17ನೇ ನಾಮ್ ಶೃಂಗಸಭೆಯಲ್ಲಿ ಭಯೋತ್ಪಾದನೆ ವಿರುದ್ಧ ಭಾರತ ಗುಡುಗು

ಈ ಸುದ್ದಿಯನ್ನು ಶೇರ್ ಮಾಡಿ

Nam

ಪೋರ್ಲಮರ್ (ವೆನಿಜುವೆಲಾ), ಸೆ.18- ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳು ನರಮೇಧ ನಡೆಸಿ 17 ಯೋಧರನ್ನು ಕೊಂದ ಬೆನ್ನಲ್ಲೇ ವೆನಿಜುವೆಲಾದಲ್ಲಿನ ಅಲಿಪ್ತ (ನಾಮ್) ಶೃಂಗಸಭೆ ವೇದಿಕೆಯನ್ನು ಭಾರತ ಭಯೋತ್ಪಾದನೆ ನಿಗ್ರಹದ ಧ್ವನಿಯಾಗಿ ಸಮರ್ಥವಾಗಿ ಬಳಸಿಕೊಂಡಿದೆ.  ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಈ ಪಿಡುಗಿನ ವಿರುದ್ಧ ಸಮರಕ್ಕೆ ಪರಿಣಾಮಕಾರಿ ಸಹಕಾರ ನೀಡಲು ಒಂದು ಬಲವಾದ ವ್ಯವಸ್ಥೆ ರೂಪುಗೊಳ್ಳಬೇಕೆಂದು 120 ದೇಶಗಳ ಸದಸ್ಯ ರಾಷ್ಟ್ರಗಳಿಗೆ ಭಾರತ ಮನವಿ ಮಾಡಿದೆ. ಪ್ರಧಾನಿ ನರೇಂದ್ರಮೋದಿ ಅವರ ಅನುಪಸ್ಥಿತಿಯಲ್ಲಿ ಭಾರತ ನಿಯೋಗ ನೇತೃತ್ವ ವಹಿಸಿರುವ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇಂದು 17ನೆ ನಾಮ್ ಶೃಂಗಸಭೆಯ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಭಯೋತ್ಪಾದನೆಯು ಮಾನವ ಹಕ್ಕುಗಳ ಇಂದು ಉಲ್ಲಂಘನೆಯಾಗಿದೆ. ಇದನ್ನು ದಮನ ಮಾಡಲು ದೃಢವಾದ ಕ್ರಮ ಅನಿವಾರ್ಯ ಎಂದರು.

► Follow us on –  Facebook / Twitter  / Google+

Facebook Comments

Sri Raghav

Admin