17ರಂದು ಸುತ್ತೂರು ಶ್ರೀಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ

ಈ ಸುದ್ದಿಯನ್ನು ಶೇರ್ ಮಾಡಿ

ನಂಜನಗೂಡು , ಫೆ.3- ಶ್ರೀಕ್ಷೇತ್ರ ಸುತ್ತೂರಿನಲ್ಲಿ ಆದಿಜಗದ್ಗುರುಗಳ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುತ್ತಿರುವುದರ ಜೊತೆಗೆ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಕೃಪಾಶೀರ್ವಾದಗಳೊಂದಿಗೆ ಫೆ.17ರಂದು ಉಚಿತ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದೆ.ಸುತ್ತೂರು ಶ್ರೀಕ್ಷೇತ್ರದಲ್ಲಿ ಏರ್ಪಡಿಸಲಿರುವ ಸಾಮೂಹಿಕ ವಿವಾಹದಲ್ಲಿ ಹರಗುರು ಚರಮೂರ್ತಿಗಳು, ವಧುವರರ ಬಂಧುಮಿತ್ರರು ಹಾಗೂ ಸಾರ್ವಜನಿಕರು ಭಾಗವಹಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಲಿದ್ದಾರೆ.

ಈ ವಿವಾಹದಲ್ಲಿ ಭಾಗವಹಿಸುವ ವರನಿಗೆ 21 ವರ್ಷ, ವಧುವಿಗೆ 18 ವರ್ಷ ಪೂರ್ಣಗೊಂಡಿರಬೇಕು. ಅರ್ಜಿ ನಮೂನೆಯಲ್ಲಿ ವರ ಮತ್ತು ವಧುವಿನ ಭಾವಚಿತ್ರಗಳನ್ನು ಲಗತ್ತಿಸಿರಬೇಕು. ಜಾತಿ ದೃಢೀಕರಣ ಪತ್ರ ವಧುವರರ ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ದಾಖಲಾತಿ ಪತ್ರ ಪಡೆದ ದೃಢೀಕರಣ ಪತ್ರ ಲಗತ್ತಿಸಿರಬೇಕು. ಬಾಲ್ಯ ವಿವಾಹಕ್ಕೆ ಅವಕಾಶವಿರುವುದಿಲ್ಲ.
ಫೆ.17 ಶುಕ್ರವಾರ, ತಿಂಗಳ ಸಾಮೂಹಿಕ ವಿವಾಹ ಕಾರ್ಯಕ್ರಮವಿದ್ದು, ಎಂಟು ದಿನಗಳ ಮುಂಚಿತವಾಗಿ ಆಡಳಿತಾಧಿಕಾರಿಗಳು, ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳು, ಸುತ್ತೂರು ಇವರನ್ನು ನೇರವಾಗಿ ಸಂಪರ್ಕಿಸಿ ಅಥವಾ ದೂ.:- 08221232217, 232033, 9741342222 ಸಂಪರ್ಕಿಸಿ ಮಾಹಿತಿ ಪಡೆದು ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin