ಉದ್ಘಾಟನೆಗೆ ಮುನ್ನವೇ ಕಳಚಿ ಬಿದ್ದ ಕೇಬಲ್‍ಕಾರ್, ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Cable-Carಜಮ್ಮು, ಜ.21-ಕಾಶ್ಮೀರ ಕಣಿವೆಯ ಜಮ್ಮುವಿನಲ್ಲಿ ಉದ್ಘಾಟನೆಗೆ ಮುನ್ನವೇ ಸಂಭವಿಸಿದ ರೋಪ್‍ವೇ ದುರಂತದಲ್ಲಿ ಇಬ್ಬರು ಮೃತಪಟ್ಟು, ಇತರ ನಾಲ್ವರು ತೀವ್ರ ಗಾಯಗೊಂಡಿರುವ ಘಟನೆ ನಿನ್ನೆ ಸಂಭವಿಸಿದೆ.

ಕಾಮಗಾರಿ ಅಂತಿಮ ಹಂತದಲ್ಲಿರುವ ಜಮ್ಮು ರೋಪ್ ವೇ ಯೋಜನೆಯಲ್ಲಿ ನಿನ್ನೆ ಅಣಕು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ವೇಳೆ ಕೇಬಲ್ ಕಾರ್ ರೋಪ್‍ವೇನಿಂದ ಕಳಚಿಕೊಂಡು ಕೆಳಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿದಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಜಮ್ಮುವಿನ ಮಹಾಮಾಯ ದೇವಸ್ಥಾನದ ಬಳಿ ಈ ದುರ್ಘಟನೆ ಜರುಗಿದೆ. ಪ್ರಧಾನಿ ನರೇಂದ್ರ ಮೋದಿ ಈ ರೋಪ್‍ವೇ ಮತ್ತು ಕೇಬಲ್ ಕಾರ್ ಸೇವೆಯನ್ನು ಉದ್ಘಾಟಿಸಬೇಕಿತ್ತು.  ಅಣಕು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಆರು ಕಾರ್ಮಿಕರಿದ್ದ ಕೇಬಲ್ ಕಾರ್ ರೋಪ್‍ವೇನಿಂದ ಸಮತೋಲನ ಕಳೆದುಕೊಂಡು ಕಳಚಿಬಿತ್ತು.

ಈ ದುರ್ಘಟನೆಯಲ್ಲಿ ಬಿಹಾರದ ರಾಕೇಶ್ ಕುಮಾರ್ ಮತ್ತು ಪಶ್ಚಿಮ ಬಂಗಾಳದ ಹರಿಕೃಷ್ಟ ಮೃತಪಟ್ಟರು. ತೀವ್ರ ಗಾಯಗೊಂಡ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Facebook Comments