2015ರಲ್ಲಿ ವಾಯು ಮಾಲಿನ್ಯದಿಂದ ದೆಹಲಿ, ಮುಂಬೈನಲ್ಲಿ 80,000 ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Air-Pollution-01

ಮುಂಬೈ, ಜ.19– ದೇಶದ ವಾಣಿಜ್ಯ ರಾಜಧಾನಿ ಮುಂಬೈ ಮತ್ತು ರಾಜಧಾನಿ ನವದೆಹಲಿಯಲ್ಲಿ 2015ರಲ್ಲಿ ವಾಯು ಮಾಲಿನ್ಯದಿಂದಾಗಿ 80,665 ಮಂದಿ ಅವಧಿಗೆ ಮುನ್ನವೇ ಮೃತಪಟ್ಟಿದ್ದಾರೆ ಎಂಬ ಆತಂಕಕಾರಿ ವರದಿಯೊಂದು ಬಹಿರಂಗಗೊಂಡಿದೆ.   ಮುಂಬೈನ ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಹೊಸ ಅಧ್ಯಯನವೊಂದಲ್ಲಿ ಈ ಅಂಕಿ-ಅಂಶಗಳನ್ನು ನೀಡಲಾಗಿದೆ. ಕಳೆದ ವರ್ಷ ವಾಯು ಮಾಲಿನ್ಯದಿಂದ ಈ ಎರಡು ಮಹಾನಗರಿಗಳಿಗೆ 70,000 ಕೋಟಿ ರೂ. ವೆಚ್ಚವಾಗಿದ್ದು, ಇದರಿಂದಾಗಿ ದೇಶೀಯ
ಒಟ್ಟು ಉತ್ಪನ್ನದ (ಜಿಡಿಪಿ) ಶೇ.071ರಷ್ಟು ನಷ್ಟವಾಗಿದೆ ಎಂದು ತಿಳಿಸಲಾಗಿದೆ.  2015ರಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ವಾಯು ಮಾಲಿನ್ಯದಿಂದ 81 ಸಾವಿರ ಮಂದಿ ಮೃತಪಟ್ಟಿದ್ದು, ಇದು 1995ರ ಅವಧಿಗಿಂತ ಎರಡಷ್ಟು ಎಂದು ಅಂದಾಜು ಮಾಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin