ಇಂದು ಒಂದೇ ದಿನ 18 ಮಂದಿಯಲ್ಲಿ ಕೊರೋನಾ ಪತ್ತೆ, ಸೋಂಕಿತರ ಸಂಖ್ಯೆ 408 ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಸೋಮವಾರ ಮತ್ತೆ ಕೊರೊನಾ ಸೋಂಕಿನ 18 ಪ್ರಕರಣಗಳು ಪತ್ತೆಯಾಗಿದೆ.ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಒಟ್ಟು 409ಕ್ಕೆ ಏರಿಕೆಯಾಗಿದೆ. ವಿಜಯಪುರದಲ್ಲಿ 11 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಕುಟುಂಬದವರ ಜೊತೆ ಸಂಪರ್ಕ ಹೊಂದಿದ್ದರಿಂದ ಕೊರೊನಾ ಸೋಂಕು ಬಂದಿದೆ. ಕಲಬುರಗಿಯಲ್ಲಿ 5, ಗದಗ ಮತ್ತು ಬೀದರ್ ತಲಾ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸದ್ಯ ಇವರೆಲ್ಲರನ್ನು ವಿಶೇಷ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.  ಪತ್ತೆಯಾದ 18 ಹೊಸ ಪ್ರಕರಣಗಳು ಉತ್ತರ ಕರ್ನಾಟಕ ಎಂಬುದು ಆತಂಕಕ್ಕೆ ಕಾರಣವಾಗಿದೆ.

409 ಕೊರೊನಾ ಪ್ರಕರಣಗಳಲ್ಲಿ ಉತ್ತರ ಕರ್ನಾಟಕದ ಪ್ರಕರಣಗಳೇ 160ಕ್ಕೂ ಹೆಚ್ಚು ಎಂಬುದು ಗಮನಿಸಬೇಕಾದ ಅಂಶವಾಗಿದೆ.  ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಕಲಬುರಗಿ ವೃದ್ಧ ಬಲಿಯಾಗಿದ್ದು, ಇದೀಗ ಜಿಲ್ಲೆಯಲ್ಲಿ ಮತ್ತೆ ಹೊಸ ಐದು ಪ್ರಕರಣಗಳು  ಸೋಮವಾರ ಕಲಬುರಗಿಯಲ್ಲೇ ಪತ್ತೆಯಾಗಿರುವುದರಿಂದ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಇನ್ನು, ಕಳೆದ ಎರಡು ದಿನದಿಂದ ಬೆಂಗಳೂರು ನಗರದಲ್ಲಿ ಯಾವುದೇ ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿಲ್ಲದಿರುವುದು ಸಿಲಿಕಾನ್‌ ಸಿಟಿ ಜನರಿಗೆ ಸ್ವಲ್ಪ ಆತಂಕ ಕಡಿಮೆಯಾದಂತಾಗಿದೆ.  ಭಾನುವಾರ ಮತ್ತು ಸೋಮವಾರ ಸರಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗದಿರುವುದು ಉದ್ಯಾನ ನಗರಿಯ ಜನರಲ್ಲಿನ ಭಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.

ಇದೆಲ್ಲದರ ನಡುವೆ ಬೆಂಗಳೂರಿನಲ್ಲಿ ಸೋಂಕಿತರಿಗಿಂದ ಸೋಂಕು ಕಳೆದುಕೊಂಡವರೇ ಅಧಿಕ ಸಂಖ್ಯೆಯಲ್ಲಿದ್ದಾರೆ.
40 ಮಂದಿ ಸೋಂಕಿತರಿದ್ದರೇ ಇಲ್ಲಿ 45 ಮಂದಿ ಗುಣಮುಖರಾಗಿದ್ದಾರೆ. ನಾಲವರು ಮೃತಪಟ್ಟಿದ್ದಾರೆ.

ಬೆಂಗಳೂರು ನಗರ (89), ಮೈಸೂರು (84), ಬೆಳಗಾವಿ (42), ಕಲಬುರಗಿ (27), ವಿಜಯಪುರ (32), ಬಾಗಲಕೋಟೆ (21), ಚಿಕ್ಕಬಳ್ಳಾಪುರ (16), ಬೀದರ್‌ (15), ದಕ್ಷಿಣ ಕನ್ನಡ (14), ಬಳ್ಳಾರಿ (13), ಬೆಂಗಳೂರು ಗ್ರಾಮಾಂತರ (12), ಮಂಡ್ಯ (12), ಉತ್ತರ ಕನ್ನಡ (11), ಧಾರವಾಡ (7), ಗದಗ (4), ಉಡುಪಿ (3), ತುಮಕೂರು (2), ದಾವಣಗೆರೆ (2), ಚಿತ್ರದುರ್ಗ (1) ಹಾಗೂ ಕೊಡಗು (1) ಸೋಂಕಿತ ಪ್ರಕರಣಗಳು ದೃಡಪಟ್ಟಿವೆ.

ಚಿಕಿತ್ಸೆ ಪಡೆದವರಲ್ಲಿ ಕರೋನಾ ಸೋಂಕಿತರು ಇದ್ದದ್ದು ಪತ್ತೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಎರಡು ಆಸ್ಪತ್ರೆಗಳಿಗೆ ಬೀಗ ಜಡಿಯಲಾಗಿದೆ. ಕೊರೋನಾ ಸೋಂಕಿತು ಇಲ್ಲವೇ ಅವರ ಸಂಪರ್ಕದಲ್ಲಿ ಇದ್ದವರು ಇಲ್ಲಿ ಚಿಕಿತ್ಸೆ ಪಡೆದಿರುವುದು ಖಾತರಿಯಾದ ಕಾರಣ ಎರಡು ಆಸ್ಪತ್ರೆಗಳನ್ನು ಮುಚ್ಚಲಾಗಿದೆ.  ಕ್ವೀನ್ಸ್ ರಸ್ತೆಯಲ್ಲಿರುವ ಶಿಫಾ ಆಸ್ಪತ್ರೆಯ ವೈದ್ಯರೊಬ್ಬರಿಗೆ ಸೋಂಕು ತಗುಲಿದ ಪರಿಣಾಮ ಏಪ್ರಿಲ್ 1ರಿಂದಲೇ ಆಸ್ಪತ್ರೆ ಬಂದ್ ಆಗಿದ್ದರೇ ಇದೀಗ ಮತ್ತೊಂದು ಆಸ್ಪತ್ರೆ ಈ ಪಟ್ಟಿಗೆ ಸೇರಿದೆ.

ಬಸವೇಶ್ವರ ನಗರದ ಕುರುಬರ ಹಳ್ಳಿಯಲ್ಲಿರುವ ಲೋಟಸ್ ಆಸ್ಪತ್ರೆಯನ್ನು ಇದೀಗ 14 ದಿನಗಳ ಮಟ್ಟಿಗೆ ಮುಚ್ಚಲಾಗಿದೆ.
ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕೇವಲ 4 ಜಿಲ್ಲೆಗಳು ಮಾತ್ರ ಸೇಫ್‌ ಜೋನ್‌ನಲ್ಲಿವೆ. ಕೊಪ್ಪಳ, ರಾಯಚೂರು, ಯಾದಗಿರಿ ಹಾಗೂ ಹಾವೇರಿಯಲ್ಲಿ ಇದುವರೆಗೂ ಯಾವುದೇ ಕೊರೊನಾ ಪಾಸಿಟಿವ್‌ ಪ್ರಕರಣಗಳು ಕಂಡುಬಂದಿಲ್ಲ.

ಇನ್ನು, ಯಾದಗಿರಿ, ಕೊಪ್ಪಳ, ಶಿವಮೊಗ್ಗ, ಚಿಕ್ಕಮಗಳೂರು, ರಾಯಚೂರು, ರಾಮನಗರ, ಹಾಸನ, ಹಾವೇರಿ, ಚಾಮರಾಜನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಇದುವರೆಗೂ ಯಾವುದೇ ಸೋಂಕಿತರು ಕಂಡುಬಂದಿಲ್ಲ. ಕಳೆದ 32 ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ. ಇದರಿಂದ ಕೊಡಗು ಸಹ ಗ್ರೀನ್‌ ಜೋನ್‌ಗೆ ಒಳಪಡುವ ಸಾಧ್ಯತೆ ಇದ್ದು, ಸರಕಾರದ ಅಧಿಕೃತ ಆದೇಶ ಬಾಕಿಯಿದೆ.

ಇನ್ನು, ಉಡುಪಿಯಲ್ಲೂ ಸಹ ಕಳೆದ 22 ದಿನಗಳಿಂದ ಕೊರೊನಾ ಕೇಸ್‌ಗಳು ಪತ್ತೆಯಾಗಿಲ್ಲ. ಇನ್ನು, 6 ದಿನ ಕಳೆದರೆ ಗ್ರೀನ್‌ ಜೋನ್‌ಗೆ ಉಡುಪಿ ಜಿಲ್ಲೆ ಹೋಗುತ್ತದೆ. ಈವರಗೆ 112 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರೇ, 16 ಮಂದಿ ಸಾವಿಗೀಡಾಗಿದ್ದಾರೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Facebook Comments

Sri Raghav

Admin