ಶತಮಾನದ ಶಾಕಿಂಗ್ ನ್ಯೂಸ್ : ನಿಮ್ಮ ತಲೆ ತಿರುಗುವಂತೆ ಮಾಡುತ್ತೆ ಈ ಸುದ್ದಿ..!!

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್/ಬೀಜಿಂಗ್,ಏ.17- ಕೊರೊನಾ ಮಹಾಮಾರಿ ಸೃಷ್ಟಿಯಾದ ಚೀನಾದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆಎಷ್ಟಿರಬಹುದು? ಸಾವಿರ.., ಲಕ್ಷ.. ಕೋಟಿ? ಅಲ್ಲವೇ ಅಲ್ಲ. ಕಳೆದ ಮೂರು ತಿಂಗಳಲ್ಲಿ ಕೋವಿಡ್-19ಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 2.10 ಕೋಟಿ. ಈ ಆಘಾತಕಾರಿ ಮಾಹಿತಿಯನ್ನು ಅಮೆರಿಕ ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.

2019ರ ಡಿಸೆಂಬರ್‍ನಿಂದ ಮಾರ್ಚ್ ತಿಂಗಳವರೆಗೆ ಕೊರೊನಾ ಮಹಾಮಾರಿ ಚೀನಾದ ಎರಡು ಕೋಟಿ 10 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಆಹುತಿ ಪಡೆದಿದೆ.
ಆದರೆ ವಿಶ್ವದ ಕಣ್ಣಿಗೆ ಮಣ್ಣೆರೆಚ್ಚುತ್ತಿರುವ ಚೀನಾ ಕೊರೊನಾ ಸೋಂಕಿಗೆ ನಮ್ಮ ದೇಶದಲ್ಲಿ ಕೇವಲ 4,632 ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.

ಆದರೆ ಚೀನಾದ ನರಿ ಬುದ್ದಿಯ ಅರಿವಿರುವ ಅಮೆರಿಕ ಗುಪ್ತಚರ ಇಲಾಖೆ ಕೊರೊನಾ ಮಹಾಮಾರಿಗೆ ಕಮ್ಯುನಿಸ್ಟ್ ದೇಶದಲ್ಲಿ ಬಲಿಯಾದವರ ನೈಜ ಚಿತ್ರಣವನ್ನು ತೆರೆದಿಟ್ಟಿದೆ. ಡಿಜಿಟಲ್ ದೇಶವಾಗಿರುವ ಚೀನಾದ ಜನ ತಮ್ಮ ಪ್ರತಿಯೊಂದು ಕಾರ್ಯಕ್ಕೂ ಮೊಬೈಲ್‍ನ್ನೇ ಅವಲಂಬಿಸಿದ್ದಾರೆ. ಆದರೆ ಕಳೆದ ಡಿಸೆಂಬರ್‍ನಿಂದ ಕೋಟಿ ಕೋಟಿ ಮೊಬೈಲ್ ಸಿಮ್‍ಗಳು ಯೂಸ್ ಆಗಿಲ. ಇದರ ಜೊತೆಗೆ 84 ಲಕ್ಷ ಲ್ಯಾಂಡ್‍ಲೈನ್ ಫೋನ್‍ಗಳು ಬಂದ್ ಆಗಿವೆ.

ಮನೆಯಲ್ಲಿ ಯಾರು ಇಲ್ಲದಿದ್ದಾಗ ಮಾತ್ರ ಲ್ಯಾಂಡ್‍ಲೈನ್ ಫೋನ್ ಬಳಕೆ ಮಾಡುವುದಿಲ್ಲ. ಚೀನಾದ 84 ಲಕ್ಷ ಮಂದಿ ಕಳೆದ ಮೂರು ತಿಂಗಳಿನಿಂದ ಲ್ಯಾಂಡ್ ಯೂಸ್ ಮಾಡದಿರುವ ಮತ್ತು ಕೋಟಿ ಕೋಟಿ ಸಿಮ್‍ಗಳು ಕಾರ್ಯ ನಿರ್ವಹಿಸದಿರುವ ಮಾನದಂಡದ ಆಧಾರದ ಮೇಲೆ ಚೀನಾದಲ್ಲಿ 2.10 ಕೋಟಿ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಅಮೆರಿಕ ಬಹಿರಂಗಪಡಿಸಿದೆ.

ಸಾವಿನ ಸಂಖ್ಯೆಯನ್ನು ಮುಚ್ಚಿಡಲು ಚೀನಾ ಹರಸಾಹಸ ನಡೆಸುತ್ತಿದೆ. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಸ್ಥಾಪಿಸಿದ್ದ ಆಸ್ಪತ್ರೆಗಳ ನೆಲಮಾಳಿಗೆಗಳನ್ನು ಆ್ಯಸಿಡ್ ವಾಶ್ ಮಾಡಿರುವುದು, ಬೇರೆ ದೇಶದಿಂದ ಲಕ್ಷ ಲಕ್ಷ ಕಾಫಿನ್ ಬಾಕ್ಸ್‍ಗಳನ್ನು ತರಿಸಿಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ.

Facebook Comments

Sri Raghav

Admin