2ನೇ ಪತ್ನಿಯನ್ನು ಕೊಂದು, ಬೈಕ್ ನಲ್ಲಿ ಶವ ತಂದು ಆಸ್ಪತ್ರೆ ಬಳಿ ಎಸೆದು ಹೋದ ಪಾಪಿ ಪತಿ..!

ಈ ಸುದ್ದಿಯನ್ನು ಶೇರ್ ಮಾಡಿ

Wife-Murder--v01

ಯಾದಗಿರಿ, ಡಿ.5- ಪ್ರೀತಿಸಿ ಮದುವೆಯಾಗಿದ್ದ ಎರಡನೆ ಪತ್ನಿಯನ್ನು ಹೊಡೆದು ಕೊಂದ ಪತಿ ತನ್ನ ಬೈಕ್‍ನಲ್ಲಿ ಶವ ಸಾಗಿಸಿ ಆಸ್ಪತ್ರೆ ಬಳಿ ಎಸೆದು ಹೋಗಿರುವ ಅಮಾನವೀಯ ಘಟನೆ ಸುರಪುರ ತಾಲ್ಲೂಕು ರತ್ನಾಪುರ ಗ್ರಾಮದಲ್ಲಿ ನಡೆದಿದೆ. ಶಾಂತ ಕೊಲೆಯಾದ ದುರ್ದೈವಿ. ವೆಂಕಟೇಶ ಪತ್ನಿಯನ್ನು ಕೊಲೆ ಮಾಡಿರುವ ಪತಿ.

ವಿವರ:

ವೆಂಕಟೇಶ , ಶಾಂತ ಬೆಂಗಳೂರಿನ ಗಾರ್ಮೆಂಟ್ಸ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಇಬ್ಬರಿಗೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿ ಕಳೆದ ಮೇ ತಿಂಗಳಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಆದರೆ ವೆಂಕಟೇಶನಿಗೆ ಈ ಮೊದಲೇ ಮದುವೆಯಾಗಿ ಮೂವರು ಮಕ್ಕಳಿದ್ದರು ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿದೆ. ಈ ನಡುವೆ ವೆಂಕಟೇಶ ಶಾಂತಳನ್ನು ಹೊಡೆದು ಕೊಲೆ ಮಾಡಿದ್ದಾನೆ. ಬೆಳಗ್ಗೆ ಆಕೆಯ ದೇಹವನ್ನು ತನ್ನ ಬೈಕ್‍ನಲ್ಲಿ ಸಾಗಿಸಿ ಆಸ್ಪತ್ರೆ ಮುಂಭಾಗ ಎಸೆದು ಆಕೆಯ ದೇಹದ ಮೇಲೆ ಅವಳ ಗುರುತಿನ ಚೀಟಿ ಬಿಸಾಡಿ ಪರಾರಿಯಾಗಿದ್ದಾನೆ. ಈ ದೃಶ್ಯಾವಳಿಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸುರಪುರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin