20 ವರ್ಷಗಳಲ್ಲಿ ಆಗದ ಕೆಲಸವನ್ನು ಒಂದೇ ವಾರದಲ್ಲಿ ಮಾಡಿ ಮುಗಿಸಿದ ಯೋಗಿ

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath--01

ಲಕ್ನೋ, ಮಾ.28-ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಕಠಿಣ ನಿರ್ಧಾರಗಳಿಂದ ಇಡೀ ದೇಶಾದ್ಯಂತ ಸುದ್ದಿಯಾಗಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, 20 ವರ್ಷಗಳಲ್ಲಿ ಈ ಹಿಂದಿನ ಸರ್ಕಾರಗಳು ಮಾಡಲು ಸಾಧ್ಯವಾಗದೇ ಇದ್ದ ವಿವಾದಗಳನ್ನು ಕೇವಲ ಒಂದೇ ವಾರದಲ್ಲಿ ಬಗೆಹರಿಸಿ ಸೈ ಅನಿಸಿಕೊಂಡಿದ್ದಾರೆ.   ಲಕ್ನೋದಲ್ಲಿ ಹಿಂದು ವ್ಯಕ್ತಿಗೆ ಸೇರಿದ ಏಳು ಅಂಗಡಿಗಳನ್ನು ಅನ್ಯ ಕೋಮಿನ ಮಂದಿ ಆಕ್ರಮಿಸಿಕೊಂಡು ಬಾಡಿಗೆಯನ್ನೂ ನೀಡದೇ ಸ್ವಂತ ಸ್ವತ್ತಿನಂತೆ ಬಳಸಿ ದೌರ್ಜನ್ಯ ಎಸಗಿದ್ದರು. ಈ ವಿವಾದ ಬಹು ವರ್ಷಗಳ ಹಿಂದೆಯೇ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೋರ್ಟ್ ಹಿಂದು ವ್ಯಕ್ತಿಯ ಪರವಾಗಿ ತೀರ್ಪು ನೀಡಿದ್ದರೂ, ಪ್ರತಿವಾದಿಗಳು ಆದೇಶ ಉಲ್ಲಂಘಿಸಿ ಆ ಸ್ವತ್ತುಗಳಲ್ಲಿ ಭದ್ರವಾಗಿ ಟೀಕಾಣಿ ಹೂಡಿದ್ದರು.

ಈ ಹಿಂದೆ ಆಡಳಿತದಲ್ಲಿದ್ದ ಮಾಯಾವತಿ ನೇತೃತ್ವದ ಬಿಎಸ್‍ಪಿ ಸರ್ಕಾರವಾಗಲಿ ಅಥವಾ ಮುಲಾಯಂಸಿಂಗ್ ಮತ್ತು ಅಖಿಲೇಶ್ ಯಾದವ್‍ರ ಸಮಾಜವಾದಿ ಪಕ್ಷವಾಗಲಿ ನ್ಯಾಯ ಒದಗಿಸುವಲ್ಲಿ ವಿಫಲವಾಗಿದ್ದವು.   ಆದರೆ, ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗುತ್ತಿದ್ದಂತೆ, ತಣ್ಣಗಾದ ಪ್ರತಿವಾದಿಗಳು ತಾವು ಅಕ್ರಮವಾಗಿ ಸ್ವಾಧೀನ ಮಾಡಿಕೊಂಡಿದ್ದ ಏಳು ಅಂಗಡಿಗಳನ್ನು ಹಿಂದು ವ್ಯಕ್ತಿಗೆ ಒಪ್ಪಿಸಿದ್ದಾರೆ. ಇಂಥ ಎಷ್ಟೋ ಪ್ರಕರಣಗಳು ಒಂದೇ ವಾರದಲ್ಲಿ ಬಗೆಹರಿದಿದೆ.
ಒಂದೇ ಒಂದು ಸಂಪುಟ ಸಭೆಯನ್ನೂ ನಡೆಸದೇ ಕೇವಲ 150 ಗಂಟೆಗಳಲ್ಲಿ 50 ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡಿರುವ ಅವರು ಘಟಾನುಘಟಿ ರಾಜಕಾರಣಿಗಳ ಹುಬ್ಬೇರುವಂತೆ ಮಾಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಬೀದಿ ಕಾಮಣ್ಣರ ನಿಗ್ರಹಕ್ಕೆ ಆಂಟಿ ರೋಮಿಯೋ ದಳ ರಚನೆ, ಅಕ್ರಮ ಕಸಾಯಿಖಾನೆಗಳಿಗೆ ಬೀಗ ಮುದ್ರೆ, ಗೋವು ಕಳ್ಳಸಾಗಣೆ ನಿಷೇಧದ ಮೂಲಕ ಈಗಾಗಲೇ ದೇಶದ ಗಮನಸೆಳೆದಿರುವ ಯೋಗಿ, ಸರ್ಕಾರಿ ಕಚೇರಿಗಳಲ್ಲಿ ಪಾನ್ ಮಸಾಲ ಮತ್ತು ಪಾಲಿಥಿನ್ ನಿಷೇಧ, ಅಲಹಾಬಾದ್, ಮೀರತ್, ಆಗ್ರಾ, ಗೋರಖ್‍ಪುರ್‍ನಲ್ಲಿ ಮೆಟ್ರೋ ರೈಲು ಯೋಜನೆ, ಕೈಲಾಸ್ ಮಾನಸ ಸರೋವರ್ ಅಭಿವೃದ್ದಿ ಯೋಜನೆ, ಭದ್ರತೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಜೂನ್ ವೇಳೆ ರಾಜ್ಯದ ಎಲ್ಲ ರಸ್ತೆಗಳು ಹಳ್ಳ ಮುಕ್ತಗೊಳಿಸುವ ಯೋಜನೆಗಳಿಗೆ ಭಾರೀ ಬೆಂಬಲ ವ್ಯಕ್ತವಾಗಿದೆ.

ಜನಪ್ರತಿನಿಧಿಗಳು ಮತ್ತು ಪೊಲೀಸರು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಯೋಗಿ ಕಟ್ಟಪ್ಪಣೆ ಮಾಡಿದ್ದಾರೆ. ಅಲ್ಲದೇ 18 ಗಂಟೆಗಳ ಕಾಲ ಕೆಲಸ ಮಾಡುವಂತೆಯೂ ಸರ್ಕಾರಿ ಸಿಬ್ಬಂದಿಗೆ ನಿರ್ದೇಶನ ನೀಡಿ ಆಡಳಿತಕ್ಕೆ ಚುರುಕು ಮುಟ್ಟಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin