20ಕ್ಕೆ ಸಮಾಜಮುಖಿ ಸಂಸ್ಥೆ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

ee-sanjeಪಿರಿಯಾಪಟ್ಟಣ, ಆ.16- ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಡಿ.ದೇವರಾಜ ಅರಸು ಜನ್ಮಶತಮಾನೋತ್ಸದ ಅಂಗವಾಗಿ ನಮ್ಮೂರು ನಮ್ಮಿಷ್ಠ ಆರೋಗ್ಯ ಸಂಬಂಧಿ ಸಮಾಜಮುಖಿ ಸಂಸ್ಥೆಯನ್ನು ಇದೇ 20ರಂದು ಲೋಕಾರ್ಪಣೆ ಮಾಡುವುದಾಗಿ ಎಐಎಂಸಿ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಹೆಚ್.ಎಸ್.ರವೀಂದ್ರ ತಿಳಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯು ಗ್ರಾಮೀಣ ಭಾಗದ ಜನವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ರೈತರು ಹಾಗೂ ಅರ್ಥಿಕವಾಗಿ ದುಬರ್ಲರಾದವರು ಹಾಗೂ ಮತ್ತಿತರೆ ಸಂಕಷ್ಟದಲ್ಲಿರುವ ಜನರಿಗೆ ಸಹಾಯಮಾಡುವ ಉದ್ದೇಶ ಹೊಂದಲಾಗಿದ್ದು ಈ ನಿಟ್ಟಿನಲ್ಲಿ ಅಂದು ಬೃಹತ್ ಆರೋಗ್ಯ ಮತ್ತು ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಕಾರ್ಯಕ್ರಮವನ್ನು ಕೂಡ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಶಾಸಕ ಕೆ.ವೆಂಕಟೇಶ್ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಪತ್ರಿಕೋದ್ಯಮಿ ರಾಜಶೇಖರ್‍ಕೋಟಿ, ವೈದ್ಯಕೀಯ ಮಂಡಳಿ ಸದಸ್ಯ ಡಾ.ಹೆಚ್.ಎಸ್.ರವೀಂದ್ರ ಮತ್ತಿತತರು ಭಾಗವಹಿಸಲಿದ್ದು ಶಿಬಿರವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.ಈ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್ ಆಯೋಜಿಸಿದ್ದಾರೆಂದು ತಿಳಿಸಿದರು.ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಎಂ.ಆರ್.ರವಿಕುಮಾರ್, ಪುರಸಭಾ ಸದಸ್ಯ ಎ.ಕೆ.ಗೌಡ, ವೈದ್ಯರುಗಳಾದ ಡಾ. ಪ್ರಕಾಶ್, ಡಾ.ಸುನಿಲ್, ಮುಖಂಡರಾದ ಕಾಂತರಾಜು, ತಮ್ಮಣ್ಣೇಗೌಡ, ಮಹೇಶ, ವಿಶ್ವನಾಥ್, ಹಿರಿಯ ಆರೋಗ್ಯ ಸಹಾಯಕ ಪ್ರಕಾಶ್ ಮತ್ತಿತರರು ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin