15 ಬಿಎಸ್‍ಎಫ್, 122 ಸಿಆರ್‍ಪಿಎಫ್ ಯೋಧರಿಗೆ ಕೊರೋನಾ ಸೋಂಕು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 3-ಕಿಲ್ಲರ್ ಕೊರೊನಾ ಭಾರತೀಯ ಭದ್ರತಾ ಪಡೆಗಳ ಮೇಲೂ ವಕ್ರದೃಷ್ಟಿ ಬೀರಿದೆ. ರಾಜಧಾನಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‍ಎಫ್)ಯ 15 ಯೋಧರಿಗೆ ಕೋವಿಡ್-19 ವೈರಸ್ ಸೋಂಕು ದೃಢಪಟ್ಟಿದೆ.

ದೆಹಲಿಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‍ಪಿಎಫ್) ತುಕಡಿಯೊಂದರಲ್ಲಿ ಕೊರೊನಾ ವೈರಸ್ ಸೋಂಕಿತ ಯೋಧರ ಸಂಖ್ಯೆ 122ಕ್ಕೇರಿರುವುದು ಆತಂಕಕ್ಕೆ ಕಾರಣವಾಗಿರುವಾಗಲೇ ಬಿಎಸ್‍ಎಫ್‍ನ 15 ಸೈನಿಕರಿಗೆ ಸೋಂಕು ಅಮರಿಕೊಂಡಿದೆ.

ಸೋಂಕು ಪೀಡಿತರು 126 ಮತ್ತು 178ನೆ ಬೆಟಾಲಿಯನ್‍ನ ಬಿಎಸ್‍ಎಫ್ ಸಿಬ್ಬಂದಿಯಾಗಿದ್ದು, ದೆಹಲಿಯ ಜಾಮ ಮಸೀದಿ ಮತ್ತು ಚಾಂದಿನಿ ಮಹಲ್ ಪ್ರದೇಶದಲ್ಲಿ ಕೊರೊನಾ ಲಾಕ್‍ಡೌನ್ ಕರ್ತವ್ಯ ನಿರ್ವಹಿಸಿದ್ದರು. ಈ ವೇಳೆ ಸೋಂಕು ತಗುಲಿದೆ.

ಇವೆರಲ್ಲರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಬಿಎಸ್‍ಎಫ್ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ದೇಶದ ಅತಿದೊಡ್ಡ ಅರೆಸೇನಾ ಪಡೆಯಲ್ಲಿನ ಒಟ್ಟು 122 ಯೋಧರಿಗೆ ಕೋವಿಡ್-19 ಪಾಸಿಟಿವ್ ಮೊನ್ನೆ ದೃಢಪಟ್ಟಿತ್ತು.

ದೆಹಲಿಯ ಮಯೂರ್ ವಿಹಾರ್ 3ನೇ ಹಂತದಲ್ಲಿರುವ ಸಿಆರ್‍ಪಿಎಫ್‍ನ 31ನೆ ಬೆಟಾಲಿಯನ್‍ನಲ್ಲಿನ 122 ಯೋದರಿಗೆ ಸೋಂಕು ತಗುಲಿದ್ದು, ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಆರ್‍ಪಿಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಿನ್ನೆ ಈ ಬೆಟಾಲಿಯನ್‍ನ 12 ಯೋಧರಿಗೆ ಮತ್ತೆ ಸೋಂಕು ತಗುಲಿದ್ದು, ಈಗ ಸಾಂಕ್ರಾಮಿಕ ರೋಗ ಪೀಡಿತರ ಸಂಖ್ಯೆ 122ಕ್ಕೇರಿದೆ. ಕಳೆದ ವಾರ ಈ ಬೆಟಾಲಿಯನ್‍ನ 55 ವರ್ಷದ ಸಬ್ ಇನ್ಸ್‍ಪೆಕ್ಟರ್ ಅಸುನೀಗಿದ್ದರು. ಇತ್ತೀಚಗೆ ಮುಂಬೈನ ಬಾರತೀಯ ನೌಕಾಪಡೆಯ 26 ನೌಕಾ ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿರುವುದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

Sri Raghav

Admin