17 ಕೆರೆಗಳಿಗೆ ನೀರು ತುಂಬಿಸುವ ಯೋಜನೆ : ಎಂ.ಬಿ. ಪಾಟೀಲ

ಈ ಸುದ್ದಿಯನ್ನು ಶೇರ್ ಮಾಡಿ

9

ಬೆಳಗಾವಿ,ಮಾ.17- ಬಜೆಟ್‍ನಲ್ಲಿ ರಾಯಬಾಗ ಮತಕ್ಷೇತ್ರದಲ್ಲಿ 13ಗ್ರಾಮಗಳ 17 ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಯೋಜನೆಗೆ ಅನುಮೋದನೆ ನೀಡಿದ್ದರ ಹಿನ್ನೆಲೆಯಲ್ಲಿ ಕಾಡಾ ಅಧ್ಯಕ್ಷ ಈರಗೌಡ ಪಾಟೀಲ ಅವರು ನೀರಾವರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಬೆಂಗಳೂರಿನಲ್ಲಿ ಹೂಗುಚ್ಚ ನೀಡುವುದರ ಮೂಲಕ ಅಭಿನಂದಿಸಿದರು. ಈರಗೌಡ ಪಾಟೀಲ ಅವರು, 6491 ಲಕ್ಷ ರೂ.ಗಳಲ್ಲಿ 17 ಕೆರೆಗಳನ್ನು ತುಂಬಿಸಲು ಸರ್ಕಾರ ಬಜೆಟ್‍ನಲ್ಲಿ ನೀಡಿದೆ. ಬಹುದಿನಗಳ ಈ ಭಾಗದ ಜನರ ಕನಸು ಈಡೇರಿದಂತಾಗಿದೆ. ಸರ್ಕಾರದ ಎಲ್ಲ ಸಚಿವರಿಗೆ ಶಾಸಕರಿಗೆ ರಾಯಬಾಗ ತಾಲೂಕಿನ ವತಿಯಿಂದ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin