2018ರಲ್ಲಿ ಕೊಹ್ಲಿಗೆ ಅಗ್ನಿಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

kohli

ನವದೆಹಲಿ, ಡಿ.28 -ಮೂರು ಡಬ್ಬಲ್ ಸೆಂಚುರಿ, ಒಂಭತ್ತು ಸತತ ಸರಣಿ ಗೆಲುವು, ಸ್ವದೇಶದಲ್ಲಿ ರನ್‍ಗಳ ಮಳೆ ಆರ್ಭಟ, ಸಚಿನ್‍ತೆಂಡೂಲ್ಕರ್, ರಿಕ್ಕಿ ಪಾಂಟಿಂಗ್ ಮಾಡಿದ್ದ ದಾಖಲೆಗಳ ಬ್ರೇಕ್, ವಿವಾಹದ ಸಂಭ್ರಮ ಮುಂತಾದ ಸುದ್ದಿಗಳಿಂದ 2017 ವರ್ಷಪೂರ್ತಿ ಚಾಲ್ತಿಯಲ್ಲಿದ್ದ ವಿರಾಟ್ ಕೊಹ್ಲಿಗೆ 2018ನೆ ವರ್ಷ ನಿಜಕ್ಕೂ ಅಗ್ನಿಪರೀಕ್ಷೆಯಾಗಿದೆ. ಕ್ಯೂಲ್‍ಕ್ಯಾಪ್ಟನ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ ನಂತರ ತಂಡದ ನಾಯಕತ್ವವನ್ನು ವಹಿಸಿಕೊಂಡ 29ರ ಪ್ರಾಯದ ವಿರಾಟ್ ಕೊಹ್ಲಿ ವೆಸ್ಟ್‍ಇಂಡೀಸ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಶ್ರೀಲಂಕಾ, ಬಾಂಗ್ಲಾದೇಶಗಳ ವಿರುದ್ಧ ಅದ್ಭುತಪೂರ್ವ ಗೆಲುವು ಸಾಧಿಸಿರುವ ಜೋಶ್‍ನಲ್ಲಿದ್ದರೂ ಕೂಡ ಕೊಹ್ಲಿ 2018 ವರ್ಷದ ಆರಂಭದಿಂದಲೇ ಪ್ರಮುಖ ಮೂರು ಚಾಲೆಂಜ್‍ಗಳನ್ನು ಎದುರಿಸಲೇಬೇಕಾಗಿದೆ.

ದಕ್ಷಿಣ ಆಫ್ರಿಕಾದ ಚಾಲೆಂಜ್:
ವಿಶ್ವ ಕ್ರಿಕೆಟ್ ಆಡುವ ಎಲ್ಲಾ ತಂಡಗಳ ವಿರುದ್ಧವೂ ಅಭೂತಪೂರ್ವ ಪ್ರದರ್ಶನ ತೋರುವ ಟೀಂ ಇಂಡಿಯಾಗೆ ದಕ್ಷಿಣ ಆಫ್ರಿಕಾ ಪ್ರವಾಸ ಚಾಲೆಂಜ್ ನಿಜಕ್ಕೂ ದೊಡ್ಡದು. ಏಕೆಂದರೆ ವಿಶ್ವಕಪ್‍ನಲ್ಲಿ ಬಿಟ್ಟರೆ ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ ಭಾರತ ತಂಡವು 6 ಬಾರಿ ಸರಣಿ ಕೈಗೊಂಡರೂ ಕೂಡ ಒಂದು ಬಾರಿಯು ಭಾರತ ಸರಣಿ ಗೆಲುವು ಸಾಧಿಸಿಲ್ಲ. ಆದರೆ ಈ ಬಾರಿ ಕೊಹ್ಲಿ ಪಡೆಯಲ್ಲಿ ಚೇತೇಶ್ವರ್ ಪೂಜಾರ, ಮುರಳಿ ವಿಜಯ್, ಶಿಖರ್ ಧವನ್, ರೋಹಿತ್‍ಶರ್ಮಾ, ಕೆ.ಎಲ್.ರಾಹುಲ್‍ರಂತಹ ಘಟಾನುಘಟಿ ಬ್ಯಾಟ್ಸ್‍ಮನ್‍ಗಳು, ಅನುಭವಿ ಸ್ಪಿನ್ನರ್‍ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರಾ ಜಾಡೇಜಾ ಅವರು ತಂಡದಲ್ಲಿರುವುದರಿಂದ ಭಾರತ ಈ ಬಾರಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಸರಣಿ ಗೆಲ್ಲುವ ಉತ್ಸಾಹದಿಂದಿದೆ.  ಆದರೆ ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಆಶೀಮ್ ಆಮ್ಲಾ , ಎಬಿಡಿ ಡಿವಿಲಿಯರ್ಸ್, ಡಿ ಕಾಕ್, ಡ್ಲುಪಿಸಸ್‍ರ ರನ್ ವೇಗಕ್ಕೆ ಬೌಲರ್‍ಗಳು ಹೇಗೆ ಬ್ರೇಕ್ ಹಾಕುತ್ತಾರೆ, ಅನುಭವಿ ಬೌಲರ್‍ಗಳಾದ ಡೇನ್ ಸ್ಟೇನ್, ಮಾರ್ಕಲ್‍ರ ಬೌಲಿಂಗ್‍ನಲ್ಲಿ ಹೇಗೆ ಎದುರಿಸುತ್ತಾರೆ ಎಂಬುದರ ಮೇಲೆ ತಂಡದ ಫಲಿತಾಂಶ ನಿಂತಿದೆ.

ಸ್ಮಿತ್- ರೂಟ್‍ರ ಬ್ಯಾಟಿಂಗ್ ಸಮರ:
ವಿಶ್ವದಲ್ಲೇ ಅತ್ಯಂತ ಕಿರಿಯ ಅದ್ಭುತ ನಾಯಕ ಎಂಬ ಕೀರ್ತಿ ಗಳಿಸಿರುವ ವಿರಾಟ್ ಕೊಹ್ಲಿ , ಶ್ರೀಲಂಕಾ ಸರಣಿಗೂ ಮುನ್ನ ಏಕದಿನ ಹಾಗೂ ಟ್ವೆಂಟಿ-20 ಯಲ್ಲಿ ನಂಬರ್ 1 ಆಟಗಾರನಾಗಿ ಗುರುತಿಸಿಕೊಂಡಿದ್ದರು. ಆದರೆ ಇವರಿಗೆ ಇಂಗ್ಲೆಂಡ್‍ನ ನಾಯಕ ರೂಟ್ ಹಾಗೂ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪೈಪೆÇೀಟಿ ನೀಡುತ್ತಿರುವುದರಿಂದ 2018ರಲ್ಲಿ ನಂಬರ್ 1 ನಾಯಕನಾಗಿ ಹೊರಹೊಮ್ಮಲು ಈ ಇಬ್ಬರ ನಡುವಿನ ಬ್ಯಾಟಿಂಗ್ ಸಮರವನ್ನು ಸವಾಲಾಗಿ ಸ್ವೀಕರಿಸಲೇಬೇಕು.

ಇಂಗ್ಲೆಂಡ್ ಪ್ರವಾಸ:
2017ರಲ್ಲಿ ಬಹುತೇಕ ಸ್ವದೇಶದಲ್ಲೇ ಹೆಚ್ಚು ಪಂದ್ಯಗಳನ್ನು ಆಡಿರುವ ಕೊಹ್ಲಿ ಮುಂಬರುವ ವರ್ಷದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾತ್ರವಲ್ಲದೆ, ಆಗಸ್ಟ್‍ನಲ್ಲಿ ನಡೆಯಲಿರುವ ಇಂಗ್ಲೆಂಡ್ ಸರಣಿಯಲ್ಲೂ ತನ್ನ ಬ್ಯಾಟಿಂಗ್ ವೈಭವವನ್ನು ಮರೆಯಬೇಕಾದ ಛಾಲೆಂಜ್ ಅನ್ನು ಸ್ವೀಕರಿಸಬೇಕಿದೆ. ಕಳೆದ ಬಾರಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 13.4 ಸರಾಸರಿಯಲ್ಲಿ ಕೇವಲ 39 ರನ್ ಗಳಿಸಿ ಅಭಿಮಾನಿಗಳನ್ನು ನಿರಾಸೆ ಗೊಳಿಸಿದರು. ಆದರೆ 2018ರ ಪ್ರವಾಸದಲ್ಲಿ ವಿರಾಟ್ ಇಂಗ್ಲೆಂಡ್ ವಿರುದ್ಧ ರನ್‍ಗಳ ಹೊಳೆಯನ್ನೇ ಹರಿಸಬೇಕಾಗಿದೆ. ಇಷ್ಟೇ ಅಲ್ಲದೆ 2019ರಲ್ಲಿ ಇಂಗ್ಲೆಂಡ್‍ನಲ್ಲೇ ನಡೆಯುವ ಸೀಮಿತ ಓವರ್‍ಗಳ ವಿಶ್ವಕಪ್‍ಗಾಗಿ ತಂಡವನ್ನು ಸದೃಢಗೊಳಿಸಬೇಕಾಗುವ ಅಗ್ನಿಪರೀಕ್ಷೆಯನ್ನು ಕೂಡ ವಿರಾಟ್ ಕೊಹ್ಲಿ ಎದುರಿಸಬೇಕಾಗಿದೆ.

Facebook Comments

Sri Raghav

Admin