2016ರಲ್ಲೂ ಸಲ್ಮಾನ್‍, ಬಚ್ಚನ್, ಶಾರುಕ್ ಮತ್ತು ಅಮಿರ್‍ ರನ್ನು ಹಿಂದಿಕ್ಕಿದ ಸನ್ನಿ..!

ಈ ಸುದ್ದಿಯನ್ನು ಶೇರ್ ಮಾಡಿ

Hot-Sunny

ಸನ್ನಿ ಲಿಯೋನ್-ಬಾಲಿವುಡ್‍ನ ಮಿಂಚಿನ ಬಳ್ಳಿ ಮಿಂಚುಳ್ಳಿ. ಬಿ-ಟೌನ್ ಬೆಡಗಿ ಸನ್ನಿ ಏನೂ ಮಾಡಿದರೂ ಅದೊಂದು ದೊಡ್ಡ ಸುದ್ದಿಯಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ 2016ರಲ್ಲೂ ಮೋಸ್ಟ್ ಸಚ್ರ್ಡ್ ಫರ್ಸನಾಲಿಟಿ ಎಂಬ ಬಿರುದಾಂಕಿತಳಾಗಿದ್ದಾಳೆ. ಈಕೆಗಾಗಿ ಸರ್ಚ್ ಎಂಜಿನ್‍ನಲ್ಲಿ ತಡಕಾಡಿದವರ ಸಂಖ್ಯೆಯಲ್ಲಿ ಹೊಸ ದಾಖಲೆಯೇ ಸೃಷ್ಟಿಯಾಗಿದೆ ಎಂದು ಯಾಹೂ ಇಂಡಿಯಾ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್‍ಖಾನ್, ಮೆಗಾಸ್ಟಾರ್ ಅಮಿತಾಬ್ ಬಚ್ಚನ್, ಶಾರುಕ್ ಖಾನ್ ಮತ್ತು ಅಮಿರ್‍ಖಾನ್‍ರನ್ನೂ ಸನ್ನಿ ಹಿಂದಿಕ್ಕಿದ್ದಾಳೆ.

ಈ ದಾಖಲೆಯನ್ನು ಸತತ ಐದನೇ ವರ್ಷವೂ ಉಳಿಸಿಕೊಂಡ ಹೆಗ್ಗಳಿಕೆ ಈಕೆಯದು. ಈಕೆ ಬಿಪಾಶಾ ಬಸು, ದೀಪಿಕಾ ಪಡುಕೋಣೆ, ಕತ್ರೀನಾ ಕೈಫ್ ಇವರಿಗಿಂತಲೂ ಇಂಟರ್‍ನೆಟ್‍ನಲ್ಲಿ ಸನ್ನಿ ಸುದ್ದಿಗಾಗಿ ಹುಡುಕಾಟ ನಡೆಸಿದವರ ಸಂಖ್ಯೆಯೇ ಹೆಚ್ಚು. ತಾನು ನಟಿಸಿದ ಚಿತ್ರಗಳಲ್ಲಿ ಸದಾ ವಿವಾದದ ಕೇಂದ್ರ ಬಿಂದುವಾಗಿರುವ ಸನ್ನಿ ತನ್ನ ಸುತ್ತ ಗ್ಲಾಮರ್-ಗಾಸಿಪ್‍ಗಳನ್ನು ಸೃಷ್ಟಿಸಿಕೊಳ್ಳುತ್ತಲೇ ಇದ್ದಾಳೆ. ಎಗ್ಗಿಲ್ಲದೇ ತನ್ನ ಆಕರ್ಷಕ ಅಂಗಗಳನ್ನು ಧಾರಾಳವಾಗಿ ಅನಾವರಣಗೊಳಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಈಕೆ ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿರುವ ರೀತಿಗೆ ಇಡೀ ಬಾಲಿವುಡ್ ಬೆರಗುಗಣ್ಣಿನಿಂದ ನೋಡುವಂತಾಗಿದೆ.

ನೀಲಿ ಚಿತ್ರದ ನಿರ್ಭೀತಿಯ ನಾಯಕಿ ಬಿಗ್‍ಬಾಸ್ ರಿಯಾಲಿಟಿ ಶೋ ನಂತರ ಜಿಸ್ಮ್ ಚಿತ್ರದಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡು ದೊಡ್ಡ ಸುದ್ದಿ ಮಾಡಿದ್ದಳು. ಸನ್ನಿಗೆ ಬಾಲಿವುಡ್ ಅವಕಾಶಗಳ ಹೆಬ್ಬಾಗಿಲನ್ನೇ ತೆರೆದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin