2017ನೇ ವರ್ಷದ ಸಾರ್ವತ್ರಿಕ ಸರ್ಕಾರಿ ರಜೆ ದಿನಗಳ ಅಧಿಕೃತ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Holiday-02

ಬೆಂಗಳೂರು, ನ.29-ರಾಜ್ಯಸರ್ಕಾರ 2017ನೆ ವರ್ಷದ ಸಾರ್ವತ್ರಿಕ ರಜಾ ಹಾಗೂ ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ.
22 ಸಾರ್ವತ್ರಿಕ ರಜಾ ದಿನ ಹಾಗೂ 17 ಪರಿಮಿತ ರಜಾ ದಿನಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.  ಭಾನುವಾರಗಳಂದು ಬರುವ ಏಪ್ರಿಲ್ 9ರ ಮಹಾವೀರ ಜಯಂತಿ, ಅ.1 ರಂದು ಬರುವ ಮೊಹರಂ ಕಡೇ ದಿನವನ್ನು ರಜಾ ದಿನಗಳ ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಸಾರ್ವತ್ರಿಕ ರಜಾ ದಿನಗಳಲ್ಲಿ ಸರ್ಕಾರಿ ಕಚೇರಿಗಳು ಮುಚ್ಚಿದ್ದರೂ ಜರೂರು ಕೆಲಸಗಳಿಗೆ ಆಯಾ ಇಲಾಖೆಯ ಮುಖ್ಯಸ್ಥರು ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಮುಸ್ಲಿಂ ಸಮುದಾಯದ ಹಬ್ಬಗಳು ನಿಗದಿಪಡಿಸಿದ ದಿನಾಂಕದಂದು ಆಚರಣೆಯಾಗದಿದ್ದರೆ ಬದಲಿ ಹಬ್ಬದ ರಜೆ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಕ್ಟೋಬರ್ 17 ರಂದು ನಡೆಯುವ ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 4 ರಂದು ಜರುಗುವ ಹುತ್ತರಿಹಬ್ಬ ಆಚರಣೆಯ ರಜೆಯನ್ನು ಕೊಡಗು ಜಿಲ್ಲೆಗೆ ಸೀಮಿತವಾಗಿ ಘೋಷಿಸಲಾಗಿದೆ.

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರತ್ಯೇಕವಾಗಿ ಪ್ರಕಟಿಸಿದ್ದಾರೆ. ಸರ್ಕಾರಿ ನೌಕರರು ಸಾರ್ವತ್ರಿಕ ರಜಾ ದಿನಗಳ ಜೊತೆಗೆ ಈ ಎರಡು ದಿನ ಪರಿಮಿತಿ ರಜೆ ಹಾಗೂ ಸಾಂದರ್ಭಿಕ ರಜೆಯನ್ನು ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯಬಹುದಾಗಿದೆ ಎಂದು ಉಲ್ಲೇಖಿಸಲಾಗಿದೆ. ನೂತನ ವರ್ಷಾರಂಭವಾದ ಜನವರಿ 1, ಮಧ್ವನವಮಿಯ ಫೆಬ್ರವರಿ 5, ಹೋಳಿಹಬ್ಬ ಮಾರ್ಚ್ 12, ಏ.30 ಶಂಕರಾಚಾರ್ಯ ಜಯಂತಿ, ಸೆ. 17ರ ವಿಶ್ವಕರ್ಮ ಜಯಂತಿ, ಡಿ.24ರ ಕ್ರಿಸ್‍ಮಸ್ ಈವ್ , ಏಪ್ರಿಲ್ 14ರ ಸೌರಮಾನ ಯುಗಾದಿ, ಮೇ 1 ರಂದು ರಾಮಾನುಜಾಚಾರ್ಯರ ಜಯಂತಿ ರಜೆ ಪಟ್ಟಿಯಲ್ಲಿ ಒಳಗೊಂಡಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಾರ್ವತ್ರಿಕ ರಜೆಗಳ ವಿವರ:

ಜ.14 ರಂದು ಉತ್ತರಾಯಣ ಪುಣ್ಯ ಕಾಲ ಸಂಕ್ರಾಂತಿ ಹಬ್ಬ, ಜ.26 ಗಣರಾಜ್ಯೋತ್ಸವ, ಫೆ.24 ಮಹಾ ಶಿವರಾತ್ರಿ, ಮಾ.29 ಚಂದ್ರಮಾನ ಯುಗಾದಿ, ಏ.14 ಶುಭ ಶುಕ್ರವಾರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಏ.29 ಬಸವ ಜಯಂತಿ, ಮೇ 1 ಕಾರ್ಮಿಕರ ದಿನಾಚರಣೆ, ಜೂ.26 ರಂಜಾನ್, ಆ.15 ಸ್ವಾತಂತ್ರ್ಯ ದಿನಾಚರಣೆ, ಆ.25 ವರಸಿದ್ಧಿ ವಿನಾಯಕ ವ್ರತ, ಸೆ.2 ಬಕ್ರೀದ್, ಸೆ.19 ಮಹಾಲಯ ಅಮಾವಾಸ್ಯೆ, ಸೆ.29 ಮಹಾನವಮಿ, ಆಯುಧಪೂಜೆ, ಸೆ.30 ವಿಜಯದಶಮಿ, ಅ.2 ಗಾಂಧಿಜಯಂತಿ, ಅ.5 ಮಹರ್ಷಿ ವಾಲ್ಮೀಕಿ ಜಯಂತಿ, ಅ.18 ನರಕ ಚತುರ್ದಶಿ, ಅ.20 ಬಲಿಪಾಡ್ಯಮಿ, ನ.1 ಕನ್ನಡ ರಾಜ್ಯೋತ್ಸವ, ನ.6 ಕನಕದಾಸ ಜಯಂತಿ, ಡಿ.1 ಈದ್‍ಮಿಲಾದ್, ಡಿ.25 ಕ್ರಿಸ್‍ಮಸ್ ರಜೆಗಳನ್ನು ಘೋಷಿಸಲಾಗಿದೆ.

ಪರಿಮಿತ ರಜೆಗಳು:

ಏ.1 ರಂದು ದೇವರದಾಸಿಮಯ್ಯ ಜಯಂತಿ, ಏ.5 ಶ್ರೀರಾಮನವಮಿ, ಏ.15 ಪವಿತ್ರ ಶನಿವಾರ, ಮೇ 10 ಬುದ್ಧ ಪೌರ್ಣಿಮೆ, ಮೇ 11 ಷಬ್-ಎ-ಬರಾತ್, ಜೂ.22 ಷಬ್-ಎ- ಖಾದರ್, ಜೂ.23 ಜಮತ್-ಉಲ್-ವಿದಾ, ಆ.4 ವರಮಹಾಲಕ್ಷ್ಮಿ ವ್ರತ, ಆ.14 ಕೃಷ್ಣ ಜನ್ಮಾಷ್ಟಮಿ, ಆ.24 ಸ್ವರ್ಣಗೌರಿ ವ್ರತ, ಸೆ.4 ತಿರು ಓಣಂ, ಸೆ.5 ಅನಂತಪದ್ಮನಾಭವ್ರತ, ಸೆ.6 ಯಜುರ್ ಉಪಾಕರ್ಮ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ, ಸೆ.8ಕನ್ಯ ಮಾರಿಯಮ್ಮ ಜಯಂತಿ, ಅ.17 ತುಲಾಸಂಕ್ರಮಣ, ನ.4 ಗುರುನಾನಕ್ ಜಯಂತಿ, ಡಿ.4 ಹುತ್ತರಿಹಬ್ಬದ ಪರಿಮಿತ ರಜಾ ದಿನಗಳನ್ನು ಘೋಷಿಸಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin