ಬ್ರೇಕಿಂಗ್ : ಇಂದು ಒಂದೇ ದಿನ ರಾಜ್ಯದಲ್ಲಿ 17 ಕೊರೊನಾ ಕೇಸ್, ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಸರ್ಕಾರದ ಕಟ್ಟು ನಿಟ್ಟಿನ ಕ್ರಮದ ಹೊರತಾಗಿಯೂ ಭಾನುವಾರ ರಾಜ್ಯದಲ್ಲಿ ಒಂದೇ ದಿನ 17 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು,ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ. ಕಲಬುರಗಿಯ ಎರಡು ವರ್ಷದ ಮಗು ಸೇರಿದಂತೆ ಮತ್ತೆ ಆರು ಜನರಿಗೆ ಕೋವಿಡ್-19 ಸೋಂಕು ಪತ್ತೆಯಾಗಿದೆ. ಕಲಬುರಗಿಯ ಎರಡು ವರ್ಷದ ಮಗು, ವಿಜಯಪುರದ ಮೂವರು ಮಕ್ಕಳಿಗೆ ಸೋಂಕು ಖಚಿತವಾಗಿದೆ.

ವಿಜಯಪುರ 6, ಬೆಳಗಾವಿ 4, ಬೆಂಗಳೂರು 3, ಕಲಬುರಗಿ 3, ಮೈಸೂರಿನಲ್ಲಿ 1 ಕೊರೊನಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಕಲಬುರಗಿಯಲ್ಲಿ 2 ವರ್ಷದ ಗಂಡು ಮಗು, ವಿಜಯಪುರದಲ್ಲಿ 10, 13 ವರ್ಷಗಳ ಗಂಡು ಮಕ್ಕಳು, 13 ವರ್ಷದ ಹೆಣ್ಣು ಮಗುವಿನಲ್ಲಿ ಸೋಂಕು ಪತ್ತೆಯಾಗಿದೆ.

ವಿಜಯಪುರ ಜಿಲ್ಲೆಯೊಂದರಲ್ಲೇ ಆರು ಹೊಸ ಸೋಂಕಿತ ಪ್ರಕರಣ ಪತ್ತೆಯಾಗಿರುವುದು ಕಳವಳ ಉಂಟು ಮಾಡಿದೆ. ಈವರೆಗೆ 54 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.‌ ಆರೋಗ್ಯ ಇಲಾಖೆ ಸಂಜೆ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, ಐದು ಸೋಂಕಿತರು ವಿಜಯಪುರದಿಂದ ವರದಿಯಾಗಿದೆ. ಇವರೆಲ್ಲರ ಸಂಪರ್ಕದ ಬಗ್ಗೆ ಇನ್ನೂ ಮಾಹಿತಿ ಕಲೆಹಾಕಲಾಗುತ್ತಿದೆ.

ಮೈಸೂರಿನಲ್ಲಿ ಒಬ್ಬರಿಗೆ ಕೊರೋನಾ ವೈರಸ್ ಒಬ್ಬರಲ್ಲಿ ಕೋವಿಡ್-19 ಪತ್ತೆಯಾಗಿದೆ. 32 ವರ್ಷ ವಯಸ್ಸಿನ ಇವರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ಸೋಂಕಿತ ನೌಕರರ ಸಂಪರ್ಕಕ್ಕೆ ಬಂದಿದ್ದರು. ಕಲಬುರಗಿಯಲ್ಲಿ ಕೊರೋನಾ ಸೋಂಕಿನಿಂಧ ಮೃತಪಟ್ಟ 70 ವರ್ಷದ ವೃದ್ಧನ ಸೊಸೆ ಮತ್ತು ಆಯಾಗೆ ಕೂಡ ಸೋಂಕು ದೃಢಪಟ್ಟಿದೆ.

ಕಲಬುರಗಿಯ ವೃದ್ಧನ 24 ವರ್ಷದ ಸೊಸೆ ಮತ್ತು ಆತನೊಂದಿಗೆ ಸಂಪರ್ಕ ಹೊಂದಿದ್ದ 38 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಬೆಳಗಾವಿಯ ಹಿರೇಬಾಗೆವಾಡಿಯ 38 ವರ್ಷದ ವ್ಯಕ್ತಿಗೆ ಸೋಂಕು. ರೋಗಿ 128 ರ ಸಂಪರ್ಕ ಹೊಂದಿದ್ದಾರೆ.

ರಾಯಭಾಗದ 55 ವರ್ಷದ ವ್ಯಕ್ತಿಗೂ ಸೋಂಕು. 150ರ ಸಂಪರ್ಕ ಹೊಂದಿದ್ದು, ಬೆಳಗಾವಿಯಲ್ಲಿ ಚಿಕಿತ್ಸೆ ಮುಂದುವರಿದಿದೆ. ರಾಯಭಾಗದ ನಿವಾಸಿ 25 ವರ್ಷದ ವ್ಯಕ್ತಿಗೂ ಸೋಂಕು ತಗುಲಿದ್ದು, 150 ರ ಸಂಪರ್ಕ ಹೊಂದಿದ್ದಾನೆ. ಕಲಬುರಗಿಯ 2 ವರ್ಷದ ಗಂಡು ಮಗುವಿಗೂ ಸೋಂಕು ತಗುಲಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಕಲಬುರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೊರೊನಾ ವೈರಸ್ ಸೋಂಕಿನಿಂದ ಮೈಸೂರೊಂದರಲ್ಲಿಯೇ ಏಳು ಜನರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದ್ದಾರೆ. ಈ ನಡುವೆ ಈ ಮಧ್ಯೆ ಕೊರೋನಾ ಸೋಂಕನ್ನು ಮೆಟ್ಟಿನಿಂತು ಮಾಮೂಲು ಜೀವನಕ್ಕೆ ಮರಳಿದವರನ್ನು ರಾಜ್ಯದ ನಾನಾ ಕಡೆ ಆಸ್ಪತ್ರೆ ಸಿಬ್ಬಂದಿ ಮತ್ತು ಜಿಲ್ಲಾಡಳಿತ ಮೆಚ್ಚುಗೆಯಿಂದ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಕೊರೋನಾ ಗೆದ್ದ ನಾಲ್ವರಿಗೆ ಆಸ್ಪತ್ರೆ ಸಿಬ್ಬಂದಿ ಮತ್ತು ಕೆಲ ಅಧಿಕಾರಿಗಳು ಆಸ್ಪತ್ರೆಯಿಂದ ಹೊರಗೆ ಹೋಗುವವರೆಗೂ ಸಾಲು ನಿಂತು ಚಪ್ಪಾಳೆ ತಟ್ಟಿ ನಂತರ ಹೂಗುಚ್ಛ ನೀಡಿ ಶುಭ ಹಾರೈಸಿರುವ ವಿಡಿಯೊ ವೈರಲ್ ಆಗಿದೆ.

# ಒಟ್ಟು ಪ್ರಕರಣ-232
ಬೆಂಗಳೂರು – 76, ಬೆಂಗಳೂರು ಗ್ರಾಮಾಂತರ – 04, ಮೈಸೂರು – 48, ಬೀದರ್ – 11, ಚಿಕ್ಕಬಳ್ಳಾಪುರ – 9, ದಕ್ಷಿಣ ಕನ್ನಡ – 12, ಉತ್ತರ ಕನ್ನಡ – 9, ಕಲಬುರಗಿ – 13, ದಾವಣಗೆರೆ – 3, ಉಡುಪಿ – 3, ಬೆಳಗಾವಿ – 14, ಬಳ್ಳಾರಿ – 6, ಕೊಡಗು – 1, ಧಾರವಾಡ – 2, ತುಮಕೂರು – 1, ಬಾಗಲಕೋಟೆ – 8, ಮಂಡ್ಯ – 5, ಗದಗ – 1, ವಿಜಯಪುರ-6

Facebook Comments

Sri Raghav

Admin