BIG BREAKING : ಕರ್ನಾಟಕಕ್ಕೆ ‘ಮಹಾ’ ಕಂಟಕ : ಇಂದು ಬರೋಬ್ಬರಿ 178 ಮಂದಿಗೆ ಕೊರೋನಾ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 29- ರಾಜ್ಯಕ್ಕೆ ಮಹಾರಾಷ್ಟ್ರದ ನಂಜು ಆತಂಕ ಹುಟ್ಟಿಸಿದ್ದು, 20ಗಂಟೆಗಳಲ್ಲಿ 178 ಜನರಿಗೆ ಕೊರೊನಾ ಸೋಂಕು ವಕ್ಕರಿಸಿದ್ದು ಮತ್ತಷ್ಟು ಭೀತಿ ಹೆಚ್ಚಿಸಿದೆ. ಯಾದಗಿರಿ, ರಾಯಚೂರಿನಲ್ಲಿ ಸೋಂಕಿತರ ಸಂಖ್ಯೆ ಅರ್ಧ ಶತಕ ಮೀರಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 2711ಕ್ಕೆ ಮುಟ್ಟಿದ್ದು, ಕೆಲವೇ ದಿನಗಳಲ್ಲಿ 3000ರ ಗಡಿ ಮುಟ್ಟುವ ಸಾಧ್ಯತೆ ಹೆಚ್ಚಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದೆ.

ಪತ್ತೆಯಾಗಿರುವ ಸೋಂಕಿನಲ್ಲಿ ಶೇ.80ರಷ್ಟು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದವರೇ ಆಗಿದ್ದು, ಆರೋಗ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ದಿನೇ ದಿನೇ ತಲೆ ನೋವು ಹೆಚ್ಚಿಸಿದೆ.  ಯಾದಗಿರಿಯಲ್ಲಿ 60, ರಾಯಚೂರು 62, ರಾಜಧಾನಿ ಬೆಂಗಳೂರಿನಲ್ಲಿ 10, ಉಡುಪಿ 15, ಗುಲ್ಬರ್ಗಾ 15, ಚಿಕ್ಕಬಳ್ಳಾಪುರ, ದಾವಣಗೆರೆಯಲ್ಲಿ ತಲಾ 4, ಮೈಸೂರು, ಮಂಡ್ಯಾದಲ್ಲಿ ತಲಾ 2, ಶಿವಮೊಗ್ಗ, ಧಾರವಾಡ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತಲಾ ಒಂದೊಂದು ಪ್ರಕರಣ ಪತ್ತೆಯಾಗಿದೆ.

ಕೊರೊನಾ ಸಂಪೂರ್ಣ ನಿಯಂತ್ರಣಗೊಂಡಿತು ಎಂದು ನಿಟ್ಟಿಸಿರು ಬಿಡುವ ಸಂದರ್ಭದಲ್ಲೇ ಮೈಸೂರಿನಲ್ಲಿ ರಡು ಪ್ರಕರಣ ದಾಖಲಾಗಿರುವುದು ಸ್ಥಳೀಯರನ್ನು ಮತ್ತೆ ಆತಂಕ್ಕೀಡು ಮಾಡಿದೆ.ಮೊನ್ನೆಯಷ್ಟೇ ಐಲ್ರ್ಯಾಂಡ್ ನಿಂದ ಆಗಮಿಸಿದ್ದ 28 ವರ್ಷದ ಯುವಕ ಹಾಗೂ ರಾಜಸ್ಥಾನದಿಂದ ಹಿಂದಿರುಗಿದ್ದ 26 ವರ್ಷದ ಯುವಕನಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಇನ್ನು ಬೆಂಗಳೂರಿನಲ್ಲಿ ಪತ್ತೆಯಾಗಿರುವ ಒಟ್ಟು 9 ಪಾಸಿಟಿವ್ ಕೇಸ್‍ನಲ್ಲಿ 36, 46, 31 ವರ್ಷದ ಪುರುಷರಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ತಿಳಿದು ಬಂದಿಲ್ಲ. ಇನ್ನು ಉಳಿದ 5 ಮಂದಿ ಮಹಾರಾಷ್ಟ್ರದ ಹಾಗೂ ಓರ್ವ ಆಂಧ್ರದಿಂದ ಮರಳಿದವನಿಗೆ ಸೋಂಕು ತಗುಲಿದೆ.

ಎರಡು ವರ್ಷದ ಮಗು ಸೇರಿ 10 ವರ್ಷದೊಳಗಿನ 14 ಮಕ್ಕಳಿಗೆ ಸೋಂಕು ತಗುಲಿರುವುದು ಎಲ್ಲರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಸುಮಾರು 25ಕ್ಕೂ ಹೆಚ್ಚು ಮಂದಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ವಕ್ಕರಿಸಿದೆ.

ಪ್ರಮುಖವಾಗಿ ಗಮನಿಸಬೇಕಾದ ಮಾಹಿತಿಯಲ್ಲಿ ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ ದ್ವಿಶತಕ (223)ದಾಟಿದರೆ, ಬೆಂಗಳೂರಿನಲ್ಲಿ (301)ತ್ರಿಶತಕದಾಟಿದೆ. ಮಂಡ್ಯದಲ್ಲೂ ಕೂಡ ಇದರ ಹಿಂದೆ ಇದ್ದು, ಒಟ್ಟು ಸೋಂಕಿತರ ಸಂಖ್ಯೆ 257ಕ್ಕೆ ಮುಟ್ಟಿದೆ.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರ ತವರು ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ 135 ಮಂದಿಗೆ ಸೋಂಕು ತಗುಲಿದೆ. ಒಟ್ಟಾರೆ ಸೋಂಕಿತರ ಹೆಚ್ಚುತ್ತಿದ್ದರೂ ಇಂದು ಆಸ್ಪತ್ರೆಯಿಂದ 35 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

Facebook Comments

Sri Raghav

Admin