2017ರಲ್ಲಿ ರಾಜ್ಯ ಸರ್ಕಾರದ ಸಿಎಸ್ ಸುಭಾಷ್‍ಚಂದ್ರ ಕುಂಟಿಯಾ ಸೇರಿದಂತೆ 24 IAS, IPS ಅಧಿಕಾರಿಗಳ ನಿವೃತ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Subhash-Channdra-01

ಬೆಂಗಳೂರು, ಡಿ.9– ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಸುಭಾಷ್‍ಚಂದ್ರ ಕುಂಟಿಯಾ, ಡಿಜಿಪಿ ರೂಪ್‍ಕುಮಾರ್ ದತ್ತ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಸೇರಿದಂತೆ ಒಟ್ಟು 24 ಮಂದಿ ಐಎಎಸ್, ಐಪಿಎಸ್ ಹಾಗೂ ಐಎಫ್‍ಎಸ್ ಅಧಿಕಾರಿಗಳು 2017ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.  ಹಿರಿಯ ಐಎಎಸ್ ಅಧಿಕಾರಿಗಳಾದ ಶಂಭುದಯಾಳ್ ಮೀನ ಜ.31ರಂದು, ಭರತ್‍ಲಾಲ್ ಮೀನ ಫೆ.28ರಂದು, ಎಸ್.ಎಸ್.ಪಟ್ಟಣಶೆಟ್ಟಿ ಜು.31 ಹಾಗೂ ಆರ್.ಶ್ರೀಧರನ್ ಸೆ.30ರಂದು ನಿವೃತ್ತಿ ಹೊಂದಲಿದ್ದಾರೆ. ಸುಭಾಷ್‍ಚಂದ್ರ ಕುಂಟಿ ಅವರು 2017ರ ನ.30ರಂದು ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ.

ಸಿಬಿಐನ ಡಿಜಿಪಿ ರೂಪ್‍ಕುಮಾರ್ ದತ್ತ ಅ.31ರಂದು, ಡಿಜಿ ಮತ್ತು ಐಜಿಪಿ ಓಂಪ್ರಕಾಶ್ ಜ.31ರಂದು, ಡಿಜಿಪಿ ಎಚ್.ಎನ್.ಸತ್ಯನಾರಾಯಣರಾವ್, ಐಜಿ ಪಿ.ಎಚ್.ರಾಣೆ ಜು.31ರಂದು, ಎಡಿಜಿಪಿ ಕೆ.ಬಿ.ಗಗನ್‍ದೀಪ್, ಐಜಿಪಿ ಬಿ.ಎನ್.ಎಸ್.ರೆಡ್ಡಿಯವರು ಡಿ.31ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ಡಿಐಜಿ ಟಿ.ಜಿ.ಕೃಷ್ಣಭಟ್ ನ.30ರಂದು ಸೇವೆಯಿಂದ ವಯೋನಿವೃತ್ತಿ ಹೊಂದಲಿದ್ದಾರೆ. ಹಿರಿಯ ಐಎಫ್‍ಎಸ್ ಅಧಿಕಾರಿಗಳಾದ ಆರ್.ಎಸ್.ಸುರೇಶ್, ಎನ್.ದೇವರಾಜ್, ಏ.30ರಂದು, ಬಿ.ಜೆ.ಹೊಸ್ಮಠ್, ಬಿ.ಬಿ.ಮಲ್ಲೇಶ್ ಮೇ 31ರಂದು, ಕೆ.ಎಸ್.ಸುಗಾರ ಡಿ.31ರಂದು, ಪಿ.ಆರುಣ್‍ರೆಡ್ಡಿ ಜು.31, ಗುಡಿಪೇಟಿ ವಿದ್ಯಾಸಾಗರ್, ಡಾ.ಟಿ.ವಿ.ಮೋಹನ್‍ರಾಜ್ ನ.30ರಂದು ನಿವೃತ್ತಿ ಹೊಂದಲಿದ್ದಾರೆ.  ಎಂ.ಎಸ್.ಗೌಡರ್ ಮಾ.31ರಂದು, ಡಾ.ಉದಯ್‍ವೀರ್‍ಸಿಂಗ್ ಸೆ.30ರಂದು, ನಾಗರಾಜ ಜು.31ರಂದು, ಎ.ಸಿ.ಕೇಶವಮೂರ್ತಿ ಜೂ.30ರಂದು ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin