2 ಶತಕೋಟಿ ಡಾಲರ್ ಕ್ಷಿಪಣಿ ಒಪ್ಪಂದಕ್ಕೆ ಭಾರತ-ಇಸ್ರೇಲ್ ಸಹಿ

ಈ ಸುದ್ದಿಯನ್ನು ಶೇರ್ ಮಾಡಿ

India-and-Isrel--01

ಜೆರುಸಲೆಂ, ಏ.7- ಇಸ್ರೇಲ್ ಮತ್ತು ಭಾರತದ ನಡುವೆ ಎರಡು ಶತಕೋಟಿ ಡಾಲರ್ ಮೊತ್ತದ ಮಹತ್ವದ ಕ್ಷಿಪಣಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತಕ್ಕೆ ಸುಧಾರಿತ ಮಧ್ಯಮ ಶ್ರೇಣಿಯ ಭೂಮಿಯಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆ (ಎಂಆರ್‍ಎಸ್‍ಎಎಂ) ಪೂರೈಕೆಗಾಗಿ ಈ ಬೃಹತ್ ರಕ್ಷಣಾ ಒಡಂಬಡಿಕೆಗೆ ಅಂಕಿತ ಹಾಕಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಸ್ರೇಲ್ ಏರೋಸ್ಪೇಸ್ ಇಂಡಸ್ಡ್ರೀಸ್ (ಎಐಎ) ತಿಳಿಸಿದೆ.  ಭಾರತದಲ್ಲಿ ಪ್ರಥಮ ಬಾರಿಗೆ ದೇಶಿಯವಾಗಿ ಉತ್ಪಾದನೆಯಾಗುವ ವಿಮಾನಗಳನ್ನು ಕೊಂಡೊಯ್ಯವ ನೌಕೆಗೆ ಹೆಚ್ಚುವರಿಯಾಗಿ ದೂರ-ಶ್ರೇಣಿ ವಾಯು ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು (ಎಲ್‍ಆರ್‍ಎಸ್‍ಎಎಂ) ಸಹ ಇಸ್ರೇಲ್ ಸರಬರಾಜು ಮಾಡಲಿದೆ.

ಐಎಐಗೆ 1.6 ಶತಕೋಟಿ ಡಾಲರ್ ಮೌಲ್ಯದ ಹಾಗೂ ರಕ್ಷಣಾ ಬಿಡಿಭಾಗಗಳ ಪೂರೈಕೆಗಾಗಿ ಮತ್ತೊಂದು ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿ ರಫೇಲ್ ಉಳಿದ ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ಐಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜೋಸೆಫ್ ವೀಸ್ ಜೆರುಸಲೆಂನಲ್ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin