2 ದಿನಕ್ಕೊಮ್ಮೆ ನೀರು ಬಿಡುವ ಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

BELAGAM-5

ಬಾದಾಮಿ,ಸೆ.22- ಇಂದು ರಾಜ್ಯದಲ್ಲೆಡೆ ಮಳೆು ಕಡಿಮೆಯಾಗಿದ್ದು ನೀರಿನ ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಬಡಾವಣೆಗಳಿಗೆ 2 ದಿನಕ್ಕೊಮ್ಮೆ ನೀರು ಬಿಡುವ ಯೋಚನೆಯಿದೆ ಹಾಗೂ ತಿಂಗಳಿಗೊಮ್ಮೆ ನೀರಿನ ಕರವನ್ನು ವಸೂಲಿ ಮಾಡಲಾಗುವುದು ಎಂದು ಪುರಸಭಾಧ್ಯಕ್ಷ ಫಾರೂಕಹಮ್ಮದ ದೊಡಮನಿ ಹೇಳಿದರುಅವರು ಪುರಸಭೆ ಸಭಾಭವನದಲ್ಲಿ ನಡೆದ ಸಮಾನ್ಯ ಸಬೆಯಲ್ಲಿ ಮಾತನಾಡಿದರು. ನಂತರ ಕಳೆದ ಸಭೆಯಲ್ಲಿ ಪುರಸಭಾ ಸದಸ್ಯರು ನೀಡಿದ ಸಲಹೆ ಸೂಚನೆಗಳ ಕುರಿತು ಚರ್ಚಿಸಲಾಯಿತು.

ಸದಸ್ಯರಾದ ಪಾಂಡು ಕಟ್ಟಿಮನಿ ಹೋಟೆಲ್ ಉದ್ದಿಮೆದಾರರಿಗೆ ಶೇ. 25ರಷ್ಟು ಹೆಚ್ಚಿಗೆ ನೀರಿನ ಕರ ಹೆಚ್ಚಳ ಮಾಡಬೇಕು ಹಾಗೂ ಮನೆಗಳಲ್ಲಿ ಹಾಕಿಸಿಕೊಂಡವರಿಗೆ ನೀರಿನ ಕರ ಕಡಿಮೆ ಮಾಡಬೇಕು, ಯಾವುದೇ ಕಾರಣಕ್ಕೂ ಜನಸಾಮಾನ್ಯರಿಗೆ ಹೊರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕೇವಲ ಒಂದುವಾರಕ್ಕೆ ಜಹೀರಾತು ಹಾಕುವವರಿಗೆ ಫೀ ವಸೂಲಿ ಮಾಡುತ್ತಿದ್ದು ಹೋಟೆಲ್‍ಗಳ ಮುಂದೆ ವರ್ಷಾನುಗಟ್ಟಲೇ ಫಲಕಗಳನ್ನು ಹಾತಿಕೊಂಡವರಿಗೆ ಏಕೆ ಬಿಟ್ಟಿದ್ದಿರಿ ಎಂದು ಕೇಳಿದರು. ಸದಸ್ಯ ರಾಜಮಹಮ್ಮದ ಮಾತನಾಡಿ ನಳಗಳ ಅಕ್ರಮ ಸಕ್ರಮಗೊಳಿಸುವಲ್ಲಿ ಪಾರದರ್ಶಕತೆಯಿಂದ ಮಾಡಬೇಕು, ಹಣದ ಪ್ರಭಾವಕ್ಕೆ ಒಳಗಾಗದೇ ಭ್ರಷ್ಟಾಚಾರ ರಹಿತವಾಗಿರಬೇಕೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಇದಕ್ಕೆ ದ್ವನಿಗೂಡಿಸಿದ ಪುರಸಭಾ ಸದಸ್ಯ ಇಲಿಯಾಸ ಜಮಾದಾರ ಮಾತನಾಡಿ ಜನಸಾಮಾನ್ಯರಿಗೆ 4000 ಮುಂಗಡದ ಬದಲಾಗಿ 1500 ರೂಗಳನ್ನು ಮಾತ್ರ ತೆಗೆದುಕೊಂಡು ಅವರಿಗೆ ಸಹಕಾರ ಮಾಡಬೇಕೆಂದು ಆಗ್ರಹಿಸಿದರು.ಇದಕ್ಕೆ ಸ್ಪಂದಿಸಿದ ಅಧ್ಯಕ್ಷ ಫಾರೂಕ್ ದೊಡಮನಿ 4000 ಸಾವಿರದ ಬದಲಾಗಿ 1500 ರೂಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು ಕಮರ್ಷಿಯಲ್ ಹೋಟೆಲ್‍ಗಳಿಗೆ ಅನಧಿಕೃತ ನಳಗಳನ್ನು ಬಂದ ಮಾಡಲು ಸೂಚಿಸಿದರು. ಎಲ್ಲ ವಾರ್ಡಗಳಿಗೆ ಸರಿಯಾಗಿ ನೀರಿನ ವ್ಯವಸ್ಥೆ ಯಾಗುವಂತೆ ಅಧುಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ವಿಜಯಲಕ್ಷೀ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ,ಸೆನೆಟರಿ .ಎ.ಎಚ್.ಮುದ್ದೆಬಿಹಾಳ, ಉಮೇಶ ಬೇಲಿ.ಭಾರತಿ ಶಿರಶಿ,ಗೌರಮ್ಮ ಬೇವೂರ ,ಎಫ್,ಎ,ನಾಯಕ.ಶಂಕರ.ಬಸವರಾಜ ಗಾಣಿಗೇರ,ಮುತ್ತಣ್ಣ ವಾಲಿಕಾರ.ಆನಂದ ದೊಡಮನಿ.ಶಿವಕುಮಾರ ಹಿರೇಮಠ.,ಹನಮಮತ ಹೆಬ್ಬಳ್ಳಿ..ರಾಜು.ಹಳ್ಳೂರ,ಶ್ರೀಮತಿ ಗಾಂಜಿ.ಶಾಂತವ್ವ ಗುದಗಿ, ಖಲೀಫ ಇತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin