17 ವರ್ಷಗಳ ನಂತರ ಭಾರತಕ್ಕೆ ಒಲಿದ ‘ವಿಶ್ವಸುಂದರಿ’ ಕಿರೀಟ

ಈ ಸುದ್ದಿಯನ್ನು ಶೇರ್ ಮಾಡಿ

Manushi--01

ಸಾನ್ಯಾ ಸಿಟಿ (ಚೀನಾ). ನ.18 : 17 ವರ್ಷಗಳ ನಂತರ ಭಾರತ ವಿಶ್ವಸುಂದರಿ ಪಟ್ಟ ಭಾರತಕ್ಕೆ ಒಲಿದಿದ್ದು, ಹರ್ಯಾಣದ ಮೆಡಿಕಲ್ ವಿದ್ಯಾರ್ಥಿನಿ ಮನೂಷಿ ಚಿಲ್ಲರ್ 2017 ನೇ ಸಾಲಿನ ವಿಶ್ವಸುಂದರಿಯಾಗಿ ಆಯ್ಕೆಯಾಗಿದ್ದಾಳೆ. ಈ ವಿಶ್ವಸುಂದರಿಗೆ ಈಗ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಮಿಸ್ ಇಂಗ್ಲೆಂಡ್ ಸ್ಟೀಫನ್ ಹಿಲ್ ಮೊದಲ ರನ್ನರ್ ಅಪ್, ಮಿಸ್ ಮೆಕ್ಸಿಕೋ ಆಂಡ್ರಿಯಾ ಮೇಜಾ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಸ್ಪರ್ಧೆಯಲ್ಲಿದ್ದ 108 ಸುಂದರಿಯರನ್ನು ಹಿಂದಿಕ್ಕಿ ಮಾನುಷಿ ವಿಶ್ವಸುಂದರಿಯಾಗಿ ಆಯ್ಕೆಯಾಗುವ ಮೂಲಕ ಭಾರತಕ್ಕೆ ಮತ್ತೊಮ್ಮೆ ಈ ಪಟ್ಟ ಗಿಟ್ಟಿಸಿಕೊಟ್ಟಿದ್ದಾಳೆ.
2000 ಇಸವಿಯಲ್ಲಿ ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ್ದರು. ಹರಿಯಾಣ ನಿವಾಸಿಯಾದ ಮಾನುಷಿ ವೈದ್ಯಕೀಯ ವಿದ್ಯಾರ್ಥಿನಿ. 20ರ ಹರೆಯದ ಈಕೆ ದೆಹಲಿಯ ಸೇಂಟ್ ಥಾಮಸ್ ಸ್ಕೂಲ್‍ನಲ್ಲಿ ವಿದ್ಯಾಭ್ಯಾಸ ಮುಗಿಸಿ ಭಗತ್ ಫೂಲ್ ಸಿಂಗ್ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಈ ಸ್ಪರ್ಧೆಯಲ್ಲಿ ಬ್ಯೂಟಿ ವಿತ್ ಎ ಪರ್ಪಸ್ ಎಂಬ ಪಟ್ಟವನ್ನೂ ಮಾನುಷಿ ತಮ್ಮದಾಗಿಸಿಕೊಂಡಿದ್ದಾರೆ.

ರಾಜ್ಯದ ಮಗಳು ಮನೂಷಿ ಚಿಲ್ಲರ್ ಈ ಪ್ರಶಸ್ತಿ ಗೆದ್ದಿದ್ದಕ್ಕೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆಂದು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಮನೂಷಿಯವರನ್ನು ಅಭಿನಂದಿಸಿದ್ದಾರೆ.

Facebook Comments

Sri Raghav

Admin