ನೀರಿನೊಳಗೆ ಕೂತು ಒಂದು ಉಸಿರಿಗೆ 6 ರುಬಿಕ್ ಕ್ಯೂಬ್ ಜೋಡಿಸಿ ವಿಶ್ವದಾಖಲೆ..!

ಈ ಸುದ್ದಿಯನ್ನು ಶೇರ್ ಮಾಡಿ

Ds

ರೂಬಿಕ್ ಕ್ಯೂಬ್-ಜಾಣ್ಮೆ, ಬುದ್ದಿವಂತಿಕೆ ಹಾಗೂ ಕೌಶಲ್ಯಕ್ಕೆ ಸವಾಲೊಡ್ಡುವ ಆಟ. ಜಾರ್ಜಿಯಾದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಒಂದೇ ಉಸಿರಿನಲ್ಲಿ ಆರು ರೂಬಿಕ್ ಕ್ಯೂಬ್‍ಗಳ ಕ್ಲಿಷ್ಟತೆಗಳನ್ನು ಬಗೆಹರಿಸಿ ಗಿನ್ನಿಸ್ ವಿಶ್ವದಾಖಲೆ ಸೃಷ್ಟಿಸಿದ್ದಾನೆ. ಜಾರ್ಜಿಯಾದ 18 ವರ್ಷದ ಪ್ರತಿಭಾವಂತ ವಿದ್ಯಾರ್ಥಿ ವ್ಯಾಕೋ ಮಾರ್ಚೆಲಾಶ್‍ವಿಲಿ ನೀರಿನೊಳಗೆ ಮುಳುಗಿ ಒಂದೇ ಉಸಿರಿನಲ್ಲಿ ಆರು ರೂಬಿಕ್ ಕ್ಯೂಬ್‍ಗಳನ್ನು ಸಾಲ್ವ್ ಮಾಡಿದ್ದಾನೆ. ಇದಕ್ಕಾಗಿ ಈತ ತೆಗೆದುಕೊಂಡ ಸಮಯ ಒಂದು ನಿಮಿಷ 44 ಸೆಕೆಂಡ್‍ಗಳು ಹಾಗೂ 25 ಮಿನಿ ಸೆಕೆಂಡ್‍ಗಳು.

Ds-1

ಈ ಮೂಲಕ ವಿಶ್ವದಾಖಲೆ ಸೃಷ್ಟಿಸಲು ಈತ ಯತ್ನಿಸಿದ. ಪ್ರಸ್ತುತ ನ್ಯೂಜೆರ್ಸಿಯಲ್ಲಿ 2014ರಲ್ಲಿ ನಡೆದ ಸ್ಪರ್ಧೆಯಲ್ಲಿ ಅಂಟೋನಿ ಬ್ರೂಕ್ ಹೆಸರಿನಲ್ಲಿ ಗಿನ್ನಿಸ್ ವಿಶ್ವ ದಾಖಲೆ ಇದೆ.  2015ರ ಏಪ್ರಿಲ್‍ನಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ಕಿರಿಯ ವಿದ್ಯಾರ್ಥಿ ಕೆವಿನ್ ಹೇಸ್ ಎಂಟು ರೂಬಿಕ್ ಕ್ಯೂಬ್‍ಗಳ ಕ್ಲಿಷ್ಟತೆಯನ್ನು ಬಗೆಹರಿಸಿದ್ದನು. ಆದರೆ ತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಅತನ ಫಲಿತಾಂಶವನ್ನು ದಾಖಲೆಗೆ ಸೇರಿಸಲಿಲ್ಲ.  ಜಾರ್ಜಿಯಾ ವಿದ್ಯಾರ್ಥಿ ನೀರಿನೊಳಗೆ ಮಾಡಿರುವ ಆರು ರೂಬಿಕ್ ಕ್ಯೂಬ್‍ಗಳ ಸಾಧನೆಯನ್ನು ವಿಶ್ವ ದಾಖಲೆ ಎಂದು ಪರಿಗಣಿಸಲಾಗಿದೆ.  ನೀರಿನೊಳಗೆ ಇಳಿದು ಈ ಸವಾಲು ಎದುರಿಸಲು ನಾನು ಆರು ತಿಂಗಳಿನಿಂದ ಸಿದ್ದತೆ ನಡೆಸಿದ್ದೆ. ಇದಕ್ಕಾಗಿ ದಿನದಲ್ಲಿ ಸಾಕಷ್ಟು ಅವಧಿಯನ್ನು ಮೀಸಲಾಗಿಡುತ್ತಿದ್ದೆ ಎಂದು ಆತ ಹೇಳಿದ್ದಾನೆ.

Facebook Comments

Sri Raghav

Admin