ಕೊರೋನಾ ಬುಲೆಟಿನ್ : ರಾಜ್ಯದಲ್ಲಿ ಇಂದು 1843 ಮಂದಿಗೆ ಪಾಸಿಟಿವ್, 30 ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಒಟ್ಟು 1843 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು,ಸೋಮವಾರ ಒಂದೇ ದಿನ ಬರೋಬ್ಬರಿ 30 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ 981 ಪಾಸಿಟಿವ್ ಪ್ರಕರಣಗಳು ಇಂದು ವರದಿಯಾಗಿದೆ.

ಇಂದು 10 ಮಂದಿ ಬೆಂಗಳೂರಿನಲ್ಲಿ ಬಲಿಯಾಗಿದ್ದು, ಸಾವಿನ ಸಂಖ್ಯೆ 154ಕ್ಕೇರಿದೆ. ಅಲ್ಲದೇ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಸಾವಿರ ದಾಟಿದೆ .  ಹೊಸದಾಗಿ 1843 ಪ್ರಕರಣಗಳು ಪತ್ತೆಯಾಗುವಯದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 25317ಕ್ಕೆ ಏರಿಕೆಯಾಗಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವರು, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 15,880 ಕೊರೊನಾ ಟೆಸ್ಟ್ ಮಾಡಲಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಟೆಸ್ಟ್ ಪ್ರಮಾಣ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಮತ್ತೊಂದೆಡೆ ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 10 ಮಂದಿ ಸೇರಿದಂತೆ ರಾಜ್ಯದಲ್ಲಿ ಒಟ್ಟು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಕ್ಯೆ 25,317 ಕ್ಕೇರಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.58, ಬೆಂಗಳೂರಿನಲ್ಲಿ ಶೇ. 1.51 ರಷ್ಟಿದೆ. ಕೋವಿಡ್ ಕೇರ್ ಸೆಂಟರ್ ಮೂಲಕ ಬೆಂಗಳೂರಿನಲ್ಲಿ ಮುಂದಿನ 2-3 ದಿನಗಳಲ್ಲಿ 10 ಸಾವಿರ ಬೆಡ್‍ಗಳನ್ನು ಸಿದ್ಧ ಮಾಡಿಸಲಿದ್ದೇವೆ ಎಂದು ಸಚಿವ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ 6,600 ಬೆಡ್ ಗಳನ್ನು ಸಿದ್ಧ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟು ಬೆಡ್‍ಗಳನ್ನು ನೀಡುವುದಾಗಿ ಸರ್ಕಾರಕ್ಕೆ ಅಭಯ ನೀಡಿದ್ದವು. ಇದರ ಅನ್ವಯ ನಮಗೆ ನಗರದಲ್ಲಿ 3 ಸಾವಿರ ಬೆಡ್ ಗಳು ಲಭ್ಯವಿದೆ. ಆದರೆ 156 ಬೆಡ್‍ಗಳು ಮಾತ್ರ ಭರ್ತಿ ಆಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಸಚಿವ ಆರ್.ಅಶೋಕ್ ಅವರಿಗೆ ಸಿಎಂ ವಹಿಸಿದ್ದಾರೆ ಎಂದು ತಿಳಿಸಿದರು.

ಲಾಕ್‌ಡೌನ್‌ ಸಡಿಲಿಕೆ ಆರಂಭವಾದ ನಂತರ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಊಹೆಗೂ ಮೀರಿ ಏರಿಕೆಯಾಗುತ್ತಲೇ ಇದೆ. ಸರಾಸರಿಯಾಗಿ ಪ್ರತಿದಿನ ಸಾವಿರದಿಂದ ಎರಡು ಸಾವಿರದ ವರೆಗೆ ಸೋಂಕಿತರು ಪತ್ತೆಯಾಗುತ್ತಲೇ ಇದ್ದಾರೆ. ಹೀಗಾಗಿ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸುವುದು ಮತ್ತು ಸೂಕ್ತ ಚಿಕಿತ್ಸೆ ನೀಡುವುದು ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಕೊರೋನಾ ಸೋಂಕು ಬೆಂಗಳೂರಿನಲ್ಲಿ ಸಾಮೂದಾಯಿಕವಾಗಿ ಹರಡಿಯಾಗಿದೆ ಎಂದೂ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಭಯಕ್ಕೆ ಒಳಗಾಗಿರುವ ಅನೇಕರು ಈಗಾಗಲೇ ಬೆಂಗಳೂರನ್ನು ತ್ಯಜಿಸಿ ಸ್ವಂತ ಊರಿಗೆ ಮರಳಲು ಮುಂದಾಗಿದ್ದಾರೆ.

ಈ ನಡುವೆ ಇಂದು ಪತ್ತೆಯಾಗಿರುವ 1,843 ಸೋಂಕಿನ ಪೈಕಿ ಬೆಂಗಳೂರಿನಲ್ಲೇ ಅತ್ಯಧಿಕ ‌981 ಸೋಂಕಿತರು ಕಂಡುಬಂದಿರುವುದು ಜನರಲ್ಲಿ ಮತ್ತಷ್ಟು ಭೀತಿ ಮೂಡಿಸಿದೆ. ಈವರೆಗೆ ರಾಜಧಾನಿಯಲ್ಲಿ ಮಾತ್ರ ಸುಮಾರು 10,000 ಪ್ರಕರಣಗಳು ಕಂಡುಬಂದಿವೆ.

ಇದಲ್ಲದೆ, ಸೋಂಕಿತರಿಗೆ ಎಲ್ಲಿಂದ ಸೋಂಕು ಹರಡಿತು ಎಂಬ ಸೋಂಕಿನ ಮೂಲವನ್ನೂ ಸಹ ಆರೋಗ್ಯ ಇಲಾಖೆಯಿಂದ ಪತ್ತೆಹಚ್ಚಲು ಸಾಧ್ಯವಾಗದೆ ಇರುವುದು ಮತ್ತಷ್ಟು ತಲೆನೋವಿಗೆ ಕಾರಣವಾಗಿದೆ.

# ಸಚಿವ ಸುಧಾಕರ್ ಸುದ್ದಿಗೋಷ್ಠಿ :
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಡಾ. ಕೆ. ಸುಧಾರ್ , ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಕ್ಯೆ 25,317 ಕ್ಕೇರಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.58, ಬೆಂಗಳೂರಿನಲ್ಲಿ ಶೇ. 1.51 ರಷ್ಟಿದೆ.ಕೋವಿಡ್ ಕೇರ್ ಸೆಂಟರ್ ಮೂಲಕ ಬೆಂಗಳೂರಿನಲ್ಲಿ ಮುಂದಿನ 2-3 ದಿನಗಳಲ್ಲಿ 10 ಸಾವಿರ ಬೆಡ್‍ಗಳನ್ನು ಸಿದ್ಧ ಮಾಡಿಸಲಿದ್ದೇವೆ ಎಂದು ಸಚಿವ ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ 6,600 ಬೆಡ್ ಗಳನ್ನು ಸಿದ್ಧ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗಳು ತಮ್ಮ ಸಾಮರ್ಥ್ಯದ ಅರ್ಧದಷ್ಟು ಬೆಡ್‍ಗಳನ್ನು ನೀಡುವುದಾಗಿ ಸರ್ಕಾರಕ್ಕೆ ಅಭಯ ನೀಡಿದ್ದವು. ಇದರ ಅನ್ವಯ ನಮಗೆ ನಗರದಲ್ಲಿ 3 ಸಾವಿರ ಬೆಡ್ ಗಳು ಲಭ್ಯವಿದೆ. ಆದರೆ 156 ಬೆಡ್‍ಗಳು ಮಾತ್ರ ಭರ್ತಿ ಆಗಿದೆ. ಈ ಸಮಸ್ಯೆಯನ್ನು ಬಗೆಹರಿಸುವ ಹೊಣೆಯನ್ನು ಸಚಿವ ಆರ್.ಅಶೋಕ್ ಅವರಿಗೆ ಸಿಎಂ ವಹಿಸಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನ 17 ಮೆಡಿಕಲ್ ಕಾಲೇಜುಗಳಲ್ಲಿ 2,000 ಜನ ಅಂತಿಮ ವರ್ಷದ ವಿದ್ಯಾರ್ಥಿಗಳು ಪಾಸ್ ಔಟ್ ಆಗುತ್ತಿದ್ದಾರೆ. ಅವರು ಪಾಸ್ ಔಟ್ ಆಗುತ್ತಿದಂತೆ ಹೌಸ್ ಸರ್ಜನ್ ಆಗಿ ಕೋವಿಡ್ ಸರ್ವಿಸ್ ಬಳಸಿಕೊಳ್ಳಲು ನಿರ್ಧಾರ ಮಾಡಿದ್ದೇವೆ. ಪೋಸ್ಟ್ ಗ್ರಾಜುಯೇಶನ್‍ನಲ್ಲಿ ನೀಟ್ ಎಗ್ಸಾಂ ಬರೆಯುವವರು, ಕೋವಿಡ್ ವಾರಿಯರ್ ಆಗಿ ಸೇವೆ ಸಲ್ಲಿಸಿದರೆ 5 ಗ್ರೇಸ್ ಮಾರ್ಕ್ಸ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

1918 ರಲ್ಲಿ ಸ್ಪ್ಯಾನಿಷ್ ಫ್ಲೂ ಬಂದಾಗ 102 ವರ್ಷದ ಹಿಂದೆ ನೋಟಿಸ್ ನೀಡಿದ್ದು ನನಗೆ ಸಿಕ್ಕಿದೆ. 102 ವರ್ಷಗಳ ಹಿಂದೆ ಇದೇ ರೀತಿ ಸ್ವಚ್ಚತೆ, ಸ್ಯಾನಿಟೈಸ್ ಬಗ್ಗೆ ಸಾಮಾಜಿಕ ಅಂತರದ ಬಗ್ಗೆ ತಿಳಿಸಿದ್ದಾರೆ. ಈಗ ರಾಜ್ಯದ ಜನರು ಸಂಕಷ್ಟದಲ್ಲಿದ್ದು, ಸರ್ಕಾರ ಅವರ ನೆರವಿಗೆ ಬರಲು ಕಾರ್ಯ ಪ್ರವೃತ್ತಿಯಾಗಿದ್ದೇವೆ. ಜನರು ಕೂಡ ಸಹಕಾರ ನೀಡಿ ಸೋಂಕಿನ ಕುರಿತು ಮತ್ತಷ್ಟು ಜಾಗೃತಿ ವಹಿಸಬೇಕಿದೆ ಎಂದು ಮನವಿ ಮಾಡಿದರು.

# ವೈದ್ಯರು, ಆರೋಗ್ಯ ಸಿಬ್ಬಂದಿ, ಬಿ ಮತ್ತು ಸಿ, ಡಿ ಗ್ರೂಪ್ ನೌಕರರ ದುಪ್ಪಟ್ಟು:
ಕೊರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಬಿ ಮತ್ತು ಸಿ, ಡಿ ಗ್ರೂಪ್ ನೌಕರರ ಸಂಬಳವನ್ನು ದುಪ್ಪಟ್ಟು ಮಾಡುವ ಚಿಂತನೆ ಮಾಡಿದ್ದೇವೆ. ಸರ್ಕಾರದ ಹಂತದಲ್ಲಿ ಸಿಎಂ ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿದ್ದೇವೆ. ಕಳೆದ 120 ದಿನಗಳಿಂದ ಆರೋಗ್ಯ ಸಿಬ್ಬಂದಿ ಶ್ರಮ ವಹಿಸುತ್ತಿದ್ದು, ಅವರ ಮಾನಸಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನಾವೆಲ್ಲರೂ ಸೇರಿ ಆ ಕೆಲಸ ಮಾಡೋಣ, ಅವರಿಗೆ ನೈತಿಕ ಬೆಂಬಲ ನೀಡೋಣ ಎಂದು ಸಚಿವರು ಮನವಿ ಮಾಡಿದರು.

Facebook Comments

Sri Raghav

Admin