16 ಕ್ರೀಡಾಸಾಧಕರಿಗೆ ಏಕಲವ್ಯ ಪ್ರಶಸ್ತಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

Ekalavya

ಬೆಂಗಳೂರು. ಅ.೦6 : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು 2015ನೇ ಸಾಲಿನ ಏಕಲವ್ಯ ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, 16 ಕ್ರೀಡಾಸಾಧಕರಿಗೆ ಏಕಲವ್ಯ ಪ್ರಶಸ್ತಿ, ಇಬ್ಬರಿಗೆ ಜೀವಮಾನದ ಸಾಧನೆ ಪ್ರಶಸ್ತಿ , 10 ಕ್ರೀಡಾಪಟುಗಳಿಗೆ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗಳನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಘೋಷಿಸಿದ್ದಾರೆ. 2015ನೆ ಸಾಲಿನ ಏಕಲವ್ಯ ಪ್ರಶಸ್ತಿಗೆ ಆಯ್ಕೆಯಾದ 16 ಕ್ರೀಡಾಸಾಧಕರು ಮತ್ತು ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾದ 10 ಮತ್ತು ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಇಬ್ಬರು ಸಾಧಕರ ಪಟ್ಟಿಯನ್ನು ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಖಾತೆ ಪ್ರಮೋದ್ ಮಧ್ವರಾಜ್ ಬಿಡುಗಡೆಗೊಳಿಸಿದರು. ಅ.7ರಂದು ಮೈಸೂರಿನ ಜೆ.ಕೆ. ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಏಕಲವ್ಯ ಪ್ರಶಸ್ತಿ ಭಾಜನರಾದವರ ಹೆಸರು ಈ ಕೆಳಕಂಡಂತಿದೆ.
1.ದಾಮಿನಿ ಕೆ.ಗೌಡ-ಈಜು
2.ವಿದ್ಯಾಪಿಳೈ-ಬ್ರಿಲಿಯಡ್ಸ್
3.ಪವನ್ ಶೆಟ್ಟ-ದೇಹದಾಡ್ಯ
4.ನಿತಿನ್ ತಿಮ್ಮಯ್ಯ-ಹಾಕಿ
5.ರಾಜಗುರು ಎಸ್.-ಕಬ್ಬಡ್ಡಿ
6.ಕೃಷ್ಣ ಎ ನಾಯ್ಕೋಡಿ-ಸೈಕ್ಲಿಂಗ್
7.ಅರವಿಂದ ಎ-ಬಾಸ್ಕೆಟ್ ಬಾಲ್
8.ಅರ್ಪಿತಾ ಎಂ- ಅಥ್ಲೆಟಿಕ್ಸ್
9.ಮಹಮ್ಮದ್ ರಫೀಕ್ ಹೋಳಿ-ಕುಸ್ತಿ
10-ಮೇಘನಾ ಎಂ ಸಜ್ಜನರ್-ರೈಫಲ್
11-ಧೃತಿ ತಾತಾಚಾರ್-ಟೆನ್ನಿಸ್
12-ಸನೂಪ್ ಡಿಕೋಸ್ತ-ವಾಲಿಬಾಲ್
13.ನಿಶ್ಚಿತಾ ಜಿ.ಎಂ-ಶಟಲ್
14.ಶವಾದ್ ಜೆ.ಎಂ-ಪ್ಯಾರಾ ಅಥ್ಲೆಟಿಕ್
15.ಉಮೇಶ್ರುಧ್ರಪ್ಪ ಕಾಳೆ-ಪ್ಯಾರಾ ಈಜು
16.ಕಾಂಚನ್ ಪಿ ಮುಲ್ಕೋಕರ್-ಭಾರ ಎತ್ತುವುದು

ಇದೆ ವೇಳೆ ಜೀವಮಾನವ ಸಾಧನೆಗಾಗಿ ಕ್ರೀಡಾ ತರಬೇತಿದಾರರಾದ ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್-ಬೆಂಗಳೂರು-ಈಜು ತರಬೇತುದಾರಶಿವಾನಂದ ಆರ್, ಕುಸ್ತಿ-ದಾವಣಗೆರೆ ಅವರಿಗೂ ಕೂಡ ಪ್ರಶಸ್ತಿ ಲಭಿಸಿದೆ

► Follow us on –  Facebook / Twitter  / Google+

 

 

► Follow us on –  Facebook / Twitter  / Google+

Facebook Comments

Sri Raghav

Admin