2016ರಲ್ಲಿ ವಿರಾಟ್‍ಕೊಹ್ಲಿಯ ಬ್ಯಾಟಿಂಗ್ ವೈಭವ

ಈ ಸುದ್ದಿಯನ್ನು ಶೇರ್ ಮಾಡಿ

Virat-kohli

ನವದೆಹಲಿ,ಡಿ.23- ಟೆಸ್ಟ್‍ನಲ್ಲಿ ಭಾರತ ತಂಡವನ್ನು ಉತ್ಕøಷ್ಟ ಮಟ್ಟಕ್ಕೆ ಕೊಂಡೊಯ್ದರು ಐಸಿಸಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಎಡವಿರುವ ವಿರಾಟ್ ಕೊಹ್ಲಿ ಕಳೆದ ವರ್ಷ ಹೊಸದೊಂದು ದಾಖಲೆಯನ್ನು ನಿರ್ಮಿಸಿದ್ದಾರೆ.  ಅವರು ಕಳೆದ ವರ್ಷ ಆಡಿದ ಕ್ರಿಕೆಟ್‍ನ ಎಲ್ಲಾ ಮಾದರಿಯಲ್ಲೂ 75ರ ಸರಾಸರಿಯನ್ನು ಕಾಯ್ದುಕೊಂಡಿರುವುದು ಈಗ ನೂತನ ದಾಖಲಾಗಿದೆ. 28ರ ಹರಯದ ವಿರಾಟ್ ಕಳೆದ ವರ್ಷ ಟೆಸ್ಟ್‍ನಲ್ಲಿ 75.93ರ ಸರಾಸರಿಯಲ್ಲಿ 1215 ರನ್ (235 ರನ್ ಗರಿಷ್ಠ)ಗಳನ್ನು ಗಳಿಸಿದರೆ, ಏಕದಿನ ಮಾದರಿಯಲ್ಲಿ 10 ಪಂದ್ಯಗಳಿಂದ ಎರಡು ಅಜೇಯರಾಗಿ ಉಳಿದಿರುವುದೇ ಅಲ್ಲದೆ 92.37ರ ಸರಾಸರಿಯಲ್ಲಿ 739 ರನ್ (154 ರನ್ ಗರಿಷ್ಠ), ಹಾಗು ಟ್ವೆಂಟಿ-20 ಮಾದರಿಯಲ್ಲಿ 13 ಇನ್ನಿಂಗ್ಸ್‍ನಿಂದ 106.083ರ ಸರಾಸರಿಯಲ್ಲಿ 641 ರನ್ ಗಳಿಸಿರುವುದೇ ಅಲ್ಲದೆ ಕಳೆದ ಐಪಿಎಲ್‍ನಲ್ಲಿ ಆರ್‍ಸಿಬಿ ತಂಡದ ನಾಯಕನಾಗಿ ಶ್ರೇಷ್ಠ ಸಾಧನೆ ತೋರಿದ್ದ ಕೊಹ್ಲಿ 16 ಇನ್ನಿಂಗ್ಸ್‍ನಿಂದ 973 ರನ್ ಗಳಿಸುವ ಮೂಲಕ ಐಪಿಎಲ್‍ನಲ್ಲೂ ನೂತನ ದಾಖಲೆಯನ್ನು ನಿರ್ಮಿಸುವ ಮೂಲಕ ಗಮನ   ಸೆಳೆದಿದ್ದಾರೆ. ಅಲ್ಲದೆ 2016ರ ಐಸಿಸಿ ಏಕದಿನ ತಂಡದ ನಾಯಕರಾಗುವ ಮೂಲಕ ಇಡೀ ವರ್ಷ ತಮ್ಮ ವೈಭವವನ್ನು ಮೆರೆಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin