ಐರ್ಲೆಂಡ್ ವಿರುದ್ಧ 2ನೇ ಪಂದ್ಯದಲ್ಲಿ ಭಾರತಕ್ಕೆ 143 ರನ್’ಗಳ ಭರ್ಜರಿ ಜಯ, ಟಿ-20 ಸರಣಿ ಕೈವಶ

ಈ ಸುದ್ದಿಯನ್ನು ಶೇರ್ ಮಾಡಿ

Rahu

ಡಬ್ಲಿನ್. ಜೂ.29: ಐರ್ಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಭಾರತ  143 ರನ್ ಗಳ ಭರ್ಜರಿ ಜಯ ಗಳಿಸುವ ಮೂಲಕ 2 ಪಂದ್ಯಗಳ ಟಿ-20 ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.  ಈ ಮೊದಲು ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ರಾಹುಲ್ ಮತ್ತು ರೈನಾ ಭರ್ಜರಿ ಅರ್ಧ ಶತಕದ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿ ಐರ್ಲೆಂಡ್ ಗೆ 214 ರನ್ ಟಾರ್ಗೆಟ್ ನೀಡಿತ್ತು. ಭಾರತದ ಪರ ರೋಹಿತ್ ಶರ್ಮಾ ಶೂನ್ಯಕ್ಕೆ ನಿರ್ಗಮಿಸಿದರೆ, ಸುರೇಶ್ ರೈನಾ, 69 ರನ್ ಗಳಿಸಿದರು. ಮನೀಶ್ ಪಾಂಡೆ ಅಜೇಯ 21 ರನ್, ಹಾರ್ದಿಕ್ ಪಾಂಡ್ಯ ಅಜೇಯ 32 ರನ್ ಗಳಿಸಿದರು.

ಇನ್ನು ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ ಆರಂಭದಲ್ಲೇ ಎಡವಿತು. 12.3 ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 70 ರನ್ ಗಳಿಸಷ್ಟೇ ಶಕ್ತವಾಯಿತು. ಈ ಮೂಲಕ ಪಂದ್ಯದಲ್ಲಿ ಹೀನಾಯ ಸೋಲು ಕಂಡಿತು.

ರಾಹುಲ್ ಭರ್ಜರಿ ಅರ್ಧ ಶತಕ :
ಮೊದಲ ಟಿ20 ಪಂದ್ಯದಲ್ಲಿ ಅವಕಾಶ ವಂಚಿತರಾದ ರಾಹುಲ್, ದ್ವಿತೀಯ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ರಾಹುಲ್ 36 ಎಸೆತದಲ್ಲಿ 3 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿದರು. ರೈನಾ ಕೂಡ 45 ಎಸೆತಗಳಲ್ಲಿ 69 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು.
ಸ್ಕೋರ್ :
ಸಂಕ್ಷಿಪ್ತ ಭಾರತ : 213/4
ಐರ್ಲೆಂಡ್ : 70/10 (12.3/20 ov, target 214)

Facebook Comments

Sri Raghav

Admin