2ನೇ ಸ್ಕಾರ್ಪಿನ್ ಶ್ರೇಣಿ ಜಲಾಂತರ್ಗಾಮಿ ಖಾಂಡೇರಿ ಲೋಕಾರ್ಪಣೆ : ಚೀನಾ, ಪಾಕ್ ಗೆ ನಡುಕ

ಈ ಸುದ್ದಿಯನ್ನು ಶೇರ್ ಮಾಡಿ

Khanderi-sumberin

ಮುಂಬೈ, ಜ.12-ವೈರಿ ಪಡೆಯ ಟಾರ್ಪೆಡೋಗಳು ಮತ್ತು ನೌಕಾ ನಾಶಕ ಕ್ಷಿಪಣಿಗಳನ್ನು ಧಂಸಗೊಳಿಸುವ ಹಾಗೂ ಅತ್ಯಂತ ಸೂಕ್ಷ್ಮ ಬೇಹುಗಾರಿಕೆ ನಡೆಸುವ ಅಗಾಧ ಸಾಮಥ್ರ್ಯದ ಎರಡನೇ ಸ್ಕಾರ್ಪಿನ್ ಶ್ರೇಣಿ ಜಲಾಂತರ್ಗಾಮಿ ಖಾಂಡೇರಿ ಸಮರನೌಕೆಯನ್ನು ಭಾರತ ಇಂದು ಲೋಕಾರ್ಪಣೆ ಮಾಡಿದೆ. ಇದರೊಂದಿಗೆ ಜಲಾಂತರ್ಗಾಮಿ ವಿಷಯದಲ್ಲಿ ವಿನಾಕಾರಣ ಕ್ಯಾತೆ ತೆಗೆಯುತ್ತಿರುವ ಚೀನಾ ಮತ್ತು ಪಾಕಿಸ್ತಾನಕ್ಕೆ ಭಾರತವು ಈ ಮೂಲಕ ತನ್ನ ಸಾಮಥ್ರ್ಯವನ್ನು ಸಾಬೀತುಪಡಿಸಿದೆ.  ಮುಂಬೈನ ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್)ನ ಬಂದರುಕಟ್ಟೆಯಲ್ಲಿ (ಯಾರ್ಡ್ 11876) ಇಂದು ಸಾಗರಗರ್ಭ ಮತ್ತು ಸಮುದ್ರದ ಮೇಲ್ಮೈ ಎರಡರಲ್ಲೂ ಶತ್ರುಗಳ ನೌಕೆಗಳು, ಕ್ಷಿಪಣಿಗಳು ಹಾಗೂ ಸಬ್‍ಮರೀನ್‍ಗಳನ್ನು ಹೊಡೆದುರುಳಿಸುವ ಈ ಜಲಾಂತರ್ಗಾಮಿಯನ್ನು ಸೇವೆಗೆ ಸಮರ್ಪಿಸಲಾಯಿತು.

ರಕ್ಷಣಾ ಖಾತೆ ರಾಜ್ಯ ಸಚಿವ ಸುಭಾಷ್ ಭಾಮ್ರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರ ಪತ್ನಿ ಬೀನಾ ಭಾಮ್ರೆ ಈ ಸಬ್‍ಮರೀನ್‍ನನ್ನು ಅನಾವರಣಗೊಳಿಸಿದರು. ಭಾರತೀಯ ನೌಕಾ ಪಡೆ ಮುಖ್ಯಸ್ಥ ಅಡ್ಮಿರಲ್ ಸುನಿಲ್ ಲಾನ್ಬಾ ಹಾಜರಿದ್ದರು.  ಅತ್ಯಂತ ಸೂಕ್ಷ್ಮ ಗೂಢಚಾರಿಕೆ ಸಾಮಥ್ರ್ಯ ಹಾಗೂ ನಿಖರ ಮಾರ್ಗದರ್ಶಿ ಶಸ್ತ್ರಾಸ್ತ್ರಗಳನ್ನು ಬಳಸಿ ವೈರಿಗಳ ಮೇಲೆ ಮಿಂಚಿನ ದಾಳಿ ನಡೆಸುವ ಸಾಮರ್ಥವನ್ನು ಇದು ಹೊಂದಿದೆ. ಅಲ್ಲದೇ ಅನೇಕ ಸಬ್‍ಮರೀನ್‍ಗಳಲ್ಲಿ ಇಲ್ಲದಿರುವ ಅತ್ಯಾಧುನಿಕ ತಂತ್ರಜ್ಞಾನದ ಬೇಹುಗಾರಿಕೆ ಸಾಧನಗಳನ್ನೂ ಇದು ಒಳಗೊಂಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin