1960 ರಲ್ಲಿ ಜನಿಸಿದ್ದರೆ ಚೆನ್ನಾಗಿ ಇರುತ್ತಿತ್ತು : ಅಮಿರ್ ಖಾನ್

ಈ ಸುದ್ದಿಯನ್ನು ಶೇರ್ ಮಾಡಿ

amir-khan

ಬಾಲಿವುಡ್‍ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಏನೇ ಹೇಳಿಕೆ ನೀಡಲಿ ಅದಕ್ಕೆ ತೂಕವಿರುತ್ತದೆ. ಈಗ ಎಕೆ ನೀಡಿರುವ ಹೇಳಿಕೆ ಮತ್ತೆ ಸುದ್ದಿ ಮಾಡಿದೆ. 1960 ಭಾರತೀಯ ಸಿನಿಮಾ ಸ್ವರ್ಣ ಯುಗ. ಆ ಅವಧಿಯಲ್ಲಿ ನಾನು ಜನಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಮಿಸ್ಟರ್ ಖಾನ್ ಹೇಳಿದ್ದಾನೆ. ತನ್ನ ಹೇಳಿಕೆಗೆ ವಿಶ್ಲೇಷನ್ಮಾತಕ ಸ್ಪಷ್ಟೀಕರಣವನ್ನೂ ನೀಡಿದ್ದಾರೆ.  60ರಲ್ಲಿ ಕೆ.ಆಸಿಫ್, ಗುರುದತ್, ಮಜ್ರೂಹ್ ಸುಲ್ತಾನ್‍ಪುರಿಯಂಥ ಸಿನಿಮಾ ದಿಗ್ಗಜರು ಭಾರತದ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದರು. ಆ ಸಂದರ್ಭದಲ್ಲಿ ದೇಶದಲ್ಲಿ ಬಿಕ್ಕಟ್ಟು ತಾಂಡವಾಡುತ್ತಿತ್ತು.

ಇನ್ನೊಂದೆಡೆ ಸಾಮಾಜಿಕ ಸಮಸ್ಯೆಗಳಿದ್ದವು. ಈ ಎಲ್ಲ ಸಮಸ್ಯೆಗಳನ್ನು ಆಗಿನ ಚಿತ್ರರಂಗದ ಖ್ಯಾತನಾಮರು ತಮ್ಮ ಕಲಾವಂತಿಕೆ ಮೂಲಕ ಪ್ರತಿಬಿಂಬಿಸಿ ಅದರ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಿದ್ದರು ಎಂದು ಖಾನ್ ವಿಮರ್ಶಿಸಿದ್ದಾನೆ.   ಆಗಿನ ಸಮಯದಲ್ಲಿ ತಯಾರಾದ ಸಿನಿಮಾಗಳು, ಚಿತ್ರ ಸಾಹಿತ್ಯ ಮತ್ತು ಹಾಡುಗಳಲ್ಲಿ ಜೀವಂತಿಕೆ ಇರುತ್ತಿತ್ತು. ನಾನು ಅ ಅವಯಲ್ಲಿ ಜನಿಸಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳಿದ್ದಾರೆ.  ಚಿತ್ರ ನಿರ್ಮಾಪಕರೂ ಆಗಿರುವ ತನ್ನ ಚಿಕ್ಕಪ್ಪ ನಾಸಿರ್ ಹುಸೇನ್‍ನ ಜೀವನಕಥೆ ಮ್ಯೂಸಿಕ್ ಮಸ್ತಿ.

ಮಾಡರ್‍ನಿಟಿ : ದಿ ಸಿನಿಮಾ ಆಫ್ ನಾಸಿರ್ ಹುಸೇನ್ ಬಿಡುಗಡೆ ಸಂದರ್ಭದಲ್ಲಿ ನಡೆದ ಸಂವಾದದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ನೀಡಿದ ವಿಶ್ಲೇಷಣೆ ಮತ್ತು ವಿಮರ್ಶೆಗೆ ಸಭಿಕರು ತಲೆದೂಗಿದರು.

► Follow us on –  Facebook / Twitter  / Google+

Facebook Comments

Sri Raghav

Admin