ರಾಜ್ಯದಲ್ಲಿ ಇಂದು 187 ಮಂದಿಗೆ ಕೊರೋನಾ ಪಾಸಿಟಿವ್, ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಜೂ.1. ರಾಜ್ಯದಲ್ಲಿ ಇಂದು ಕೊರೋನಾ ಅಟ್ಟಹಾಸ ಮೆರೆದಿದ್ದು ನಿನ್ನೆ ಸಜೆ 5 ಗಂಟೆಯಿಂದ ಇಂದು ಸಂಜೆವರೆಗೆ 187 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾಗಿದೆ.

ಇದರಲ್ಲಿ 117 ಮಂದಿ ಹೊರರಾಜ್ಯದಿಂದ ಬಂದವರಾಗಿದ್ದು ಮಹಾರಾಷ್ಟ್ರ ಮತ್ತು ತಮಿಳುನಾಡಿನಿಂದ ಬಂದ ಜನರಿಗೆ ಮಹಾ ವಕ್ಕರಿಸಿದೆ.  ಇದಲ್ಲದೆ ಮೃತರ ಸಂಖ್ಯೆ 52ಕ್ಕೆ ಏರಿದ್ದು ಜನರಲ್ಲಿ ಭಯ ಹೆಚ್ಚಿಸಿದೆ.

ಇಂದಿನ ಸೋಂಕಿತರ ಪಟ್ಟಿಯಲ್ಲಿ ಹೆಚ್ಚಿನ ಪಾಲು ಕರಾವಳಿ ಜಿಲ್ಲೆ ಉಡುಪಿಯದ್ದು. ಇಲ್ಲಿ ಒಂದೇ ದಿನ 73 ಹೊಸ ಪ್ರಕರಣಗಳು ದೃಢವಾಗಿದೆ. ಮಹಾರಾಷ್ಟ್ರ ಮೂಲದಿಂದ ಬಂದ 32 ಪ್ರಕರಣ ಗಳು, ದುಬೈನಿಂದ ಬಂದ ಮೂವರಿಗೆ ಸೋಂಕು ದೃಢವಾಗಿದ್ದರೆ, 38 ಪ್ರಕರಣಗಳ ಸೋಂಕು ಮೂಲ ಇನ್ನೂ ಪತ್ತೆಯಾಗಿಲ್ಲ.

ಬೆಂಗಳೂರು ನಗರದಲ್ಲಿ 28 ಪ್ರಕರಣಗಳು, ಕಲಬುರಗಿಯಲ್ಲಿ 24 ಕೋವಿಡ್ ಸೋಂಕು ಪ್ರಕರಣಗಳು ದೃಢವಾಗಿದೆ. ಕಳೆದೆರಡು ದಿನಗಳಲ್ಲಿ ಭಾರಿ ಸಂಖ್ಯೆಯ ಸೋಂಕಿತರನ್ನು ಕಂಡಿದ್ದ ಯಾದಗಿರಿಯಲ್ಲಿ ಇಂದು ಯಾವುದೇ ಸೋಂಕು ಪ್ರಕರಣ ದೃಢಪಡದೇ ಇರುವುದು ಸಮಾಧಾನಕರವಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಇಂದು 15 ಹೊಸ ಪ್ರಕರಣಗಳು ದೃಢವಾಗಿದ್ದು, ಹಾಸನದಲ್ಲಿ 16 ಪ್ರಕರಣ ಪತ್ತೆಯಾಗಿದೆ. ಬೀದರ್ ನಲ್ಲಿ ಎರಡು, ಚಿಕ್ಕಬಳ್ಳಾಪುರ ಐದು, ದಕ್ಷಿಣ ಕನ್ನಡ ನಾಲ್ಕು, ವಿಜಯಪುರ ಒಂದು, ಬಾಗಲಕೋಟೆ, ಧಾರವಾಡದಲ್ಲಿ ತಲಾ ಎರಡು, ಶಿವಮೊಗ್ಗಒಂಬತ್ತು, ಬಳ್ಳಾರಿ ಮೂರು, ಕೋಲಾರ, ಹಾವೇರಿ ಮತ್ತು ರಾಮನಗರದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಗುಲ್ಬರ್ಗದಲ್ಲಿ 24 ಮಂದಿಗೆ ಸೋಂಕು ತಗಲಿದ್ದು ನಾಲ್ಕು ಮಂದಿ ಮಕ್ಕಳಿದ್ದಾರೆ ಇಡೀ ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದ್ದು 304 ಕ್ಕೆ ಇದೆ ರೈಲಿನಲ್ಲಿ 2000 ಹೆಚ್ಚುಮಂದಿ ಬೆಂಗಳೂರಿಗೆ ಮುಂಬೈನಿಂದ ಬರುತ್ತಿದ್ದು ಆತಂಕ ಮನೆಮಾಡಿದೆ.

# ಶಿವಮೊಗ್ಗದಲ್ಲಿ 9ಜನರಿಗೆ ಪಾಸಿಟಿವ್ :
ಶಿವಮೊಗ್ಗದಲ್ಲಿ ಇಂದು ಮತ್ತೆ 9 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ ಇವರೆಲ್ಲರೂ ಬೆಂಗಳೂರಿನಿಂದ ಬಂದವರಾಗಿದ್ದಾರೆ. P-1305 ರ ಸಂಪರ್ಕದಿಂದ 30 ವರ್ಷದ ಮಹಿಳೆಗೆ ಹಾಗೂ 52 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢ ಪಟ್ಟಿದ್ದು ಉಳಿದವರ ಸೋಂಕಿನ ಮೂಲಗಳನ್ನು ಪತ್ತೆ ಹಚ್ಚುವ ಕಾರ್ಯ ಜಿಲ್ಲಾಡಳಿತದಿಂದ ನಡೆಯುತ್ತಿದೆ.

ಸದ್ಯ ಸೋಂಕಿತರು ಜಿಲ್ಲೆಯ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 51ಕ್ಕೆ ಏರಿಕೆಯಾಗಿದ್ದು ಇದರೊಂದಿಗೆ 26 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.

# ಉಡುಪಿ ಜಿಲ್ಲೆಯಲ್ಲಿ 73 ಕೊರೋನ ಪಾಸಿಟಿವ್ :
ಉಡುಪಿ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನದಲ್ಲಿ ಒಟ್ಟು 73 ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಉಡುಪಿ ಜಿಲ್ಲೆ ಕೊರೋನ ವೈರಸ್ ಸೋಂಕಿತರ ಪತ್ತೆಯಲ್ಲಿ ದಾಖಲೆಯನ್ನೇ ಬರೆದಿದೆ.

ಒಂದೇ ದಿನದಲ್ಲಿ 73 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಜಿಲ್ಲೆಯಲ್ಲಿ ಕಾಣಿಸಿಕೊಂಡ ಸೋಂಕಿತರ ಒಟ್ಟು ಸಂಖ್ಯೆ 260ಕ್ಕೇರಿದೆ. ಈಗ 195 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿದ್ದು, 64 ಮಂದಿ ಚಿಕಿತ್ಸೆಯ ಬಳಿಕ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮುಂಬೈಯಿಂದ ಬಂದ ಒಬ್ಬರು ಪಾಸಿಟಿವ್ ಇದ್ದ ವ್ಯಕ್ತಿ ಹೃದಯಾಘಾತದಿಂದ ನಿಧನರಾಗಿದ್ದರು.

Facebook Comments

Sri Raghav

Admin