2ನೇ ಟೆಸ್ಟ್ ಗೆಲ್ಲಲು ಭಾರತದ ಪಂಚ ಸೂತ್ರಗಳು

ಈ ಸುದ್ದಿಯನ್ನು ಶೇರ್ ಮಾಡಿ

second-test

ಬೆಂಗಳೂರು,ಮಾ.3- ಸತತ ಗೆಲುವಿನಿಂದ ಮುನ್ನುಗ್ಗುತ್ತಿದ್ದ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ನಿಂದ ಸೋಲು ಕಂಡಿದ್ದರೂ ಕೂಡ ನಾಳೆಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಗೆಲ್ಲಲು ಪಂಚ ಸೂತ್ರಗಳತ್ತ ಗಮನ ಹರಿಸಬೇಕಾಗಿದೆ.

ಜಯಂತ್‍ಗೆ ಔಟ್, ಕರುಣ್ ಇನ್:
ಪುಣೆ ಟೆಸ್ಟ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ವಿರಾಟ್ ಕೊಹ್ಲಿ ಈಗ ಬ್ಯಾಟಿಂಗ್ ಸ್ವರ್ಗದಂತಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚುವರಿ ಸ್ಪಿನ್ನರ್ ಜಯಂತ್ ಯಾದವ್‍ಗೆ ಕೊಕ್ ಕೊಟ್ಟು ಕನ್ನಡಿಗ, ಇಂಗ್ಲೆಂಡ್ ವಿರುದ್ಧ ತ್ರಿಶತಕ ಗಳಿಸಿದ ಕರುಣ್‍ನಾಯರ್‍ಗೆ ತಂಡದಲ್ಲಿ ಸ್ಥಾನ ಕಲ್ಪಿಸಬೇಕಾಗಿದೆ.

ಟಾಸ್ ಗೆದ್ದರೆ ಬ್ಯಾಟಿಂಗ್ ಫಸ್ಟ್:
ನಾಳೆಯ ಪಂದ್ಯದಲ್ಲಿ ಟಾಸ್ ಗೆದ್ದರೆ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಳ್ಳಬೇಕು. ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಕೂಡ ಇದೇ ಅಭಿಮತವನ್ನು ವ್ಯಕ್ತಪಡಿಸಿದ್ದು , ಭಾರತ ಮೊದಲ ಇನ್ನಿಂಗ್ಸ್‍ನಲ್ಲೇ 500ಕ್ಕಿಂತಲೂ ಹೆಚ್ಚು ರನ್‍ಗಳನ್ನು ದಾಖಲಿಸಿ ಆಸ್ಟ್ರೇಲಿಯಾದ ಬ್ಯಾಟ್ಸ್‍ಮನ್‍ಗಳ ಮೇಲೆ ಒತ್ತಡ ಹೇರಬೇಕು.

ಡಿಎಸ್‍ಆರ್ ಬಗ್ಗೆ ಅರಿವು ಅಗತ್ಯ:
ಪುಣೆ ಪಂದ್ಯದಲ್ಲಿ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡ ಡಿಎಸ್‍ಆರ್‍ನತ್ತಲೂ ಕೊಹ್ಲಿ ಚಿತ್ತ ಹರಿಸಬೇಕು. ಕೊಹ್ಲಿ ನಾಯಕನಾದ ನಂತರ 17 ಬಾರಿ ಡಿಆರ್‍ಎಸ್‍ನಲ್ಲಿ ಯಶಸ್ವಿಯಾಗಿದ್ದು 55 ಬಾರಿ ವಿಫಲಗೊಂಡಿದ್ದರೆ ಚಿನ್ನಸ್ವಾಮಿ ಟೆಸ್ಟ್‍ನಲ್ಲಿ ಆ ಕಡೆಯೂ ತಂಡ ಗಮನ ಹರಿಸುವ ಅವಶ್ಯಕತೆ ಇದೆ.

ಬಲಿಷ್ಠ ಫೀಲ್ಡಿಂಗ್:
ಪುಣೆ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್‍ಗೆ 2 ಬಾರಿ ಜೀವದಾನ ನೀಡಿದ್ದೇ ಅಲ್ಲದೆ 5ಕ್ಕೂ ಹೆಚ್ಚು ಕ್ಯಾಚ್‍ಗಳನ್ನು ಕೈ ಚೆಲ್ಲಿದ್ದು ಕೂಡ ತಂಡದ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಈ ವಿಭಾಗದಲ್ಲೂ ಆಟಗಾರರು ಚಿತ್ತ ಹರಿಸಬೇಕಾದ ಅವಶ್ಯಕತೆ ಇದೆ.

ಬೌಲಿಂಗ್ ಚುರುಕು:
ಟೆಸ್ಟ್ ರ್ಯಾಂಕಿಂಗ್‍ನಲ್ಲಿ ಟಾಪ್ 1 ಹಾಗೂ ಟಾಪ್ 2 ಸ್ಥಾನಗಳಲ್ಲಿ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಾಡೇಜಾ ಅವರು ಪುಣೆ ಟೆಸ್ಟ್ ನಲ್ಲಿ ತಮ್ಮ ಎಂದಿನ ಬೌಲಿಂಗ್ ಸಾಮಥ್ರ್ಯವನ್ನು ಪ್ರದರ್ಶಿಸಿದರೂ ಎಡವಿದ್ದರೂ ಕೂಡ ಬ್ಯಾಟಿಂಗ್ ಪಿಚ್ ಎನಿಸಿಕೊಂಡಿರುವ ಬೆಂಗಳೂರು ಪಿಚ್‍ನಲ್ಲಿ ಎದುರಾಳಿ ಬ್ಯಾಟ್ಸ್‍ಮನ್‍ಗಳ ರನ್ ದಾಹಕ್ಕೆ ಬ್ರೇಕ್ ಹಾಕುವಂತೆ ಬೌಲಿಂಗ್ ಮಾಡಬೇಕು. ವೇಗಿ ಇಶಾಂತ್ ಶರ್ಮಾರನ್ನು ಕೈಬಿಟ್ಟು ಭುವನೇಶ್ವರ್‍ಕುಮಾರ್ ಸ್ಥಾನ ಕಲ್ಪಿಸಿದರೆ ವೇಗದ ವಿಭಾಗದಲ್ಲಿ ಉಮೇಶ್‍ಯಾದವ್ ಹಾಗೂ ಭುವನೇಶ್ವರ್‍ಕುಮಾರ್ ಕೂಡ ಅದ್ಭುತ ಸ್ಪೆಲ್‍ನಿಂದ ಬೌಲಿಂಗ್ ಮಾಡುವ ಸಾಮಥ್ರ್ಯವನ್ನು ಹೊಂದಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin