200 ಆನೆಗಳ ತೂಕದ ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

GSLV-Mark-III

ನವದೆಹಲಿ, ಮೇ 15-ದಕ್ಷಿಣ ಏಷ್ಯಾ ಉಪಗ್ರಹ (ಜಿ ಸ್ಯಾಟ್-9) ಉಡಾವಣೆ ಯಶಸ್ಸಿನಿಂದ ಮತ್ತಷ್ಟು ಪ್ರೇರಣೆಗೊಂಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ, ಈಗ 200 ದೊಡ್ಡ ಆನೆಗಳ ತೂಕದ ಜಿಎಸ್‍ಎಲ್‍ವಿ-ಮಾರ್ಕ್ 3 ರಾಕೆಟ್‍ನ ಚೊಚ್ಚಲ ಉಡ್ಡಯನಕ್ಕೆ ಸಜ್ಜಾಗಿದೆ. ಇದರೊಂದಿಗೆ ಭಾರತ ಮತ್ತೊಂದು ವಿಶ್ವವಿಕ್ರಮ ಸಾಧಿಸಲಿದೆ. ಭಾರತೀ ಯರನ್ನು ಅಂತರಿಕ್ಷಕ್ಕೆ ಕೊಂಡೊಯ್ಯುವ ಸಾಮಥ್ರ್ಯ ಈ ರಾಕೆಟ್‍ಗೆ ಇದೆ. ಈ ಮೂಲಕ ಬಿಗ್ ಬಾಯ್ಸ್ ಸ್ಪೇಸ್ ಕ್ಲಬ್‍ಗೆ ಭಾರತ ಸೇರ್ಪಡೆಯಾಗುವ ಕಾಲವೂ ಸನ್ನಿಹಿತವಾಗಿದೆ.



ಇದು ವಿಶ್ವದ ಅತ್ಯಧಿಕ ತೂಕದ ರಾಕೆಟ್ ಆಗಿದೆ. ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಅಗಾಧ ಶಕ್ತಿ ಇರುವ ಇದು ಸಂಪೂರ್ಣ ಭರ್ತಿಯಾದ ಐದು ಜಂಬೋ ಜೆಟ್ ವಿಮಾನಗಳಿಗೆ ಸಮವಾಗಿದೆ. ಇದನ್ನು 300 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.   ಆಂಧ್ರಪ್ರದೇಶದ ಶ್ರೀ ಹರಿಕೋಟಾದಿಂದ ಜೂನ್ ಮೊದಲ ವಾರದಲ್ಲಿ ಸಂಪರ್ಕ ಉಪಗ್ರಹ ಜಿಎಸ್‍ಎಟಿ-19 ಹೊತ್ತು ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್‍ಎಲ್‍ವಿ-ಮಾರ್ಕ್ 3) ರಾಕೆಟ್ ನಭಕ್ಕೆ ಚಿಮ್ಮಲಿದೆ. ಈ ಮೂಲಕ ಇಸ್ರೋ ಮತ್ತೊಂದು ದಾಖಲೆ ನಿರ್ಮಿಸಲಿದೆ.
ರಾಕೆಟ್‍ನ ಬೃಹತ್ ಕ್ರಯೋಜೆನಿಕ್ ಎಂಜಿನ್‍ನನ್ನು ಚೆನ್ನೈನಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಅಭಿವೃದ್ದಿಗೊಳಿಸಿದ್ದು, ನಮ್ಮ 12 ವರ್ಷಗಳ ಪರಿಶ್ರಮಕ್ಕೆ ಪ್ರತಿಫಲ ದೊರೆಯುವ ಸಮಯ ಬಂದಿದೆ. ಇದರೊಂದಿಗೆ ಭಾರತ ಸಂಪೂರ್ಣ ಸ್ವಾವಲಂಬನೆ ಹಿರಿಮೆಯನ್ನೂ ಸಾಧಿಸಲಿದೆ ಎಂದು ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದ (ವಿಎಸ್‍ಎಸ್‍ಸಿ) ನಿರ್ದೇಶಕ ಕೆ.ಸಿವನ್ ತಿಳಿಸಿದ್ದಾರೆ.

ಇದು 640 ಟನ್ ತೂಕದ ಹೊಸ ರಾಕೆಟ್ ಆಗಿರುವ ಕಾರಣ ವ್ಯಾಪಕ ಮತ್ತು ವಿಸ್ತತ ಪರೀಕ್ಷೆಗಳನ್ನು ನಡೆಸಲಾಗಿದೆ. ಜಿಎಸ್‍ಎಟಿ-19 ಉಪಗ್ರಹ ಸುಮಾರು 4 ಟನ್ ತೂಕವಿದೆ. ಭಾರತದ ರಾಕೆಟ್ ಒಂದು ಅತ್ಯಧಿಕ ತೂಕದ ಉಪಗ್ರಹವನ್ನು ಅಂತರಿಕ್ಷಕ್ಕೆ ಹೊತ್ತೊಯ್ಯುತ್ತಿರುವುದು ಇದೇ ಮೊದಲು ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.  ಬಹುಪಯೋಗಿ ರಾಕೆಟ್‍ನ ಜೀವಿತಾವಧಿ 15 ವರ್ಷಗಳು. ಭಾರತದಲ್ಲಿ ಪ್ರಸ್ತುತ ಪೋಲಾಟ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್ ಮತ್ತು ಜಿಎಸ್‍ಎಲ್‍ವಿ- ಮಾರ್ಕ್ 2 ಎಂಬ ಎರಡು ರಾಕೆಟ್‍ಗಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin