2018ರಲ್ಲಿ ಭಾರತದ ಜಿಡಿಪಿ ಶೇ.7.7ರಷ್ಟು ಜಿಡಿಪಿ ಪ್ರಗತಿ

ಈ ಸುದ್ದಿಯನ್ನು ಶೇರ್ ಮಾಡಿ

GDP--01

ನವದೆಹಲಿ, ಏ.1-ಭಾರತದ ಜಿಡಿಪಿ (ದೇಶಿಯ ಒಟ್ಟು ಉತ್ಪನ್ನ) ಪ್ರಗತಿಯು 2018ರಲ್ಲಿ ಶೇ.7.7ರಷ್ಟು ಬೆಳವಣಿಗೆ ಸಾಧಿಸಲಿದೆ ಎಂಬ ಆಶಾಭಾವನೆ ಹೊಂದಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಹೊರಹೊಮ್ಮುತ್ತಿರುವ ಮಾರುಕಟ್ಟೆಗಳು ಹೊಸ ಸವಾಲುಗಳನ್ನು ಎದುರಿಸುತ್ತಿವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.   ರಾಜಧಾನಿಯಲ್ಲಿ ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನ(ಎನ್‍ಡಿಬಿ) ಎರಡನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಜಾಗತಿಕ ಬೆಳವಣಿಗೆಯು ಮೇಲ್ಮುಖವಾಗಿ ಏರುತ್ತಿದ್ದು, ಇದು ಭಾರತಕ್ಕೆ ಪೂರಕವಾಗಿದೆ. 2017-18ನೇ ಸಾಲಿನಲ್ಲಿ ಅದು ಮತ್ತಷ್ಟು ಸುಧಾರಣೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

2017ರಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇ.7.2ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆ ಇದೆ ಹಾಗೂ 2018ರಲ್ಲಿ ಇದು ಶೇ.7.7ರಷ್ಟು ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.   ಹೊರ ಹೊಮ್ಮುತ್ತಿರುವ ಮಾರುಕಟ್ಟೆ ಆರ್ಥಿಕತೆಗಳು (ಇಎಂಇಗಳು) ಹೊಸ ಸವಾಲುಗಳನ್ನು ಎದುರಿಸುತ್ತಿವೆ. ಕೆಲವು ವಿತ್ತೀಯ ರಕ್ಷಣಾ ಕ್ರಮಗಳು, ಜಾಗತಿಕ ಹಣಕಾಸು ಸ್ಥಿತಿಗಳು, ಅಮೆರಿಕದ ಹೊಸ ನೀತಿಗಳು ಹಾಗೂ ಭೌಗೋಳಿಕ-ರಾಜಕೀಯ ಉದ್ವಿಗ್ನತೆಗೆಳ ರೂಪದಲ್ಲಿ ಹೊಸ ಸವಾಲುಗಳು ಎದುರಾಗಿವೆ ಎಂದು ಜೇಟ್ಲಿ ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin