2ನೇ ಬಾರಿ ಟ್ರಂಪ್-ಪುಟಿನ್ ರಹಸ್ಯ ಮಾತುಕತೆ

ಈ ಸುದ್ದಿಯನ್ನು ಶೇರ್ ಮಾಡಿ

Trump-And-Putin

ವಾಷಿಂಗ್ಟನ್, ಜು.19-ಜಗತ್ತಿನ ಎರಡು ಮಹಾ ಶಕ್ತಿಶಾಲಿ ದೇಶಗಳ ಅಧಿಪತಿಗಳು ಎರಡನೇ ಬಾರಿ ರಹಸ್ಯ ಮಾತುಕತೆ ನಡೆಸಿರುವ ಸಂಗತಿಯೊಂದು ಇದೀಗ ಬಹಿರಂಗಗೊಂಡಿದೆ. ಜರ್ಮನಿಯಲ್ಲಿ ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎರಡನೆ ಗೌಪ್ಯ ಸಭೆ ನಡೆಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಜಿ-20 ಶೃಂಗದ ಔತಣಕೂಟದಲ್ಲಿ ಈ ಇಬ್ಬರು ನಾಯಕರು ಮಹತ್ವದ ಸಮಾಲೋಚನೆ ನಡೆಸಿದರು ಎಂಬುದನ್ನು ಖಚಿತಪಡಿಸಿರುವ ಶ್ವೇತಭವನ, ಆದರೆ ಇದನ್ನು ಎರಡನೇ ಸಭೆ ಎಂದು ಪರಿಗಣಿಸುವುದು ತಪ್ಪು. ಭೋಜನ ಕೂಟದ ನಂತರ ಟ್ರಂಪ್ ಮತ್ತು ಪುಟಿನ್ ನಡುವೆ ನಡೆದ ಸಂಕ್ಷಿಪ್ತ ಮಾತುಕತೆ ಅಷ್ಟೆ ಎಂದು ಸ್ಪಷ್ಟಪಡಿಸಿದೆ.  ಇದೇನು ರಹಸ್ಯ ಸಭೆ ಅಥವಾ ಗೌಪ್ಯ ಸಮಾಲೋಚನೆಯಲ್ಲ. ಕೆಲ ಕಾಲ ಈ ಇಬ್ಬರು ನಾಯಕರು ಆನೌಪಚಾರಿಕವಾಗಿ ಕೆಲವು ವಿಷಯಗಳ ಕುರಿತು ಚರ್ಚೆಸಿದ್ದಾರೆ ಎಂದು ವೈಟ್‍ಹೌಸ್ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin