2015ರಿಂದ ಸಿರಿಯಾದಲ್ಲಿ ರಷ್ಯಾಸೇನೆ ನಡೆಸಿದ ದಾಳಿಗೆ 11,612 ಮಂದಿ ಬಲಿ..!

ಈ ಸುದ್ದಿಯನ್ನು ಶೇರ್ ಮಾಡಿ

Siria

ಡಮಾಸ್ಕಸ್, ಮಾ.31-ಇಸ್ಲಾಮಿಕ್ ಸ್ಟೇಟ್ ಉಗ್ರರ ಹಿಂಸಾಚಾರದಿಂದ ನಲುಗುತ್ತಿರುವ ಸಿರಿಯಾ ಮೇಲೆ ರಷ್ಯಾ ಸೇನೆ 2015ರ ಸೆಪ್ಟೆಂಬರ್‍ನಿಂದ ಆರಂಭಿಸಿರುವ ವಾಯು ದಾಳಿಗಳಲ್ಲಿ 11,612 ಮಂದಿ ಮೃತಪಟ್ಟಿದ್ದಾರೆ ಎಂದು ಯುನೈಟೆಡ್ ಕಿಂಗ್‍ಡಂನ ಯುದ್ಧ ನಿಗಾ ಸಂಸ್ಥೆಯೊಂದು ವರದಿ ಮಾಡಿದೆ,
ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ (ಎಸ್‍ಒಎಚ್‍ಆರ್) ಬಿಡುಗಡೆ ಮಾಡಲಾದ ಅಂಕಿ-ಅಂಶಗಳ ಪ್ರಕಾರ, 11,612 ಮಂದಿ ಸೇನಾ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಇವರಲ್ಲಿ 714 ಮಹಿಳೆಯರು ಮತ್ತು 1,201 ಮಕ್ಕಳೂ ಸೇರಿದಂತೆ 5,013 ನಾಗರಿಕರು ಹತರಾಗಿದ್ದಾರೆ ಎಂದು ಇಎಫ್‍ಇ ನ್ಯೂಸ್ ತಿಳಿಸಿದೆ.

ರಷ್ಯಾದ ವಾಯು ದಾಳಿಯಲ್ಲಿ ಈವರೆಗೆ 3,284 ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರೂ ಕೊಲ್ಲಲ್ಪಟ್ಟಿದ್ದಾರೆ. ಇದರೊಂದಿಗೆ ಕನಿಷ್ಠ 3,315 ಬಂಡುಕೋರರ ಮತ್ತು ಇಸ್ಲಾಂ ಬಣಗಳ ಯೋಧರೂ ಮೃತರಾಗಿದ್ದಾರೆ ಎಂದು ಎಸ್‍ಒಎಚ್‍ಆರ್ ಹೇಳಿದೆ. ರಷ್ಯಾದ ಕ್ಲಸ್ಟರ್ ಬಾಂಬ್‍ಗಳ ದಾಳಿಯಲ್ಲಿ ಬಹುತೇಕ ಸಾವು-ನೋವುಗಳು ಸಂಭವಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin