17 ರಂದು ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೂ ಶ್ರೀನಿವಾಸ ಪ್ರಸಾದ್ ರಾಜೀನಾಮೆ..?

ಈ ಸುದ್ದಿಯನ್ನು ಶೇರ್ ಮಾಡಿ

v--srinivas--prasad--mla

ನಂಜನಗೂಡು, ಅ.13- ಇದೇ 17ರಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡರವರನ್ನು ಭೇಟಿ ಮಾಡಿ ಶಾಸಕ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೂ ಕೂಡ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಮಾಜಿ ಕಂದಾಯ ಸಚಿವ ಹಾಗೂ ಶಾಸಕ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದರು. ಸುದ್ದಿಗಾರರ ಜೊತೆ ಮಾತನಾಡಿ, ನಾನು ಕಿವುಡ ಮತ್ತು ಮೂಗರ ಶಾಲೆಯ ಪ್ರಾಧ್ಯಾಪಕನಲ್ಲ ನನಗೂ ಸಹ ಮಾತು ಬರುತ್ತದೆ ನನ್ನ ವಿರುದ್ದ ಅಸೂಯೆ ಮತ್ತು ದ್ವೇಷದಿಂದ ಪಿತೂರಿ ಮಾಡಿ ಯಾವ ಕಾರಣವನ್ನೂ ನೀಡದೆ ಸಚಿವ ಸಂಪುಟದಿಂದ ಕೈ ಬಿಟ್ಟಿರುವವರಿಗೆ ರಾಜೀನಾಮೆಯ ನಂತರ ಹೇಳುವ ವಿಷಯಗಳು ಬಹಳಷ್ಟಿದ್ದು ಅದನ್ನು ನಂತರ ಮಾಧ್ಯಮಗಳ ಮುಂದೆ ಹೇಳುತ್ತೇನೆ ಅಲ್ಲದೆ ರಾಜೀನಾಮೆ ಬಳಿಕ ನನ್ನ ಶಕ್ತಿ ಏನೆಂಬುದನ್ನು ತೋರ್ಪಡಿಸುತ್ತೇನೆ ಎಂದರು.

ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿಯೇ ರಾಜೀನಾಮೆ ಸಲ್ಲಿಸುವಂತಹ ಇಂಗಿತವಿತ್ತು ಆದರೆ ಕಾವೇರಿ ಗಲಾಟೆ ಹಾಗೂ ದಸರಾ ಪ್ರಯುಕ್ತ ವಿಳಂಬವಾಗಿದ್ದು ಅ.17 ರಂದು ವಿಧಾನಸಭಾಧ್ಯಕ್ಷರಿಗೆ ಸಮಯ ಕೇಳಲಿದ್ದು ಅಂದೇ ರಾಜೀನಾಮೆ ಸಲ್ಲಿಸುತ್ತೇನೆಂದರು. ನನ್ನನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ನನಗೆ ಮಾಸದ ಗಾಯವಾಗಿದೆ. ಕನಿಷ್ಟ ಸೌಜನ್ಯಕ್ಕಾದರೂ ಸಹ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ದಿಗ್ವಿಜಯ ಸಿಂಗ್ ಯಾರೂ ಕೂಡ ಮಾತನಾಡಿಲ್ಲ ಮತ್ತು ಯಾವ ಕಾರಣಕ್ಕೆ ನನ್ನನ್ನು ಸಚಿವ ಸಂಪುಟದಿಂದ ಕೈ ಬಿಟ್ಟರೆಂದು ತಿಳಿಸಿಲ್ಲ ಎಂದು ಕಿಡಿಕಾರಿದರು.

ರಾಜೀನಾಮೆಯ ನಂತರ ಯಾವ ಪಕ್ಷವನ್ನು ಸೇರಬೇಕೆಂದು ನಾನು ಇನ್ನೂ ನಿರ್ಧರಿಸಿಲ್ಲ . ಅಲ್ಲದೆ ಇದೇ ನನ್ನ ಕಡೆಯ ಚುನಾವಣೆಯಾಗಿದ್ದು ನಂತರದ ದಿನಗಳಲ್ಲಿ ಸಕ್ರೀಯ ರಾಜಕಾರಣದಲ್ಲಿರುತ್ತೇನೆ ಎಂದರು. ತಾ.ಪಂ.ಅಧ್ಯಕ್ಷ ಬಿ.ಎಸ್.ಮಹದೇವಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಬ್ಬಣ್ಣ, ತಾ.ಪಂ ಸದಸ್ಯರಾದ ಶಿವಣ್ಣ, ಬಿ.ಎಸ್.ರಾಮು, ಮಹದೇವನಾಯ್ಕ, ಕಾಂಗ್ರೇಸ್ ಮುಖಂಡರಾದ ಯು.ಎನ್.ಪದ್ಮನಾಭರಾವ್, ನಗರಸಭಾ ಸದಸ್ಯೆ ಅನಸೂಯ ಗಣೇಶ್, ಆಶ್ರಯ ಸಮಿತಿ ಅಧ್ಯಕ್ಷ ಬಾಲರಾಜ್ ಮಾಜಿ ನಗರಸಭಾ ಸದಸ್ಯ ಇಂದ್ರ, ಬಸವರಾಜು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin