2ತಲೆ, 4 ಕಣ್ಣಿರುವ ವಿಚಿತ್ರ ಕರು ಜನನ

ಈ ಸುದ್ದಿಯನ್ನು ಶೇರ್ ಮಾಡಿ

Arasikere

ಹಾಸನ,ಜ.9- ಮನುಷ್ಯ ಹಾಗೂ ಪ್ರಾಣಿಗಳು ಚಿತ್ರವಿಚಿತ್ರವಾಗಿ ಹುಟ್ಟಿರುವ ಸುದ್ದಿಗಳನ್ನು ಆಗಾಗ ಕೇಳಿರುತ್ತೇವೆ. ಅಂಥದೊಂದು ಘಟನೆ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನ ಗೊಲ್ಲರಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಮ್ಮಯ್ಯ ಎಂಬುವರಗೆ ಸೇರಿದ ಹಸುವೊಂದು ವಿಚಿತ್ರ ಕರುವಿಗೆ ಜನ್ಮ ನೀಡಿದೆ. ಕರುವಿಗೆ ಎರಡು ತಲೆ, ನಾಲ್ಕು ಕಣ್ಣು , ಎರಡು ಕಿವಿಗಳಿವೆ. ಅದೃಷ್ಟವಶಾತ್ ಹಸು ಮತ್ತು ಕರು ಎರಡೂ ಆರೋಗ್ಯವಾಗಿವೆ. ಈ ವಿಚಿತ್ರ ಕರು ಹಾಗೂ ಹಸುವನ್ನು ನೋಡಲು ಸುತ್ತಮುತ್ತಲ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ. ಪ್ರಕೃತಿಯ ವಿಸ್ಮಯವೋ ಅಥವಾ ದೇವರ ಕೋಪವೋ… ಗೊತ್ತಿಲ್ಲ. ಇಂಥ ಕರುವೊಂದು ಗ್ರಾಮದಲ್ಲಿ ಜನಿಸಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin