ನಿವೃತ್ತಿ ಹೊಂದಿದ 15 ವಿಧಾನ ಪರಿಷತ್ತಿನ ಸದಸ್ಯರ ಬೀಳ್ಕೊಡುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು. 10-ಅವಧಿ ಪೂರ್ಣಗೊಳಿಸಿ ಜೂನ್ ತಿಂಗಳಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತಿ ಹೊಂದಿದ 15 ಮಂದಿ ವಿಧಾನ ಪರಿಷತ್ತಿನ ನಿವೃತ್ತ ಸದಸ್ಯರನ್ನು‌ ಇಂದು ಬೀಳ್ಕೊಡಲಾಯಿತು.

ಸಮ್ಮೇಳನಾ ಸಭಾಂಗಣ ವಿಧಾನ ಪರಿಷತ್ ಸಚಿವಾಲಯ ಹಮ್ಮಿಕೊಂಡಿದ್ದ ಬಿಳ್ಕೊಡುಗೆ ಸಮಾರಂಭದಲ್ಲಿ ವಿಧಾನ ಪರಿಷತ್ತಿನ ಸಭಾಪತಿ ಪ್ರತಾಪಚಂದ್ರ ಶೆಟ್ಟಿ, ಮೇಲ್ಮನೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷ ನಾಯಕ ಎಸ್.ಆರ್.ಪಾಟೀಲ್, ವಿಪಕ್ಷ ಸಚೇತಕ ನಾರಾಯಣಸ್ವಾಮಿ ಗಣ್ಯರು ನಿವೃತ್ತ ವಿಧಾನ ಪರಿಷತ್ ಸದಸ್ಯರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ನಿವೃತ್ತಿ ಹೊಂದಿದ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಡಾ.ಜೈಮಾಲ, ಜಯಮ್ಮ,ಎಚರ.ಎಂ. ರೇವಣ್ಣ, ಶರಣಪ್ಪ ಮಟ್ಟೂರು, ಬೋಸರಾಜು, ಎಂಸಿ ವೇಣುಗೋಪಾಲ್ ಮೊದಲಾದವರಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿದ ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತಿಪ್ಪಣ್ಣ ಕಮಕನೂರ ಅವರು, ಹಿಂದುಳಿದ ಸಮುದಾಯದಿಂದ ಬಂದ ನನಗೆ ಉತ್ತಮ ಅವಕಾಶ ದೊರಕಿಸಿ ಕೊಟ್ಟಿದ್ದಿರಿ. ನನಗೆ ತಂದೆ ಇಲ್ಲ.

ಸಭಾಪತಿಗಳನ್ನು ತಂದೆ ಸ್ಥಾನದಲ್ಲಿ ನೋಡಿದ್ದೇನೆ ಎಂದರು. ಕೋಟಾ ಶ್ರೀನಿವಾಸ್ ಪೂಜಾರ್ ಅವರನ್ನು ಸೋದರನ ಸ್ಥಾನದಲ್ಲಿ ನೋಡಿದ್ದೇನೆ‌ ಎಂದು ಹೇಳುವಾಗ ಭಾವುಕರಾಗಿ ಕಣ್ಣೀರು ಹಾಕಿದರು ತಿಪ್ಪಣ್ಣ.

ನಾಮನಿರ್ದೇಶಿತ ಸದಸ್ಯರಾಗಿದ್ದ ಕೆ.ಅಬ್ದುಲ್ ಜಬಾರ್, ಡಾ.ಜೈಮಾಲ ರಾಮಚಂದ್ರ, ಐವನ್ ಡಿ ಸೋಜಾ, ಇಕ್ಬಾಲ್ ಅಹ್ಮದ್ ಸರಡಗಿ ಹಾಗೂ ತಿಪ್ಪಣ್ಣ ಕಮಕನೂರ ಅವರು ಜೂ.23ರಂದು ನಿವೃತ್ತರಾಗಿದ್ದರು.

ರಾಜ್ಯ ವಿಧಾನ ಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಿದ್ದ ಸದಸ್ಯರಾದ ಜಯಮ್ಮ, ಎನ್.ಎಸ್. ಬೋಸರಾಜು, ಎಚ್. ಎಂ. ರೇವಣ್ಣ, ಟಿ.ಎ. ಶರವಣ, ಡಿ.ಯು.ಮಲ್ಲಿಕಾರ್ಜುನ, ಎಂ.ಸಿ.ವೇಣುಗೋಪಾಲ್ ಅವರು ಜೂ.30ರಂದು ನಿವೃತ್ತಿಯಾಗಿದ್ದರು.

ಹಾಗೆಯೇ ಪದವೀಧರ ಕ್ಷೇತ್ರದಿಂದ ಚುನಾಯಿತರಾಗಿದ್ದ ಸದಸ್ಯರಾದ ಆರ್.ಚೌಡರೆಡ್ಡಿ ತೂಪಲ್ಲಿ, ಎಸ್.ವಿ.ಸುಂಕನೂರ, ಶಿಕ್ಷಕರ ಕ್ಷೇತ್ರದ ಚುನಾಯಿತ ಸದಸ್ಯರಾಗಿದ್ದ ಪುಟ್ಟಣ್ಣ ಹಾಗೂ ಶರಣಪ್ಪ ಮುಟ್ಟೂರ ಅವರು ಜೂ.30ರಂದು ನಿವೃತ್ತಿಯಾಗಿದ್ದರು.

Facebook Comments

Sri Raghav

Admin