ನ್ಯೂಯಾರ್ಕ್ : ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ, 19 ಮಂದಿ ಬಲಿ…!

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್,ಜ.10- ಕೆಟ್ಟಿದ್ದ ಎಲೆಕ್ಟ್ರಿಕ್ ಸ್ಪೇಸ್ ಹೀಟರ್ ಒಂದು ಸೃಷ್ಟಿಸಿದ ಬೆಂಕಿಗೆ ಒಂಬಯತ್ತು ಮಕ್ಕಳೂ ಸೇರಿದಂತೆ 19 ಜನರು ಮೃತಪಟ್ಟ ಘಟನೆ ನ್ಯೂಯಾರ್ಕ್ ಸಿಟಿ ಅಪಾರ್ಟ್‍ಮೆಂಟ್ ಕಟ್ಟಡವೊಂದರಲ್ಲಿ ಜರುಗಿದೆ ಎಂದು ಅಗ್ನಿಶಾಮಕ ಆಯುಕ್ತರು ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಂಡು ವ್ಯಾಪಿಸಿದ ಅಗ್ನಿಜ್ವಾಲೆ 2ನೇ ಮತ್ತು ಮೂರನೇ ಮಹಡಿಗಳನ್ನು ಸಂಪೂರ್ಣ ಸುಟ್ಟು ಹಾಕಿದೆ ಎಂದು ಎಫ್‍ಡಿಎನ್‍ಐ ಆಯುಕ್ತ ಡೇನಿಯಲ್ ನಿಗ್ರೋ ಹೇಳಿದ್ದಾರೆ. ಮೇಯರ್ ಎರಿಕ್ ಆ್ಯಡಮ್ಸ್, ಗವರ್ನರ್ ಕ್ಯಾಥೀ ಹೋಚಲ್ ಮತ್ತು ಅಮೆರಿಕ ಸೆನೆಟರ್ ಚಾಲ್ರ್ಸ್ ಶೂಮರ್ ಅವರು ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಗ್ನಿಜ್ವಾಲೆಗಳು ಅಪಾರ್ಟ್‍ಮೆಂಟ್‍ನ ಕಿಟಕಿಗಳ ಮೂಲಕ ವ್ಯಾಪಿಸಿ ಕಟ್ಟಡದಲ್ಲಿ ದಟ್ಟ ಹೊಗೆ ತುಂಬಿಕೊಂಡಿತು. ಓರ್ವ ನಿವಾಸಿಯನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ.

ಮೇಯರ್ ಎರಿಕ್ ಆ್ಯಡಮ್ಸ್ ಅವರ ಹಿರಿಯ ಸಲಹೆಗರ ಸ್ಟೀಫನ್ ರಿಂಗಲ್ ಅವರು ಸಾವಿನ ಸಂಖ್ಯೆಯನ್ನು ಖಚಿತಪಡಿಸಿದ್ದಾರೆ. ಮೃತ ಮಕ್ಕಳು 16 ವರ್ಷಕ್ಕಿಂತ ಕೆಳಗಿನ ವಯೋಮಾನದವರು ಎಂದು ಅವರು ಹೇಳಿದ್ದಾರೆ.
ಚಿಂತಾಜನಕ ಸ್ಥಿತಿಯಲ್ಲಿರುವ 13 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಒಟ್ಟು ಐದು ಡಜನ್‍ಗೂ ಅಕ ಜನರು ಗಾಯಗೊಂಡಿದ್ದಾರೆ. ಬಹುತೇಕ ಜನರು ದಟ್ಟ ಹೊಗೆ ಕುಡಿದು ಮೃತರಾಗಿದ್ದಾರೆ ಎಂದು ಅಗ್ನಿಶಾಮಕ ಆಯುಕ್ತ ಡೇನಿಯಲ್ ನೀಗ್ರೋ ತಿಳಿಸಿದ್ದಾರೆ.

Facebook Comments

Sri Raghav

Admin