಶ ಕಾರ್ಯಕ್ರಮ ಅಭಿವೃದ್ಧಿ ರೂಪಿಸಲಾದ ಯೋಜನೆ ಇದಾಗಿದ್ದು, ತಗ್ಗು ಕಕ್ಷೆಯ ಸಿಗ್ನಲ್ ವಿಳಂಬವನ್ನು ಇದು ತಡೆಯುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin