ರಾಜ್ಯದಲ್ಲಿ ಇಂದು 176 ಜನರಿಗೆ ಕೊರೋನಾ ಪಾಸಿಟಿವ್, 7000ಕ್ಕೆರಿದ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಹಾವಳಿ ಮುಂದುವರಿದಿದೆ. ಭಾನುವಾರ ರಾಜ್ಯದಲ್ಲಿಮತ್ತೆ 176 ಜನರಿಗೆ ಕೋವಿಡ್ ಸೋಂಕು ತಾಗಿರುವುದು ದೃಢವಾಗಿದೆ.

ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 7000ಕ್ಕೆ ಏರಿಕೆ ಕಂಡಿದೆ.ಇಂದು ಸೋಂಕಿನ ಕಾರಣದಿಂದ ಒಟ್ಟು ಐದು ಮಂದಿ ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ 86ಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿ 42 ಜನರಿಗೆ ಸೋಂಕು ದೃಢವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ 22 ಜನರಿಗೆ ಸೋಂಕು ದೃಢವಾಗಿದ್ದರೆ, ಉಡುಪಿ ಜಿಲ್ಲೆಯಲ್ಲಿ ಜನರಿಗೆ 21 ಕೋವಿಡ್-19 ಸೋಂಕು ಪತ್ತೆಯಾಗಿದೆ.

ಆಶಾದಾಯಕ ಬೆಳವಣಿಗೆಯಲ್ಲಿ ಕೊರೊನಾ ವೈರಸ್ ಸೋಂಕಿತರಿಗಿಂತಲೂ ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 176 ಮಂದಿಗೆ ಕೊರೊನಾ ವೈರಸ್ ಸೋಂಕು ಅಂಟಿಕೊಂಡಿದ್ದರೆ, 312 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಬೆಂಗಳೂರು ನಗರ – 42, ಯಾದಗಿರಿ – 22, ಉಡುಪಿ – 21, ಬೀದರ್ -20, ಕಲಬುರಗಿ – 13, ಧಾರವಾಡ – 10, ಬಳ್ಳಾರಿ -8, ಕೋಲಾರ -7, ಉತ್ತರ ಕನ್ನಡ – 6, ಮಂಡ್ಯ -5, ದಕ್ಷಿಣ ಕನ್ನಡ -5, ಬಾಗಲಕೋಟೆ – 4, ರಾಮನಗರ – 3, ರಾಯಚೂರು -2, ಶಿವಮೊಗ್ಗ – 2, ಬೆಳಗಾವಿ – 1, ಹಾಸನ -1, ವಿಜಯಪುರ – 1, ಬೆಂಗಳೂರು ಗ್ರಾಮಾಂತರ -1, ಹಾವೇರಿ -1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಪತ್ತೆಯಾದ 176 ಪ್ರಕರಣಗಳ ಪೈಕಿ 88 ಮಂದಿ ಅಂತರಾಜ್ಯ ಮತ್ತು 6 ಜನರು ಅಂತರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು ಒಂದೇ ದಿನ 312 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಡುಪಿ -130, ಕಲಬುರಗಿ – 50, ಯಾದಗಿರಿ -35, ಬೆಂಗಳೂರು ನಗರ – 28, ದಕ್ಷಿಣ ಕನ್ನಡ – 11, ವಿಜಯಪುರ – 10, ದಾವಣಗೆರೆ – 10, ಹಾಸನ – 9, ಉತ್ತರ ಕನ್ನಡ -8, ಬೆಳಗಾವಿ -6, ಬಳ್ಳಾರಿ – 6, ಕೊಪ್ಪಳ -5, ಧಾರವಾಡ – 2, ಬಾಗಲಕೋಟೆ -1, ಇತರೆ – 1 ಕೊರೊನಾ ವೈರಸ್ ಸೋಂಕಿತರ ಆರೋಗ್ಯದಲ್ಲಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ದಕ್ಷಿಣ ಕನ್ನಡ 24 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಜೂನ್ 12ರಂದು ಕೊರೊನಾ ತಗುಲಿರೋದು ಧೃಡವಾಗಿತ್ತು. ದಾಖಲಾದ ದಿನವೇ ಮಹಿಳೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ 57 ವರ್ಷದ ಮಹಿಳೆ ಜೂನ್ 11ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 12ರಂದು ಚಿಕಿತ್ಸೆ ಫಲಕಾರಿಯಾಗದೇ ನಿಧನ ಹೊಂದಿದ್ದಾರೆ. ಮಹಿಳೆ ಜ್ವರ, ಕೆಮ್ಮು, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.

ಬೆಂಗಳೂರಿನ 50 ವರ್ಷದ ಪುರುಷ. ತಮಿಳುನಾಡಿನ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಜೂನ್ 10 ರಂದು ದಾಖಲಾಗಿದ್ದ ವ್ಯಕ್ತಿ ಜೂನ್ 13ರಂದು ನಿಧನರಾಗಿದ್ದಾರೆ.

ಬೆಂಗಳೂರಿನ 60 ವರ್ಷದ ವೃದ್ಧೆ. ಜ್ವರ, ಕೆಮ್ಮು, ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಜೂನ್ 9ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 11ರಂದು ನಿಧನರಾಗಿದ್ದಾರೆ.

ಬೀದರ್ ಜಿಲ್ಲೆಯ 76 ವರ್ಷದ ವೃದ್ಧ. ಜೂನ್ 6ರಂದು ನಿಧನರಾಗಿದ್ದ ವೃದ್ಧನ ವರದಿಯಲ್ಲಿ ಆತನಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ. ರಾಜ್ಯದಲ್ಲಿ 2956 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇದುವರೆಗೆ ಮೂವರು ಸೋಂಕಿತರು ಕೋವಿಡ್-19 ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Facebook Comments

Sri Raghav

Admin