ಕಮಲನಾಥ್‍ಗೆ ಸಿಎಂ ಪಟ್ಟ ನೀಡಿ ಸಿಖ್ ಭಾವನೆ ಕಡೆಗಣಿಸಿದೆ ಕಾಂಗ್ರೆಸ್ : ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ಫತೇಹಾಬಾದ್,ಮೇ 8- 1984ರ ಸಿಖ್ ಗಲಭೆಯಲ್ಲಿ ಆರೋಪಿಯಾಗಿರುವ ಮಧ್ಯಪ್ರದೇಶ ಸಿಎಂ ಕಮಲನಾಥ್ ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಿ ಕಾಂಗ್ರೆಸ್ ಸಿಖ್ ಜನಾಂಗದವರ ಭಾವನೆಗಳನ್ನು ಕಡೆಗಣಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಇಲ್ಲಿನ ಚುನಾವಣಾ ರ್ಯಾಲಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ನಿಮ್ಮ ಚೌಕಿದಾರ್, ಸಿಖ್ ಸಮುದಾಯಕ್ಕೆ ಪ್ರಮಾಣ ಮಾಡುತ್ತಿದ್ದೇನೆ. 1984ರ ಗಲಭೆಯ ಅಪರಾಧಿಗಳು ಖಂಡಿತ ಶಿಕ್ಷೆಗೊಳಪಡುತ್ತಾರೆ.

ಅಪರಾಧಿಗಳಿಗೆ ಜೀವಾಧಿ ಅಥವಾ ಮರಣದಂಡನೆ ವಿಧಿಸುವ ಪ್ರಕ್ರಿಯೆಯಲ್ಲಿದ್ದೇವೆ. ಇದಕ್ಕೆ ತೃಪ್ತಿಹೊಂದಿದ್ದಾನೆ ಎಂದಿದ್ದಾರೆ. ಕಾಂಗ್ರೆಸ್‍ಗೆ ನಾಚಿಕೆಯಾಗಬೇಕು, 1984 ಸಿಖ್ ಗಲಭೆಯಲ್ಲಿ ಆರೋಪಿಯಾಗಿರುವ ಕಮಲ್‍ನಾಥ್ ಅವರನ್ನು ಮುಖ್ಯಮಂತ್ರಿ ಮಾಡಿದ್ದು, ಅವರು ಎಂದಿಗೂ ನಿಮ್ಮ ಭಾವನೆಗಳಿಗೆ ಬೆಲೆ ಕೊಡುವುದಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್ ಬಹುಮತ ಪಡೆಯುವುದಿಲ್ಲ: ಐದು ಹಂತದ ಚುನಾವಣೆಗಳ ನಂತರ ಸ್ಪಷ್ಟವಾಗಿದೆ ಕಾಂಗ್ರೆಸ್ ತನ್ನ ವಿರೋಧಿ ಹೋರಾಟವನ್ನು ನಿಲಿಸಿದ್ದು, ಜನರ ಆಶೀರ್ವಾದದೊಂದಿಗೆ ಬಿಜೆಪಿ ಖಚಿತವಾಗಿ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರ ಬೆಂಬಲದಿಂದ 2014ರಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ರಚನೆಯಾಯಿತು ಮತ್ತು ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಸ್ಥಾನ ಹೆಚ್ಚಿದೆ. ಫಿರ್ ಏಕ್ ಬಾರ್ ಮೋದಿ ಎಂಬ ಜನರ ಕೂಗು ಮೇ 23ರ ಫಲಿತಾಂಶದ ನಂತರ ಮತ್ತೆ ಸ್ಪಷ್ಪವಾಗಲಿದೆ ಎಂದರು.

Facebook Comments

Sri Raghav

Admin