ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ಬರುತ್ತಿದ್ದ ಇಸ್ಕಾನ್ ನೌಕರನ 2 ಲಕ್ಷ ರೂ. ದರೋಡೆ

ಈ ಸುದ್ದಿಯನ್ನು ಶೇರ್ ಮಾಡಿ

robbers-1
ಬೆಂಗಳೂರು, ಜೂ.5- ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಆಟೋ ಹತ್ತುತ್ತಿದ್ದ ಇಸ್ಕಾನ್ ನೌಕರರೊಬ್ಬರ ಕೈಯಲ್ಲಿದ್ದ 2 ಲಕ್ಷ ಹಣದ ಬ್ಯಾಗ್‍ನ್ನು ದರೋಡೆಕೋರರು ಎಗರಿಸಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಸ್ಕಾನ್‍ನಲ್ಲಿ ಕೆಲಸ ಮಾಡುವ ಶಿವಲಿಂಗಯ್ಯ ಎಂಬುವರು ನಿನ್ನೆ ಮಧ್ಯಾಹ್ನ 3.30ರ ಸಮಯದಲ್ಲಿ ರಾಜ್‍ಕುಮಾರ್ ರಸ್ತೆ ನವರಂಗ್ ಚಿತ್ರಮಂದಿರ ಬಳಿಯ ಆ್ಯಕ್ಸಿಸ್ ಬ್ಯಾಂಕಿನಿಂದ 2 ಲಕ್ಷ ಹಣ ಡ್ರಾ ಮಾಡಿದ್ದಾರೆ. ಈ ಹಣವನ್ನು ಬ್ಯಾಗಿನಲ್ಲಿಟ್ಟುಕೊಂಡು ಹೊರಗೆ ಬಂದು ಆಟೋ ಹತ್ತುತ್ತಿದ್ದಂತೆ ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ಇವರ ಕೈಯಲ್ಲಿದ್ದ ಹಣದ ಬ್ಯಾಗ್‍ನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಹಣ ಕಳೆದುಕೊಂಡು ಕಂಗಾಲಾದ ಶಿವಲಿಂಗಯ್ಯ ಅವರು ಸುಬ್ರಹ್ಮಣ್ಯನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದರೋಡೆಕೋರರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.

Facebook Comments

Sri Raghav

Admin