20ರೂ.ಗೆ ಆಸೆಗೆ ಪ್ರಾಣ ಕಳೆದುಕೊಂಡ ವೃದ್ಧ

ಈ ಸುದ್ದಿಯನ್ನು ಶೇರ್ ಮಾಡಿ

gasfgsfdggತುಮಕೂರು, ಆ.9-  ಇಪ್ಪತ್ತು ರೂಪಾಯಿ ಆಸೆಗೆ ವೃದ್ಧನೊಬ್ಬ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಯಲ್ಲಾಪುರ ಗೇಟ್ ಬಳಿ ನಡೆದಿದೆ.  ಆಂಡನಹಳ್ಳಿ ನಿವಾಸಿ ಮೂಡ್ಲಪ್ಪ (60) ಮೃತಪಟ್ಟ ವೃದ್ಧ. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ, ಸಂಜೆ ರಸ್ತೆ ಬದಿಯಲ್ಲಿ ನಿಂತು ಮಕ್ಕಳಿಂದ ಹಿಡಿದು ವಯೋವೃದ್ಧವರೆಗೆ ಹೂ ಮಾರಾಟ ಮಾಡಿಕೊಂಡು ಜೀವನ ನಿರ್ವಹಿಸುವ ನೂರಾರು ಮಂದಿ ಇಲ್ಲಿದ್ದಾರೆ.  ಇಂದು ಬೆಳಗ್ಗೆ 7 ಗಂಟೆ ಸಮಯದಲ್ಲಿ ಯಲ್ಲಾಪುರ ಗೇಟ್ ಸಮೀಪ ರಸ್ತೆ ಬದಿಯಲ್ಲಿ ನಿಂತು ವ್ಯಾಪಾರ ಮಾಡುತ್ತಿದ್ದ ಮೂಡ್ಲಪ್ಪ ಈ ವೇಳೆ ಲಾರಿ ಚಾಲಕನೊಬ್ಬ ಹೂ ಕೇಳಿದ್ದು, ಆತನಿಗೆ ಹೂ ಕೊಡಲು ಆ ಕಡೆಯಿಂದ ರಸ್ತೆ ದಾಟುವಾಗ ಕಡೂರು ಕಡೆಯಿಂದ ಬಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಡಿಕ್ಕಿ ಹೊಡೆದ ಕೂಡಲೇ ವೃದ್ಧನಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.  ಈ ಸಂಬಂಧ ಗುಬ್ಬಿ ಠಾಣೆ ಪಿಎಸ್‍ಐ ಗಂಗಾಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin