ರೋಲಿಂಗ್ ಶೆಟರ್ ಮೀಟಿ 2 ಕೋಟಿ ಮೌಲ್ಯದ ವಾಚ್ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.13- ಪ್ರತಿಷ್ಠಿತ ಶೋರೂಮ್‍ಗಳ ರೋಲಿಂಗ್ ಶೆಟರ್ ಮೀಟಿ ಒಳನುಗ್ಗಿ ಕಳ್ಳತನ ಮಾಡುತ್ತಿದ್ದ ಬಿಹಾರ ಮೂಲದ ಆರೋಪಿಯನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿ 2 ಕೋಟಿ ಮೌಲ್ಯದ 171 ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ. ಅಖ್ತರ್ ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಅವರ ಶೋಧ ಕಾರ್ಯ ಮುಂದುವರೆದಿದೆ.

ಈ ಆರೋಪಿಗಳು ಬೆಳಗಿನ ಜಾವ ಮೊಬೈಲ್, ಕ್ಯಾಮೆರಾ, ಗಡಿಯಾರದ ಅಂಗಡಿಗಳನ್ನು ನೋಡಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ವಾಚುಗಳನ್ನು ಬಿಹಾರ ಹಾಗೂ ನೇಪಾಳ ಗಡಿಗಳಲ್ಲಿ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.

ಜ.5ರಂದು ಇಂದಿರಾನಗರ ಠಾಣೆ ವ್ಯಾಪ್ತಿಯ ನೂರು ಅಡಿ ರಸ್ತೆಯಲ್ಲಿರುವ ಜಿಮ್ಸನ್ ಟೈಮ್ಸ್ ಕೈಗಡಿಯಾರದ ಅಂಗಡಿಯ ಶೆಟರ್ ಹಾಗೂ ಗ್ಲಾಸ್ ಡೋರ್ ಲಾಕ್ ಒಡೆದು ಒಳನುಗ್ಗಿ ಪ್ರತಿಷ್ಠಿತ ಕಂಪೆನಿಯ ಕೈಗಡಿಯಾರಗಳನ್ನು ಕಳವು ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ಬಿಹಾರಿ ಮೂಲದ ಆರೋಪಿಯನ್ನು ಬಂಸಿ ಉಳಿದ ನಾಲ್ವರ ಪತ್ತೆಗಾಗಿ ಪೊಲೀಸರು ಶೋಧ ಮುಂದುವರೆಸಿದ್ದಾರೆ.

Facebook Comments