2.0 ಆಡಿಯೋ ಲಾಂಚ್ ವೇಳೆ ಯುವ ಸಮುದಾಯಕ್ಕೆ ರಜನಿ ಹೇಳಿದ ಕಿವಿಮಾತೇನು ಗೊತ್ತೇ ..?

ಈ ಸುದ್ದಿಯನ್ನು ಶೇರ್ ಮಾಡಿ

Rajnikant--01

ದುಬೈ, ಅ.28-ನಮ್ಮ ದೇಶದ ಭವಿಷ್ಯದ ಬಗ್ಗೆ ಇಂದಿನ ಯುವ ಪೀಳಿಗೆ ಕಳವಳ ವ್ಯಕ್ತಪಡಿಸುತ್ತಿರುವ ಸಂಗತಿ ಬಗ್ಗೆ ಮೆಚ್ಚುಗೆ ಸೂಚಿಸಿರುವ ಖ್ಯಾತ ಚಿತ್ರನಟ ರಜನೀಕಾಂತ್, ಆದರೂ ಇಂದಿನ ಯುವಕ-ಯುವತಿಯರು ನಮ್ಮ ಸಂಸ್ಕøತಿ ಮತ್ತು ಪರಂಪರೆಯನ್ನು ಮರೆತಿದ್ದಾರೆ ಎಂದೂ ವಿಷಾದ ವ್ಯಕ್ತಪಡಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಅಪಾರ ಕುತೂಹಲ ಕೆರಳಿಸಿರುವ 2.0 ಸಿನಿಮಾದ ಮ್ಯೂಸಿಕ್ ಅನಾವರಣ ಸಮಾರಂಭಕ್ಕಾಗಿ ದುಬೈನಲ್ಲಿರುವ ರಜನಿಕಾಂತ್, ಜೀವನದಲ್ಲಿ ಸಂತೋಷವಾಗಿ ಇರಬೇಕಾದರೆ ನಮ್ಮ ಬೇರುಗಳು ಭದ್ರವಾಗಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಯುವ ಸಮುದಾಯಕ್ಕೆ ಕಿವಿ ಮಾತು ಹೇಳಿದರು.

ಇಂದಿನ ದಿನಗಳಲ್ಲಿ, ಪ್ರತಿಯೊಬ್ಬರು ತಮ್ಮ ತಾಯ್ನಾಡು ಮತ್ತು ಮಾತೃಭಾಷೆಯನ್ನು ಬಹಳ ಗೌರವ ಮತ್ತು ಪ್ರೀತಿಯಿಂದ ಕಾಣುತ್ತಿದ್ದಾರೆ. ಯುವ ಜನಾಂಗದ ಈ ಅಂಶವನ್ನು ನಾನು ಬಹುವಾಗಿ ಇಷ್ಟಪಡುತ್ತೇನೆ. ಆದರೆ ಇದೇ ಪೀಳಿಗೆ ನಮ್ಮ ಸಂಸ್ಕøತಿ, ಆಚರಣೆ ಮತ್ತು ಸಂಪ್ರದಾಯಗಳನ್ನು ಕ್ರಮೇಣವಾಗಿ ಮರೆಯುತ್ತಿದ್ದಾರೆ. ಇಂಥ ನಿರ್ಲಕ್ಷ್ಯ ಧೋರಣೆ ತಳೆದಿರುವುದು ಬೇಸರದ ಸಂಗತಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ತಮಗೆ ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೀವನದಲ್ಲಿ ಯಶಸ್ವಿನ ಮೆಟ್ಟಿಲುಗಳನ್ನು ಏರಬೇಕು ಎಂದು ಯುವಕ-ಯುವತಿಯರಿಗೆ ತಲೈವಾ ಕರೆ ನೀಡಿದರು.

Rajni-Youth--02

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶ ಲಭಿಸುವುದು ತುಂಬ ಕಷ್ಟ. ನೀವು ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದಿದ್ದರೆ ನಿಮಗಿಂತ ಮೂರ್ಖರು ಇನ್ನೊಬ್ಬರು ಇರಲಾರರು. ಯಾರೋ ಒಬ್ಬರು ಹೆಸರು ಮತ್ತು ಕೀರ್ತಿ ಗಳಿಸಿದ್ದರೆ. ಅವರು ತುಂಬಾ ಕಷ್ಟಪಟ್ಟಿದ್ದಾರೆ ಎನ್ನುವುದಕ್ಕಿಂತ ಅವರು ತಮಗೆ ಲಭಿಸಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರ್ಥ ಎಂದು ಕಬಾಲಿ ಖ್ಯಾತಿಯ ಹಿರಿಯ ನಟ ವ್ಯಾಖ್ಯಾನಿಸಿದರು.  ರಜನಿಕಾಂತ್, ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಬ್ರಿಟಿಷ್ ಬ್ಯೂಟಿ ಆಮಿ ಜಾಕ್ಸನ್ ನಟಿಸಿರುವ 2.0 ಸಿನಿಮಾವನ್ನು ಪ್ರಸಿದ್ಧ ನಿರ್ದೇಶಕ ಶಂಕರ್ ನಿರ್ದೇಶಿಸಿದ್ದಾರೆ. ಇದು ರಜನಿ-ಶಂಕರ್ ಜೋಡಿಯ ಮೂರನೇ ಕಾಂಬಿನೇಷನ್. ಇವರು ಒಟ್ಟಿಗೆ ಕೆಲಸ ಮಾಡಿದ್ದ ಶಿವಾಜಿ ಮತ್ತು ಎಂಥಿರನ್ ಸೂಪರ್ ಹಿಟ್ ಆಗಿತ್ತು.

2.0 ಸಿನಿಮಾ ಎಂಥಿರನ್ ಮುಂದಿನ ಭಾಗವಲ್ಲ. ಸಂಪೂರ್ಣ ಹೊಸ ಕಥೆ ಹೊಂದಿರುವ ಇದು ಉತ್ತಮ ಸಾಮಾಜಿಕ ಸಂದೇಶ ನೀಡಲಿದೆ. ಇದರಲ್ಲಿ ರಜನಿ ಮತ್ತೆ ರೋಬೋ ಚಿಟ್ಟಿ ಮತ್ತು ವಿಜ್ಞಾನಿ ಡಾ. ವಸೀಗರನ್ ಪಾತ್ರದಲ್ಲಿ ಮಿಂಚಲಿದ್ಧಾರೆ. ಅಕ್ಷಯ್ ಕುಮಾರ್ ಕ್ರೋಮ್ಯಾನ್ ಎಂಬ ಭಯಾನಕ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಆಸ್ಕರ್ ಪ್ರಶಸ್ತಿ ಪುರಸ್ಕøತ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನ ಇರುವ ಈ ಸಿನಿಮಾ ಜನವರಿ 25, 2018ರಂದು ತೆರಕಾಣಲಿದೆ.

Facebook Comments

Sri Raghav

Admin