18 ಬಾಂಬ್ ನಿಷ್ಕಿಯಗೊಳಿಸಿದ ಸಿಆರ್‌ಪಿಎಫ್‌ : ನಕ್ಸಲರ ಭಾರೀ ವಿಧ್ವಂಸಕ ಕೃತ್ಯ ವಿಫಲ

ಈ ಸುದ್ದಿಯನ್ನು ಶೇರ್ ಮಾಡಿ

ಚಾಯ್‍ಬಾಸಾ (ಜಾರ್ಖಂಡ್), ಸೆ.4- ನಕ್ಸಲರ ಉಪಟಳ ಹೆಚ್ಚಾಗಿರುವ ಜಾರ್ಖಂಡ್‍ನ ವೆಸ್ಟ್ ಸಿಂಗ್‍ಭೂಮ್ ಜಿಲ್ಲೆಯಲ್ಲಿ 18 ಸುಧಾರಿತ ಸ್ಫೋಟಕಗಳನ್ನು (ಐಇಡಿಗಳು) ಭದ್ರತಾಪಡೆಗಳು ನಿಷ್ಕ್ರಿಯಗೊಳಿಸಿದ್ದಾರೆ.

ಭಾರೀ ವಿಧ್ವಂಸಕ ಕೃತ್ಯಗಳನ್ನು ಎಸಗಲು ಕುತಂತ್ರ ರೂಪಿಸಿದ್ದ ನಕ್ಸಲರ ಯತ್ನವು ಈ ಕಾರ್ಯಾಚರಣೆ ಮೂಲಕ ವಿಫಲಗೊಂಡಿದೆ.

ಗೋಯಿಲ್‍ಕೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದ ರಸ್ತೆಯಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಬಂಡುಕೋರರು ಈ ಸುಧಾರಿತ ಸ್ಫೋಟಕಗಳನ್ನು ಇರಿಸಿ ಭದ್ರತಾಪಡೆ ಮತ್ತು ಇತರ ವಾಹನಗಳನ್ನು ಸ್ಫೋಟಿಸಲು ಸಜ್ಜಾಗಿದ್ದರು.

ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ಯೋಧರು ನಕ್ಸಲ್ ನಿಗ್ರಹ ಕಾರ್ಯಾಚರಣೆ ಅಂಗವಾಗಿ ಈ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ 18 ಐಇಡಿಗಳು ಪತ್ತೆಯಾದವು. ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಸ್ಥಳಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ 18 ಐಇಡಿಗಳನ್ನು ನಿಷ್ಕ್ರಿಯಗೊಳಿಸಿ ಭಾರೀ ವಿಧ್ವಂಸಕ ಕೃತ್ಯವನ್ನು ತಪ್ಪಿಸಿದ್ದಾರೆ.

Facebook Comments