2ನೇ ಮಹಡಿಯಿಂದ 18 ದಿನಗಳ ಶಿಶುವನ್ನು ಎಸೆದ ಕಟುಕಿ ಚಿಕ್ಕಮ್ಮ

ಈ ಸುದ್ದಿಯನ್ನು ಶೇರ್ ಮಾಡಿ

Baby

ಕಾನ್ಪುರ, ಸೆ.6-ಕಲ್ಲು ಹೃದಯದ ಮಹಿಳೆಯೊಬ್ಬಳು ಮತ್ಸರದಿಂದ 18 ದಿನಗಳ ಶಿಶುವನ್ನು ಆಸ್ಪತ್ರೆಯ 2ನೇ ಮಹಡಿಯಿಂದ ಎಸೆದ ಘಟನೆ ಉತ್ತರಪ್ರದೇಶದ ಕಾನ್ಪುರದಿಂದ ವರದಿಯಾಗಿದೆ. ಅದೃಷ್ಟವಶಾತ್ ಹಸುಳೆ ಪ್ರಾಣಾಪಾಯದಿಂದ ಪಾರಾಗಿದೆ. ಈ ಕೃತ್ಯ ಎಸಗಿದ ಶಿಶುವಿನ ಚಿಕ್ಕಮ್ಮಳನ್ನು ಪೊಲೀಸರು ಬಂಧಿಸಿದ್ದಾರೆ.  ಈ ನಿರ್ದಯಿ ಚಿಕ್ಕಮ್ಮ ಮಗುವನ್ನು ಎಸೆದ ದೃಶ್ಯವು ಆಸ್ಪತ್ರೆ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈಕೆ ಎಸೆದ ಮಗು ನೆಲಕ್ಕೆ ಬೀಳಲಿಲ್ಲ. ಆಸ್ಪತ್ರೆಯ ಕಟ್ಟಡದ ಪಕ್ಕದಲ್ಲಿದ್ದ ಬಲೆ ಮೇಲೆ ಬಿದ್ದ ಮಗು ಪವಾಡ ಸದೃಶ ಪಾರಾಯಿತು.

ನವಜಾತ ಶಿಶು ವಾರ್ಡ್‍ನಲ್ಲಿ ಇಲ್ಲದಿರುವುದರಿಂದ ಆತಂಕಗೊಂಡ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿದರು. ಇದೇ ವೇಳೆ ಬಲೆಯಲ್ಲಿದ್ದ ಮಗುವನ್ನು ವಾರ್ಡ್ ಬಾಯ್ ಗಮನಿಸಿದ. ಮಗುವನ್ನು ರಕ್ಷಿಸಿದ.ಈ ಪ್ರಕ್ರಿಯೆಯಲ್ಲಿ ವಾರ್ಡ್‍ಬಾಯ್ ಕಾಲು ಮುರಿತಕ್ಕೆ ಒಳಗಾಗಿದೆ. ಕಠೋರ ಹೃದಯದ ಚಿಕ್ಕಮ್ಮಳನ್ನು ಪೊಲೀಸರು ಬಂಧಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin